Karnataka Dams Water Level: ಕೆಆರ್​ಎಸ್ ಶೇ.96ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ

| Updated By: ವಿವೇಕ ಬಿರಾದಾರ

Updated on: Jul 19, 2022 | 7:00 AM

ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನದಿಗಳು ತುಂಬಿ ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಣೆಕಟ್ಟುಗಳಿಗೆ ನೀರು ಹರಿದು ಬರುತ್ತಿದೆ. ಕೆಆರ್​ಎಸ್ ಶೇ.96ರಷ್ಟು ಭರ್ತಿಗೊಂಡಿದೆ. ಉಳಿದ ಅಣೆಕಟ್ಟುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಇಲ್ಲಿದೆ.

Karnataka Dams Water Level: ಕೆಆರ್​ಎಸ್ ಶೇ.96ರಷ್ಟು ಭರ್ತಿ, ರಾಜ್ಯದ ಉಳಿದ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ
ಲಿಂಗನಮಕ್ಕಿ ಜಲಾಶಯ
Follow us on

ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗಲಿದೆ. ಈ ನಡುವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನದಿಗಳು ತುಂಬಿ ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಣೆಕಟ್ಟುಗಳಿಗೆ ನೀರು ಹರಿದು ಹೋಗುತ್ತಿದೆ. ಕೆಆರ್​ಎಸ್ ಶೇ.96ರಷ್ಟು ಭರ್ತಿಗೊಂಡರೆ, ತುಂಗಾಭದ್ರಾ ಶೇ.92, ಕಬಿನಿ ಜಲಾಶಯದಲ್ಲಿ ಶೇ.95, ಮಲಪ್ರಭಾ ಶೇ. 59, ಘಟಪ್ರಭಾ ಶೇ. 59, ಲಿಂಗನಮಕ್ಕಿ ಶೇ.56, ಹಾರಂಗಿ ಶೇ. 82 , ಆಲಮಟ್ಟಿ ಡ್ಯಾಂ ಶೇ.69ರಷ್ಟು ಭರ್ತಿಯಾಗಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ  ಬಗ್ಗೆ ಮಾಹಿತಿ ಇಲ್ಲಿದೆ.

  1. ಕೆಆರ್​ಎಸ್​ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 38.04 ಮೀಟರ್, ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ, ಇಂದಿನ ನೀರಿನ ಮಟ್ಟ- 47.46 ಟಿಎಂಸಿ, ಇಂದಿನ ಒಳಹರಿವು- 77586 ಕ್ಯೂಸೆಕ್ಸ್​, ಇಂದಿನ ಹೊರಹರಿವು-79594 ಕ್ಯೂಸೆಕ್ಸ್​.
  2. ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್, ಒಟ್ಟು ಸಾಮರ್ಥ್ಯ – 123.08 ಟಿಎಂಸಿ, ಇಂದಿನ ನೀರಿನ ಮಟ್ಟ-85.20 ಟಿಎಂಸಿ, ಇಂದಿನ ಒಳಹರಿವು- 132835 ಕ್ಯೂಸೆಕ್ಸ್​ಇಂದಿನ ಹೊರಹರಿವು- 150000 ಕ್ಯೂಸೆಕ್ಸ್.
  3. ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್, ​ಒಟ್ಟು ಸಾಮರ್ಥ್ಯ – 51.00 ಟಿಎಂಸಿ, ಇಂದಿನ ನೀರಿನ ಮಟ್ಟ- 29.95 ಟಿಎಂಸಿ, ಇಂದಿನ ಒಳಹರಿವು- 27683 ಕ್ಯೂಸೆಕ್ಸ್​​, ಇಂದಿನ ಹೊರಹರಿವು- 135 ಕ್ಯೂಸೆಕ್ಸ್.
  4. ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್, ಒಟ್ಟು ಸಾಮರ್ಥ್ಯ- 100.86 ಟಿಎಂಸಿ, ಇಂದಿನ ನೀರಿನ ಮಟ್ಟ- 96.84 ಟಿಎಂಸಿ, ಇಂದಿನ ಒಳಹರಿವು- 164468  ಕ್ಯೂಸೆಕ್ಸ್​, ಇಂದಿನ ಹೊರಹರಿವು- 155648ಕ್ಯೂಸೆಕ್ಸ್​.
  5. ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್, ​ಒಟ್ಟು ಸಾಮರ್ಥ್ಯ – 37.73 ಟಿಎಂಸಿ, ಇಂದಿನ ನೀರಿನ ಮಟ್ಟ- 22.32 ಟಿಎಂಸಿ, ಇಂದಿನ ಒಳಹರಿವು-13423 ಕ್ಯೂಸೆಕ್ಸ್​, ಇಂದಿನ ಹೊರಹರಿವು- 194 ಕ್ಯೂಸೆಕ್ಸ್​.
  6. ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್, ಒಟ್ಟು ಸಾಮರ್ಥ್ಯ – 8.50 ಟಿಎಂಸಿ, ಇಂದಿನ ನೀರಿನ ಮಟ್ಟ- 6.94 ಟಿಎಂಸಿ, ಇಂದಿನ ಒಳಹರಿವು- 9702 ಕ್ಯೂಸೆಕ್ಸ್, ​ಇಂದಿನ ಹೊರಹರಿವು-10895ಕ್ಯೂಸೆಕ್ಸ್​​.
  7. ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್, ಒಟ್ಟು ಸಾಮರ್ಥ್ಯ – 151.75 ಟಿಎಂಸಿ, ಇಂದಿನ ನೀರಿನ ಮಟ್ಟ- 85.43 ಟಿಎಂಸಿ, ಇಂದಿನ ಒಳಹರಿವು- 41604 ಕ್ಯೂಸೆಕ್ಸ್​ಇಂದಿನ ಹೊರಹರಿವು- 4799 ಕ್ಯೂಸೆಕ್ಸ್.
  8. ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್, ಒಟ್ಟು ಸಾಮರ್ಥ್ಯ – 71.54 ಟಿಎಂಸಿ, ಇಂದಿನ ನೀರಿನ ಮಟ್ಟ- 66.94 ಟಿಎಂಸಿ, ಇಂದಿನ ಒಳಹರಿವು- 33891 ಕ್ಯೂಸೆಕ್ಸ್, ​ಇಂದಿನ ಹೊರಹರಿವು- 33301 ಕ್ಯೂಸೆಕ್ಸ್​​.
  9. ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್, ಒಟ್ಟು ಸಾಮರ್ಥ್ಯ – 19.09 ಟಿಎಂಸಿ, ಇಂದಿನ ನೀರಿನ ಮಟ್ಟ- 18.59 ಟಿಎಂಸಿ, ಇಂದಿನ ಒಳಹರಿವು- 33630 ಕ್ಯೂಸೆಕ್ಸ್​, ಇಂದಿನ ಹೊರಹರಿವು- 33513  ಕ್ಯೂಸೆಕ್ಸ್​​.
  10. ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್, ಒಟ್ಟು ಸಾಮರ್ಥ್ಯ – 37.10 ಟಿಎಂಸಿ, ಇಂದಿನ ನೀರಿನ ಮಟ್ಟ- 35.27 ಟಿಎಂಸಿ, ಇಂದಿನ ಒಳಹರಿವು-26099 ಕ್ಯೂಸೆಕ್ಸ್​​, ಇಂದಿನ ಹೊರಹರಿವು- 28285 ಕ್ಯೂಸೆಕ್ಸ್​.
  11. ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್, ಒಟ್ಟು ಸಾಮರ್ಥ್ಯ- 145.33 ಟಿಎಂಸಿ, ಇಂದಿನ ನೀರಿನ ಮಟ್ಟ- 61.92 ಟಿಎಂಸಿ, ಇಂದಿನ ಒಳಹರಿವು- 26393 ಕ್ಯೂಸೆಕ್ಸ್​ಇಂದಿನ ಹೊರಹರಿವು-0 ಕ್ಯೂಸೆಕ್ಸ್​​.
  12. ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್, ಒಟ್ಟು ಸಾಮರ್ಥ್ಯ – 31.10 ಟಿಎಂಸಿ, ಇಂದಿನ ನೀರಿನ ಮಟ್ಟ- 13.12 ಟಿಎಂಸಿ, ಇಂದಿನ ಒಳಹರಿವು- 5151 ಕ್ಯೂಸೆಕ್ಸ್​, ಇಂದಿನ ಹೊರಹರಿವು- 0 ಕ್ಯೂಸೆಕ್.