AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್: ತಮಿಳುನಾಡಿನಲ್ಲಿ ಇನ್ನೆರಡು ಸೈಟ್‌ಗಳನ್ನ ಪತ್ತೆಹಚ್ಚಿದ ಕರ್ನಾಟಕ ಸೈಬರ್ ಕಮಾಂಡ್

ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದಲ್ಲಿ ನಡೆಯುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ಜಾಲವನ್ನು ಸೈಬರ್ ಕಮಾಂಡ್ ಪೊಲೀಸರು ಭೇದಿಸಿ ನಾಲ್ವರನ್ನು ಅರೆಸ್ಟ್ ಮಾಡಿ ತನಿಖೆ ತೀವ್ರಗೊಳಿಸಿದ್ದಾರೆ. ಇದೀಗ ರಾಜ್ಯ ಪೊಲೀಸ್ ಸೈಬರ್ ಕಮಾಂಡ್ ಘಟಕವು ಇನ್ನೂ ಎರಡು ಅಂತಾರಾಜ್ಯ ಜಾಲಗಳನ್ನು ಬಯಲಿಗೆಳೆದಿದೆ. ಏನಿದು ಸಿಮ್ ಬಾಕ್ಸ್ ನೆಟ್‌ವರ್ಕ್? ಎನ್ನುವ ಡಿಟೇಲ್ಸ್ ಇಲ್ಲಿದೆ.

ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್: ತಮಿಳುನಾಡಿನಲ್ಲಿ ಇನ್ನೆರಡು ಸೈಟ್‌ಗಳನ್ನ ಪತ್ತೆಹಚ್ಚಿದ ಕರ್ನಾಟಕ ಸೈಬರ್ ಕಮಾಂಡ್
ಪ್ರಾತಿನಿಧಿಕ ಚಿತ್ರ
ವಿಕಾಸ್​ ಬಿಎಂ
| Edited By: |

Updated on:Oct 27, 2026 | 8:44 PM

Share

​ಬೆಂಗಳೂರು, (ಅಕ್ಟೋಬರ್ 27): ಬೆಂಗಳೂರಿನ ಕಾಡುಗೋಡಿ ಮತ್ತು ಪಟ್ಟಂದೂರು ಅಗ್ರಹಾರದ ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಜ್ಯ ಪೊಲೀಸ್ ಸೈಬರ್ ಕಮಾಂಡ್ ಘಟಕವು ಇನ್ನೂ ಎರಡು ಅಂತಾರಾಜ್ಯ ಜಾಲಗಳನ್ನು ಬಯಲಿಗೆಳೆದಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ತನಿಖೆಯ ವೇಳೆ ದೊರೆತ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತಮಿಳುನಾಡಿನ ತಿರುಚ್ಚಿ ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ನೂ ಎರಡು ಸಿಮ್ ಫಾರ್ಮ್‌ ತಾಣಗಳನ್ನು ಪತ್ತೆ ಹಚ್ಚಿದೆ.

ತಮಿಳುನಾಡಿನಲ್ಲೂ ಜಾಲ ಪತ್ತೆ

ವೈಟ್‌ಫೀಲ್ಡ್ ವಿಭಾಗದ ಪಟ್ಟಂದೂರು ಅಗ್ರಹಾರ ಹಾಗೂ ಕಾಡುಗೋಡಿ ಠಾಣೆಗಳ ವ್ಯಾಪ್ತಿಯಲ್ಲಿನ ಎರಡು ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ಜಾಲದ ಮೇಲೆ ದಾಳಿ ನಡೆಸಿದ್ದ ಸೈಬರ್ ಕಮ್ಯಾಂಡ್ ಘಟಕದ ಸಿಬ್ಬಂದಿ ಒಟ್ಟು 10 ಸಿಮ್ ಬಾಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು. ವಶಕ್ಕೆ ಪಡೆಯಲಾಗಿದ್ದ ಉಪಕರಣಗಳು, ದೂರಸಂಪರ್ಕ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ತಾಂತ್ರಿಕ ಆಧಾರದ ಮೇಲೆ ಕಾರ್ಯಾಚರಣೆ ಮಾಡಿದಾಗ ತಮಿಳುನಾಡಿನಲ್ಲೂ ಜಾಲ ಪತ್ತೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸೈಬರ್ ಜಾಲ ಭೇದಿಸಿದ ಕರ್ನಾಟಕ ಸೈಬರ್ ಕಮಾಂಡ್: ಡಿಜಿಟಲ್ ಅರೆಸ್ಟ್, ಲೈಂಗಿಕ ಬೆದರಿಕೆಗೆ ಬಳಸುತ್ತಿದ್ದ ಅಕ್ರಮ ಸಿಮ್ ಬಾಕ್ಸ್ ವಶಕ್ಕೆ

ದೂರಸಂಪರ್ಕ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 10 ಇ – ಸಿಮ್ ಸೌಲಭ್ಯ ಇರುವ ಸಿಮ್ ಬಾಕ್ಸ್ ಸಾಧನಗಳನ್ನ ವಶಕ್ಕೆ ಪಡೆಯಲಾಗಿದೆ . ದೇಶದ ಹಲವು ಭಾಗಗಳಿಗೆ ಜಾಲ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಸೈಬರ್ ಕಮಾಂಡ್ ತಂಡ ತನಿಖೆ ಮುಂದುವರಿಸಿದೆ‌.

ಸಿಮ್ ಬಾಕ್ಸ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?

ಸಿಮ್ ಬಾಕ್ಸ್ ಎಂಬುದು ಬಹು ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಾಧನವಾಗಿದೆ. ವಿದೇಶಗಳಿಂದ ಬರುವ ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಂತೆ ಬಿಂಬಿಸಿ ರೂಟ್ ಮಾಡಲು ವಂಚಕರು ಇದನ್ನು ಬಳಸುತ್ತಾರೆ. ತನಿಖೆಯ ಪ್ರಕಾರ, ಕಾಡುಗೋಡಿ ಹಾಗೂ ವೈಟ್‌ಫೀಲ್ಡ್‌ನಲ್ಲಿ ಈ ಜಾಲವನ್ನು ನಡೆಸಲಾಗುತ್ತಿತ್ತು. ಕಾಡುಗೋಡಿಯಲ್ಲಿ ತಲಾ 32 ಸಿಮ್ ಸ್ಲಾಟ್‌ಗಳಿರುವ 6 ಸಾಧನಗಳು (ಒಟ್ಟು 192 ಸಿಮ್ ಸ್ಲಾಟ್‌ಗಳು) ಹಾಗೂ ವಿವಿಧ ಸೇವಾ ಪೂರೈಕೆದಾರರ ಇ-ಸಿಮ್ ಸಂಪರ್ಕಗಳು ಪತ್ತೆಯಾಗಿವೆ. ಇನ್ನುಳಿದ ಸ್ಥಳದಲ್ಲಿ ಒಟ್ಟು 128 ಸಿಮ್ ಸ್ಲಾಟ್‌ಗಳಿರುವ 4 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Tue, 27 October 26

Follow Us
ವಿಕಾಸ್​ ಬಿಎಂ
ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
99 ಲಕ್ಷ ವೋಟ್ ಡಿಲೀಟ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
‘ಸೌಂದರ್ಯಾ ಸ್ವಯಂವರ’ದಲ್ಲಿ ನಗುವೋ ನಗು: ವಿಡಿಯೋ ನೋಡಿ
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
ಧನ್ವೀರ್ ಮೇಲೆ ಇಡಿ, ಐಟಿ ಇಲಾಖೆಗೆ ಕೇಸ್ ಹಾಕಿದ್ದು ಯಾಕೆ? ವಿವರಿಸಿದ ಲಾಯರ್
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!