ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 24,214 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 476 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 5,949 ಜನರಿಗೆ ಸೋಂಕು ಖಚಿತವಾಗಿದ್ದು, 273 ಜನರು ಮೃತಪಟ್ಟಿದ್ದಾರೆ. ಸದ್ಯ ರಾಜ್ಯದಾದ್ಯಂತ 4,02,203 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಇಂದು ಒಂದೇ ದಿನ 31,459 ಜನರು ಕೊವಿಡ್ನಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ.
ಬೆಂಗಳೂರು ನಗರ 5,949, ಮೈಸೂರು 2,240, ಹಾಸನ 1,505, ತುಮಕೂರು 1,219, ಬೆಳಗಾವಿ 1,147, ಉಡುಪಿ 905, ಶಿವಮೊಗ್ಗ 822, ದಾವಣಗೆರೆ 806, ಮಂಡ್ಯ 755, ಬಳ್ಳಾರಿ 725, ಚಿಕ್ಕಮಗಳೂರು 715, ಚಿತ್ರದುರ್ಗ 710, ಧಾರವಾಡ 678, ಉತ್ತರ ಕನ್ನಡ ಜಿಲ್ಲೆಯಲ್ಲಿ 659, ಬೆಂಗಳೂರು ಗ್ರಾಮಾಂತರ 623, ಕೋಲಾರ 591, ದಕ್ಷಿಣ ಕನ್ನಡ 555, ಕೊಪ್ಪಳ 495, ರಾಯಚೂರು 445, ಚಾಮರಾಜನಗರ 380, ಗದಗ 370, ಕೊಡಗು 33, ವಿಜಯಪುರ 306, ರಾಮನಗರ 263, ಚಿಕ್ಕಬಳ್ಳಾಪುರ 238, ಬಾಗಲಕೋಟೆ 214, ಯಾದಗಿರಿ 190, ಹಾವೇರಿ 159, ಕಲಬುರಗಿ 153, ಬೀದರ್ ಜಿಲ್ಲೆಯಲ್ಲಿ 60 ಕೊವಿಡ್ ಸೋಮಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಮೃತರ ವಿವರ
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 476 ಜನರ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆ 273, ಬಳ್ಳಾರಿ ಜಿಲ್ಲೆ 22, ಮೈಸೂರು ಜಿಲ್ಲೆ 18, ಬೆಳಗಾವಿ, ಧಾರವಾಡ ಜಿಲ್ಲೆ 15, ತುಮಕೂರು ಜಿಲ್ಲೆ 14, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ ಜಿಲ್ಲೆ 13, ಚಿಕ್ಕಬಳ್ಳಾಪುರ ಜಿಲ್ಲೆ 11, ಚಾಮರಾಜನಗರ ಜಿಲ್ಲೆ 9, ಶಿವಮೊಗ್ಗ, ಹಾಸನ ಜಿಲ್ಲೆ 7, ಯಾದಗಿರಿ, ಕಲಬುರಗಿ, ಗದಗ, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆ ತಲಾ ಐವರು, ವಿಜಯಪುರ, ಮಂಡ್ಯ, ಹಾವೇರಿ ಜಿಲ್ಲೆ ತಲಾ ನಾಲ್ವರು, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು ಜಿಲ್ಲೆ ಮೂವರು, ಬಾಗಲಕೋಟೆ, ದಾವಣಗೆರೆ, ಉಡುಪಿ, ಬೀದರ್ ಜಿಲ್ಲೆ ತಲಾ ಇಬ್ಬರು, ಚಿಕ್ಕಮಗಳೂರು, ರಾಮನಗರ ಜಿಲ್ಲೆ ತಲಾ ಓರ್ವ ಕೊವಿಡ್ನಿಂದ ನಿಧನರಾಗಿದ್ದಾರೆ. ಈಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 27,405 ಜನರು ಸಾವನ್ನಪ್ಪಿದಂತಾಗಿದೆ.
ಇದನ್ನೂ ಓದಿ: ಸೋಮವಾರದೊಳಗೆ ಕಟ್ಟಡ ಕಾರ್ಮಿಕರಿಗೆ ತಲುಪಲಿದೆ ಕೊವಿಡ್ ಪ್ಯಾಕೇಜ್: ಸಚಿವ ಶಿವರಾಮ್ ಹೆಬ್ಬಾರ್
Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ
(Karnataka Covid Update 24214 new cases in Karnataka 5949 in Bengaluru)
Published On - 8:18 pm, Thu, 27 May 21