Crime News: ಮನೆ ಮುಂದೆ ನಿಲ್ಲಿಸಿದ್ದ ಬೈಕ್ನಿಂದ ಪೆಟ್ರೋಲ್ ಕಳ್ಳತನ ಮಾಡಿದ ನಾಲ್ವರು ಆರೋಪಿಗಳು ಅರೆಸ್ಟ್
ಮೇ 1ರ ಬೆಳಗಿನ ಜಾವ ಬೈಕ್ಗಳಿಂದ ಪೆಟ್ರೋಲ್ ಕದ್ದಿದ್ದರು. ಈ ಬಗ್ಗೆ ಮೇ 2ರಂದು ಠಾಣೆಯಲ್ಲಿ ಯಲ್ಲಪ್ಪ ಚೋಳಚಗುಡ್ಡ ದೂರು ದಾಖಲಿಸಿದ್ರು. ಪೆಟ್ರೋಲ್ ಕದಿಯುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ನವನಗರ ಪೊಲೀಸರು ಆರೋಪಿಗಳಿಂದ ಒಂದು ಬೈಕ್ ಜಪ್ತಿ ಮಾಡಿದ್ದಾರೆ.
ಬಾಗಲಕೋಟೆ: ಮನೆ ಮುಂದೆ ನಿಲ್ಲಿಸಿದ್ದ ಬೈಕ್ನಿಂದ ಪೆಟ್ರೋಲ್ ಕಳ್ಳತನ ಮಾಡಿದ ಖದೀಮರನ್ನು ಬಾಗಲಕೋಟೆಯ ನವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಹುಲಿಗೆಪ್ಪ ಪಾತ್ರೋಟ್(25), ಆರೀಫ್ ಬೇಪಾರಿ(20), ಗೋಪಾಲ ಗಾವರವಾಡ(23), ಸಮೀರ್ ಚಿಮ್ಮಲಗಿ(20) ಬಂಧಿತ ಆರೋಪಿಗಳು. ಮೇ 1ರ ಬೆಳಗಿನ ಜಾವ ಬೈಕ್ಗಳಿಂದ ಪೆಟ್ರೋಲ್ ಕದ್ದಿದ್ದರು. ಈ ಬಗ್ಗೆ ಮೇ 2ರಂದು ಠಾಣೆಯಲ್ಲಿ ಯಲ್ಲಪ್ಪ ಚೋಳಚಗುಡ್ಡ ದೂರು ದಾಖಲಿಸಿದ್ರು. ಪೆಟ್ರೋಲ್ ಕದಿಯುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ನವನಗರ ಪೊಲೀಸರು ಆರೋಪಿಗಳಿಂದ ಒಂದು ಬೈಕ್ ಜಪ್ತಿ ಮಾಡಿದ್ದಾರೆ.
ಪೆಟ್ರೋಲ್ ಸುರಿದು ಹನುಮಂತಪ್ಪ(50) ಹತ್ಯೆಗೆ ಯತ್ನ ಜಮೀನು ವಿವಾದ ಹಿನ್ನೆಲೆ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಗರಗ ಗ್ರಾಮದ ಸಮೀಪ ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು ಪೆಟ್ರೋಲ್ ಸುರಿದು ಹನುಮಂತಪ್ಪ(50) ಹತ್ಯೆಗೆ ಯತ್ನಿಸಲಾಗಿದೆ. ಜಮೀನಿಗೆ ತೆರಳಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗರಗ ನಿವಾಸಿ ಗಂಗಾಧರ, ಲಕ್ಷ್ಮಣ ಎಂಬುವರ ವಿರುದ್ಧ ಆರೋಪ ಕೇಳಿ ಬಂದಿದೆ. ಗಾಯಾಳು ಹನುಮಂತಪ್ಪ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಾಧರ, ಲಕ್ಷ್ಮಣ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಶ್ರೀರಾಂಪುರ ಪೊಲೀಸ್ ಠಾಣೆ ಮುಂದೆ ಸಂಬಂಧಿಕರು ಧರಣಿ ನಡೆಸುತ್ತಿದ್ದಾರೆ.
ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿ ಯುವಕನಿಂದ ವಿಕೃತಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿ ಯುವಕ ವಿಕೃತಿ ಮೆರೆದಿದ್ದು ಆರೋಪಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೆರವಣಿಗೆ ನಡೆಯುತ್ತಿತ್ತು. ನಿನ್ನೆ ರಾತ್ರಿ ಮೆರವಣಿಗೆ ವೇಳೆ ಯುವಕ ಚಪ್ಪಲಿ ತೂರಿ ವಿಕೃತಿ ಮೆರೆದಿದ್ದಾನೆ. ಹೀಗಾಗಿ ಆರೋಪಿ ಖಾಜಾಮುದ್ದೀನ್ ಕೋಲ್ಕಾರಗೆ(29) ಗ್ರಾಮಸ್ಥರು ಕಟ್ಟಿಹಾಕಿ ಥಳಿಸಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ತಲೆಗೆ ಗಾಯವಾಗಿದ್ದು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸವಣೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರಿನಲ್ಲಿ ಬೈಕ್ ಕಳ್ಳರು ಅರೆಸ್ಟ್ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ನಲ್ಲಿ ಅನುಮಾನಾಸ್ಪದವಾಗಿ ಓಡಾಡೋವಾಗ ಬೈಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಮುದಗಲ್ ಪೊಲೀಸರು ಓರ್ವ ಬಾಲಾಪರಾಧಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ಅಪ್ಪಾಜಿ ಹಾಗೂ ಬಾಲಾಪರಾಧಿಯಿಂದ ಕಳ್ಳತನ ನಡೆದಿತ್ತು. ಮುದಗಲ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡೋದನ್ನು ಕಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಬೈಕ್ ಕಳ್ಳರು ಅನ್ನೋದು ದೃಢವಾಗಿದೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ ಒಟ್ಟು 6 ಬೈಕ್ ಜಪ್ತಿ ಮಾಡಲಾಗಿದೆ. ಸಾಮೂಹಿಕ ವಿವಾಹಗಳಿಗೆ ತೆರಳಿ ಆರೋಪಿಗಳು ಬೈಕ್ ಕದಿಯುತ್ತಿದ್ದರು. ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಸ್ತೆ ಅಪಘಾತದಲ್ಲಿ ನರಳಾಡಿ ಜೀವ ಬಿಟ್ಟ ಬೈಕ್ ಸವಾರರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕಣಿವೇನಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಬೈಕ್ ಸವಾರರು ನರಳಾಡಿ ಜೀವ ಬಿಟ್ಟಿದ್ದಾರೆ. ರಾಂಗ್ ಸೈಡ್ನಲ್ಲಿ ಬಂದು ಟಾಟಾ ಏಸ್ಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ಪರಿಣಾಮ ರಾಮಗಿರಿ ಮೂಲದ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಡಿಕ್ಕಿ ಬಳಿಕ ವಾಹನ ಓರ್ವನನ್ನು 200 ಮೀ. ದೂರ ಎಳೆದುತಂದಿದೆ. ಬಳಿಕ ಕೆಲಕಾಲ ರಸ್ತೆಯಲ್ಲೇ ನರಳಾಡಿ ಸವಾರ ಕೊನೆಯುಸಿರೆಳೆದಿದ್ದಾನೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 9:32 am, Wed, 4 May 22