ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ. ಈ ನಡುವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ನದಿಗಳು ತುಂಬಿ ಹರಿಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅಣೆಕಟ್ಟುಗಳಿಗೆ ನೀರು ಹರಿದು ಹೋಗುತ್ತಿದೆ. ಕೆಆರ್ಎಸ್ ಶೇ.91ರಷ್ಟು ಭರ್ತಿಗೊಂಡರೆ, ತುಂಗಾಭದ್ರಾ ಶೇ.72, ಕಬಿನಿ ಜಲಾಶಯದಲ್ಲಿ ಶೇ.89, ಮಲಪ್ರಭಾ ಶೇ. 32, ಘಟಪ್ರಭಾ ಶೇ. 21, ಲಿಂಗನಮಕ್ಕಿ ಶೇ.31, ಹಾರಂಗಿ ಶೇ. 82, ಆಲಮಟ್ಟಿ ಡ್ಯಾಂ ಶೇ.57ರಷ್ಟು ಭರ್ತಿಯಾಗಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್ಎಸ್ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 38.04 ಮೀಟರ್, ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ, ಇಂದಿನ ನೀರಿನ ಮಟ್ಟ- 44.87 ಟಿಎಂಸಿ, ಇಂದಿನ ಒಳಹರಿವು- 34304 ಕ್ಯೂಸೆಕ್ಸ್, ಇಂದಿನ ಹೊರಹರಿವು-4817 ಕ್ಯೂಸೆಕ್ಸ್,
ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್, ಒಟ್ಟು ಸಾಮರ್ಥ್ಯ – 31.10 ಟಿಎಂಸಿ, ಇಂದಿನ ನೀರಿನ ಮಟ್ಟ- 7.05 ಟಿಎಂಸಿ, ಇಂದಿನ ಒಳಹರಿವು- 7144ಕ್ಯೂಸೆಕ್ಸ್, ಇಂದಿನ ಹೊರಹರಿವು- 0 ಕ್ಯೂಸೆಕ್.
ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್, ಒಟ್ಟು ಸಾಮರ್ಥ್ಯ – 8.50 ಟಿಎಂಸಿ, ಇಂದಿನ ನೀರಿನ ಮಟ್ಟ- 6.99 ಟಿಎಂಸಿ, ಇಂದಿನ ಒಳಹರಿವು- 9844 ಕ್ಯೂಸೆಕ್ಸ್, ಇಂದಿನ ಹೊರಹರಿವು- 6873 ಕ್ಯೂಸೆಕ್ಸ್
ಇದನ್ನೂ ಓದಿ: ಮಳೆಯಿಂದಾಗಿ ಕಂಗಾಲಾದ ಮಂಗಗಳು: ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಮಂಗಗಳ ರಕ್ಷಣೆ
ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್, ಒಟ್ಟು ಸಾಮರ್ಥ್ಯ – 37.10 ಟಿಎಂಸಿ, ಇಂದಿನ ನೀರಿನ ಮಟ್ಟ- 32.56 ಟಿಎಂಸಿ, ಇಂದಿನ ಒಳಹರಿವು-17641 ಕ್ಯೂಸೆಕ್ಸ್, ಇಂದಿನ ಹೊರಹರಿವು- 250 ಕ್ಯೂಸೆಕ್ಸ್
ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್, ಒಟ್ಟು ಸಾಮರ್ಥ್ಯ – 19.09 ಟಿಎಂಸಿ, ಇಂದಿನ ನೀರಿನ ಮಟ್ಟ- 17.39 ಟಿಎಂಸಿ, ಇಂದಿನ ಒಳಹರಿವು- 14481 ಕ್ಯೂಸೆಕ್ಸ್, ಇಂದಿನ ಹೊರಹರಿವು- 4000 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್, ಒಟ್ಟು ಸಾಮರ್ಥ್ಯ – 151.75 ಟಿಎಂಸಿ, ಇಂದಿನ ನೀರಿನ ಮಟ್ಟ- 47.20 ಟಿಎಂಸಿ, ಇಂದಿನ ಒಳಹರಿವು- 47968 ಕ್ಯೂಸೆಕ್ಸ್ಇಂದಿನ ಹೊರಹರಿವು- 2139 ಕ್ಯೂಸೆಕ್ಸ್
ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್, ಒಟ್ಟು ಸಾಮರ್ಥ್ಯ- 145.33 ಟಿಎಂಸಿ, ಇಂದಿನ ನೀರಿನ ಮಟ್ಟ- 34.20 ಟಿಎಂಸಿ, ಇಂದಿನ ಒಳಹರಿವು- 31004 ಕ್ಯೂಸೆಕ್ಸ್ಇಂದಿನ ಹೊರಹರಿವು- 0 ಕ್ಯೂಸೆಕ್ಸ್
ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಹಾಮಳೆ ಎಫೆಕ್ಟ್, ನೆಲಕಚ್ಚಿದ ಟೊಮೆಟೊ ಬೆಲೆ -ಕಷ್ಟಪಟ್ಟು ಬೆಳೆದ ಟೊಮೆಟೊ ತಿಪ್ಪೆಗೆ ಸುರಿದು ರೈತರು ಆಕ್ರೋಶ
ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್, ಒಟ್ಟು ಸಾಮರ್ಥ್ಯ- 100.86 ಟಿಎಂಸಿ, ಇಂದಿನ ನೀರಿನ ಮಟ್ಟ- 72.95 ಟಿಎಂಸಿ, ಇಂದಿನ ಒಳಹರಿವು- 95484 ಕ್ಯೂಸೆಕ್ಸ್, ಇಂದಿನ ಹೊರಹರಿವು- 308 ಕ್ಯೂಸೆಕ್ಸ್
ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್, ಒಟ್ಟು ಸಾಮರ್ಥ್ಯ – 71.54 ಟಿಎಂಸಿ, ಇಂದಿನ ನೀರಿನ ಮಟ್ಟ- 51.48 ಟಿಎಂಸಿ, ಇಂದಿನ ಒಳಹರಿವು- 28016 ಕ್ಯೂಸೆಕ್ಸ್, ಇಂದಿನ ಹೊರಹರಿವು- 146 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್, ಒಟ್ಟು ಸಾಮರ್ಥ್ಯ – 37.73 ಟಿಎಂಸಿ, ಇಂದಿನ ನೀರಿನ ಮಟ್ಟ- 12.25 ಟಿಎಂಸಿ, ಇಂದಿನ ಒಳಹರಿವು- 4256 ಕ್ಯೂಸೆಕ್ಸ್, ಇಂದಿನ ಹೊರಹರಿವು- 194 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್, ಒಟ್ಟು ಸಾಮರ್ಥ್ಯ – 51.00 ಟಿಎಂಸಿ, ಇಂದಿನ ನೀರಿನ ಮಟ್ಟ- 10.74 ಟಿಎಂಸಿ, ಇಂದಿನ ಒಳಹರಿವು- 20407 ಕ್ಯೂಸೆಕ್ಸ್, ಇಂದಿನ ಹೊರಹರಿವು- 106 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್, ಒಟ್ಟು ಸಾಮರ್ಥ್ಯ – 123.08 ಟಿಎಂಸಿ, ಇಂದಿನ ನೀರಿನ ಮಟ್ಟ- 70.58 ಟಿಎಂಸಿ, ಇಂದಿನ ಒಳಹರಿವು- 78390 ಕ್ಯೂಸೆಕ್ಸ್ಇಂದಿನ ಹೊರಹರಿವು- 451 ಕ್ಯೂಸೆಕ್ಸ್
ಇದನ್ನೂ ಓದಿ: Kedarnath Yatra: ಭಾರೀ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೇದಾರನಾಥ ಯಾತ್ರೆ ಸ್ಥಗಿತ