Karnataka Dam Water Level: ಆ.31ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಕರ್ನಾಟಕದ ಜಲಾಶಯಗಳ ಆಗಸ್ಟ್ 31ರ ನೀರಿನ ಮಟ್ಟ: ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಎಷ್ಟಿದೆ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dam Water Level: ಆ.31ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ತುಂಗಭದ್ರಾ ಜಲಾಶಯ
Follow us
ಆಯೇಷಾ ಬಾನು
|

Updated on: Aug 31, 2023 | 7:02 AM

ಈ ವರ್ಷ ಮುಂಗಾರು(Monsoon) ಮಳೆ ಭಾರೀ ಹೊಡೆತ ಕೊಟ್ಟಿದೆ. ವಾಡಿಕೆಯಷ್ಟು ಮಳೆ ಬಿದ್ದಿಲ್ಲ. ಆಗಸ್ಟ್‌ ತಿಂಗಳು ಮುಗಿಯುತ್ತಿದ್ದರೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಿಲ್ಲ(Karnataka Rain). ಇದರಿಂದ ಬರದ ಛಾಯೆ ಮುಂದುವರೆದಿದೆ. ರಾಜ್ಯದಲ್ಲಿ ಬರದ ಭೀತಿ ನಡುವೆಯೂ ಈಗಾಗಲೇ ಕರ್ನಾಟಕ ತಮಿಳುನಾಡಿಗೆ 1900 ಕ್ಯೂಸೆಕ್‌ ನೀರು ಹರಿಸುತ್ತಿದೆ. ಆದರೆ ಆಗಸ್ಟ್ 29ರಂದು ನಡೆದ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ಹೆಚ್ಚುವರಿಯಾಗಿ 3,100 ಕ್ಯೂಸೆಕ್ಸ್​ ನೀರು ಹರಿಸಬೇಕೆಂದು ರಾಜ್ಯಕ್ಕೆ ಸೂಚಿಸಿದೆ. ಹೀಗಾಗಿ ಈಗಾಗಲೇ ಆತಂಕದ ಅಂಚಿನಲ್ಲಿರುವ ಕೆಆರ್​ಎಸ್​ ಡ್ಯಾಂನಲ್ಲಿ(KRS Dam) ನೀರಿನ ಪ್ರಮಾಣ ಮತ್ತಷ್ಟು ಕ್ಷೀಣಿಸುವ ಆತಂಕ ಎದುರಾಗಿದೆ. ಹಾಗಾದರೆ ಆಗಸ್ಟ್‌ 31 ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್​​) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.6 123.08 121.78 123.08 0 827
ತುಂಗಭದ್ರಾ ಜಲಾಶಯ (Tungabhadra Dam) 497.71 105.79 77.80 104.62 0 8062
ಮಲಪ್ರಭಾ ಜಲಾಶಯ (Malaprabha Dam) 633.80 37.73 22.70 37.03 0 1594
ಕೆ.ಆರ್.ಎಸ್ (KRS Dam) 38.04 49.45 24.08 48.23 2300 4448
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 70.65 135.81 1549 8049
ಕಬಿನಿ ಜಲಾಶಯ (Kabini Dam) 696.13 19.52 13.66 19.13 2594 2000
ಭದ್ರಾ ಜಲಾಶಯ (Bhadra Dam) 657.73 71.54 47.19 70.36 352 3222
ಘಟಪ್ರಭಾ ಜಲಾಶಯ (Ghataprabha Dam) 662.91 51.00 41.07 51.00 807 1085
ಹೇಮಾವತಿ ಜಲಾಶಯ (Hemavathi Dam) 890.58 37.10 25.27 36.74 951 6025
ವರಾಹಿ ಜಲಾಶಯ (Varahi Dam) 594.36 31.10 9.88 21.23 169 649
ಹಾರಂಗಿ ಜಲಾಶಯ (Harangi Dam)​​ 871.38 8.50 7.69 7.66 208 1700
ಸೂಫಾ (Supa Dam) 564.00 145.33 78.42 92.34 2481 5271

ಆಗಸ್ಟ್‌ನಲ್ಲಿ ಒಟ್ಟಾರೆ 25,9 ಸೆಂ.ಮೀ. ಮಳೆಯಾಗಿದೆ. ಇದು ನಿಗದಿತ ಪ್ರಮಾಣಕ್ಕಿಂತ ಶೇ.30ರಷ್ಟು ಕಡಿಮೆಯಾಗಿದೆ. 2005ರಲ್ಲಿ ಶೇ.25, 1965ರಲ್ಲಿ ಶೇ.24.6, 1920ರಲ್ಲಿ ಶೇ.24.4, 1913ರಲ್ಲಿ ಶೇ.24ರಷ್ಟು ಮಳೆ ಕೊರತೆ ಉಂಟಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ