AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುದಾನ ಬಾಕಿ: ಕೇಂದ್ರದ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧವಾದ ಕರ್ನಾಟಕ ಸರ್ಕಾರ

ಅನುದಾನ ವಿಚಾರವಾಗಿ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ನಡುವೆ ಮತ್ತೆ ಕಾನೂನು ಸಮರ ಶುರುವಾಗುವ ಲಕ್ಷಣಗಳು ಕಾಣುತ್ತಿವೆ. ಹೌದು...ಬಾಕಿ ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್​​ ಮೆಟ್ಟಿಲೇರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳೊಂದಿಗೆ ಚರ್ಚಿಸಿ ನ್ಯಾಯಾಲಯದಲ್ಲಿ ಎಸ್ಎಲ್ಪಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಖಂಡ್ರೆ ವಿವರವಾಗಿ ಹೇಳಿದ್ದು, ಅದು ಈ ಕೆಳಗಿನಂತಿದೆ.

ಅನುದಾನ ಬಾಕಿ: ಕೇಂದ್ರದ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧವಾದ ಕರ್ನಾಟಕ ಸರ್ಕಾರ
ಸುಪ್ರೀಂ ಕೋರ್ಟ್
ಪ್ರಸನ್ನ ಗಾಂವ್ಕರ್​
| Edited By: |

Updated on: Nov 17, 2026 | 6:52 PM

Share

ಬೆಂಗಳೂರು, (ನವೆಂಬರ್ 17): ಕರ್ನಾಟಕದ ಗ್ರಾಮಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬಿಡುಗಡೆ ಮಾಡಬೇಕಾದ 2,186.20 ಕೋಟಿ ರೂ. ಅನುದಾನವನ್ನ ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಆರೋಪಿಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ತೆರವು ಅರ್ಜಿ (ಎಸ್.ಎಲ್.ಪಿ.) ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ, ಕೇಂದ್ರ ಸರ್ಕಾರವು ಕರ್ನಾಟಕದ ಮೇಲೆ ಮಾತ್ರ ಪ್ರಹಾರದ ಮೇಲೆ ಪ್ರಹಾರ ಮಾಡುತ್ತಿದೆ. ಹೀಗಾಗಿ ಇವತ್ತು ಅನಿವಾರ್ಯ ಕಾರಣಗಳಿಂದ ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತಬೇಕಾಗಿದೆ. ನಾನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಾಲೋಚನೆ ಮಾಡಿದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಎಸ್ಎಲ್ಪಿ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಸುಪ್ರೀಂಗೆ ಅರ್ಜಿ ಸಲ್ಲಿಸಲು ಸೂಚನೆ

ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರೊಂದಿಗೆ ಸಮಾಲೋಚಿಸಿದ ಸಚಿವರು, ರಾಜ್ಯ ಸರ್ಕಾರ ಹಲವು ಮನವಿ ಮಾಡಿದರೂ, ಅಗತ್ಯ ದಾಖಲಾತಿ ಸಲ್ಲಿಸಿದರೂ 2025-26ನೇ ಸಾಲಿನ 2186.20 ಕೋಟಿ ರೂ. ಬಿಡುಗಡೆ ಮಾಡದ ಕೇಂದ್ರದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದು ಮಾತ್ರ ಉಳಿದಿರುವ ಏಕೈಕ ಮಾರ್ಗ. ಈ ಬಾರಿ ಎಲ್ ನಿನೋ ಪ್ರಭಾವದಿಂದ ಮಳೆಯ ಕೊರತೆಯಾಗಿದ್ದು ಬರಪರಿಸ್ಥಿತಿ ತಲೆದೋರಿದೆ. ಪಂಚಾಯಿತಿಗಳಲ್ಲಿ ದುರಸ್ತಿಗೂ ಹಣವಿಲ್ಲ. ಕೇಂದ್ರ ಸರ್ಕಾರ ಈ ರೀತಿ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಹಣವನ್ನೇ ತಡೆ ಹಿಡಿದಿರುವುದು ಸರಿಯಲ್ಲ. ಹೀಗಾಗಿ ವಿಳಂಬ ಮಾಡದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಸ್ತೆ, ಚರಂಡಿ ಅಭಿವೃದ್ಧಿಗೆ ₹6,000 ಕೋಟಿ: 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಕೋರ್ಟ್​​​ನಲ್ಲಿ ಎಸ್ಎಲ್ಪಿ ಹಾಕಲು ತೀರ್ಮಾನ

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಖಂಡ್ರೆ,  ನಮಗೇನು ಕೇಂದ್ರದ ಜೊತೆಯಲ್ಲಿ ಸಂಘರ್ಷ ಮಾಡಬೇಕು ಅಂತ ಏನಿಲ್ಲ. ನಾವು ಉತ್ತಮವಾದಂತಹ ಬಾಂಧವ್ಯ ಇಟ್ಟುಕೊಂಡು ಹೋಗಬೇಕು. ನಾವು ಇವತ್ತು ಅನೇಕ ವಿಚಾರದಲ್ಲಿ ಅವರಿಗೆ ಸಹಕಾರ ಕೊಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕರ್ನಾಟಕದ ಮೇಲೆ, ಪ್ರಹಾರದ ಮೇಲೆ, ಪ್ರಹಾರ ಮಾಡುತ್ತಿದೆ. ಹೀಗಾಗಿ ಇವತ್ತು ಅನಿವಾರ್ಯ ಕಾರಣಗಳಿಂದ ಸುಪ್ರಿಂ ಕೋರ್ಟ್ ಮೆಟ್ಟಿಲು ಹತ್ತಬೇಕಾಗಿದೆ. ನಾನು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಾಲೋಚನೆ ಮಾಡಿದ್ದು, ಎಜಿ ಶಶಿಕರಣ ಶೆಟ್ಟಿ ಅವರ ಜೊತೆಯಲ್ಲಿ ಚರ್ಚೆ ಮಾಡಿದ್ದೇವೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಎಸ್ಎಲ್ಪಿ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ. ರಿಟ್ ಪಿಟಿಷನ್ ಹಾಕಬೇಕು ಅಂತ ಹೇಳಿ ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಶೀಘ್ರದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ, ಕರ್ನಾಟಕಕ್ಕೆ ನ್ಯಾಯ ಸಿಗಬೇಕು ಎಂದು ವಾದ ಮಾಡುತ್ತೇವೆ . 2023-24 ರಲ್ಲಿ ಸುಮಾರು 3,000 ಮೇಲ್ಪಟ್ಟು ಕೋಟಿ ನಮ್ಮಲ್ಲಿ 3,498 ಕೋಟಿ ಇವತ್ತು ಬರಕ್ಕಾಗಿ ಹಣ ಬರಬೇಕಾಗಿತ್ತು. ಹಿಂದಿನ ಸಿದ್ದರಾಮಯ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೋದ ಮೇಲೆ ಆ 3,498 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡ್ತೀವಿ ಅಂತ ಹೇಳಿ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಕೊಟ್ಟರು. ಇದರೊಂದಿಗೆ ಸುಪ್ರೀಂಕೋರ್ಟ್‌ ನಿಂದ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಅದೇ ವಿಶ್ವಾಸ ಈಗಲೂ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರ ಇದೆ, 5,927 ಗ್ರಾಮ ಪಂಚಾಯಿತಿಗಳಲ್ಲಿ ಹಣಕಾಸಿನ ಇವತ್ತು ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲಿ ನಿಭಾಯಿಸುತ್ತಿದೆ. ಆದರೂ ಅವರಿಗೆ ಏನು ಒಂದೊಂದು ಪಂಚಾಯತಿಗೆ 30 ರಿಂದ 50 ಲಕ್ಷ ರೂಪಾಯಿ ಸಿಗ್ತಾ ಇತ್ತು. ಈ ಹಣ ಪಂಚಾಯತಿಗೆ ಹೋಗುತ್ತಿತ್ತು. ಆದರೆ ಆ ಹಣನೇ ಇವತ್ತು ಬಿಡುಗಡೆ ಮಾಡದೆ ಕುಡಿಯೋ ನೀರು, ಬೀದಿ ದೀಪ, ಮೂಲಭೂತ ಸೌಕರ್ಯಗಳು ಪಂಚಾಯತಿಗೆ ಕೊಡಬೇಕು ಅನ್ನುವಂತದ್ದು ಮತ್ತು 15ನೇ ಹಣಕಾಸು ಯೋಜನೆಗೆ 16ನೇ ಹಣಕಾಸು ಶಿಫಾರಸಿನ ಆಧಾರದ ಮೇಲೆ ಅನುದಾನ ಬಿಡುಗಡೆ ಆಗ್ತಾ ಇರುವಂತಹ ಸಂದರ್ಭದಲ್ಲಿ ಇವತ್ತು ರಾಜ್ಯಕ್ಕೆ ಅನ್ಯಾಯ ಮಾಡಿದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಹೀಗಾಗಿ ಸುಪ್ರೀಂಕೋರ್ಟ್‌ಗೆ ನಾವು ಹೋಗುತ್ತಿದ್ದು, ಡ್ರಾಫ್ಟ್ ರೆಡಿಯಾಗುತ್ತಿದೆ ಎಂದರು.

2,186.2 ಕೋಟಿ ರೂಪಾಯಿ ಅನುದಾನ ಬಾಕಿ

ಇವತ್ತು ನಾನು ಮತ್ತು ನಮ್ಮ ಎಲ್ಲಾ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ವಿ 2025-26ರ ಕೇಂದ್ರದ 15ನೇ ಹಣಕಾಸು ಯೋಜನೆಯ ಶಿಫಾರಸಿನಂತೆ 2,186.2 ಕೋಟಿ ರೂಪಾಯಿ ಅನುದಾನ ಬಾಕಿ ಇದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತದ್ದು ಬಾಕಿ ಇದೆ. ಈ ಬಾಕಿ ಇರುವಂತಹ ಅನುದಾನ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರದ ವತಿಯಿಂದ ಬಹಳ ಸಲ ನಾವು ಮನವಿಯನ್ನು ಮಾಡಿದ್ದೇವೆ. 15ನೇ ಹಣಕಾಸು ಯೋಜನೆಯ ಶಿಫಾರಸಿನಂತೆ ಅನುದಾನ ಬರುತ್ತೆ. ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ಹಣ ಅವರು ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆ ಮಾಡುತ್ತಾರೆ.ನಿಯಮಾನುಸಾರ 10 ದಿವಸಗಳ ಒಳಗಾಗಿ ನಾವು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಬೇಕಾಗುತ್ತೆ. ವಿಳಂಬ ಆದರೆ ಅದಕ್ಕೆ ಬಡ್ಡಿ ಸಹಿತ ಗ್ರಾಮ ಪಂಚಾಯಿತಿಗಳಿಗೆ ಕೊಡಬೇಕಾಗುತ್ತೆ.15ನೇ ಹಣಕಾಸು ಯೋಜನೆಯ 4 ವರ್ಷ ರಾಜ್ಯಕ್ಕೆ ಅನುದಾನ ಬಂದಿದೆ. 4ನೇ ವರ್ಷ 2024-25ರಲ್ಲಿ 2,133.25 ಕೋಟಿ ರೂಪಾಯಿ ಹಣ ನಮ್ಮ ರಾಜ್ಯಕ್ಕೆ ಅವರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನಾವು ಸುಮಾರು ಇವತ್ತು 1,907 ಕೋಟಿ ಅದಕ್ಕೆ ಸ್ವೀಕೃತಿ ದಾಖಲಾಗಿದೆ.ಈ ಸ್ವೀಕೃತಿ ಏನಿದೆ, ಅದು ಪೋರ್ಟಲ್ ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ಪ್ರತಿಬಿಂಬಿತವಾಗಬೇಕು. ನಮ್ಮದು NIC ಪೋರ್ಟಲ್ ಇದೆ. 2024-25ರಲ್ಲಿ ಅವರು ಏನು ಹಣ ಬಿಡುಗಡೆ ಮಾಡಿದ್ದಾರೆ? ಅದರಲ್ಲಿ ಬರೀ 1,907 ಕೋಟಿ ಮಾತ್ರ ಸ್ವೀಕೃತಿ ದಾಖಲಾಗಿದೆ ಎನ್ನುವಂತಹ ಒಂದು ನೆಪ ಹೇಳಿದ್ದಾರೆ. 225 ಕೋಟಿ ರೂಪಾಯಿ ಗ್ರಾಮ ಪಂಚಾಯತಿಗೆ ಹೋಗಿದೆ, ನಮ್ಮಲ್ಲಿ ದಾಖಲೆ ಇದೆ. ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡುವುದರಲ್ಲಿ ವಿಳಂಬ ಮಾಡಿದ್ದೀರಿ ಎಂಬ ತಾಂತ್ರಿಕ ದೋಷದ ನೆಪ ಹೇಳಿದ್ದಾರೆ. ನಮ್ಮ ಅಧಿಕಾರಿಗಳು ಕೇಂದ್ರದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಿ ಕೊಡಲು ದೆಹಲಿಗೆ ಹೋದರೂ ಸಹಿತ ಆ ಹಣ ಬಿಡುಗಡೆ ಆಗಿಲ್ಲ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ತಾರತಮ್ಯ ಧೋರಣೆ

ಕರ್ನಾಟಕಕ್ಕೆ ಅನ್ಯಾಯ ಮಾಡುವ ತೀರ್ಮಾನವನ್ನು ಕೇಂದ್ರದವರು ಮಾಡಿದ್ದಾರೆ. ಏಕೆಂದರೆ ಇವತ್ತು ಉತ್ತರಖಂಡಕ್ಕೆ 470 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಪೋರ್ಟಲ್‌ನಲ್ಲಿ ಅವರದ್ದು (ಉತ್ತರ ಖಂಡ) ಯಾವುದೇ ಹಣ ಸ್ವೀಕೃತಿ ಆಗಿಲ್ಲ . ಈ ಗ್ರಾಮ ಸ್ವರಾಜ್ ಪೋರ್ಟಲ್ ಅಂತ ಸರ್ಕಾರದ್ದು ಇದೆ. ಅದರಲ್ಲಿ 470 ಕೋಟಿ ರೂಪಾಯಿ ಹಿಂದೆ ಕೊಟ್ಟಿದ್ದಂತದ್ದು, ಸ್ವೀಕೃತಿ ಆಗದೆ ಇದ್ದರೂ 470 ಕೋಟಿ ರೂಪಾಯಿ ಉತ್ತರಖಂಡಕ್ಕೆ ಬಿಡುಗಡೆ ಮಾಡಿದ್ದಾರೆ. ಅಂದರೆ ಇದು ಏನು ತೋರಿಸಿಕೊಡುತ್ತದೆ? ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಕಣ್ಣೆ ಅನ್ನುವಂತಹ ರೀತಿಯಲ್ಲಿ ತಾರತಮ್ಯ ಧೋರಣೆ ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ರಾಜ್ಯಗಳ ಅನುದಾನ ವಿವರಿಸಿದ ಖಂಡ್ರೆ

ಇದು ಒಂದು ಒಕ್ಕೂಟದ ವ್ಯವಸ್ಥೆಗೆ ಅತ್ಯಂತ ಮಾರಕವಾಗಿದೆ ಅನ್ನುವಂತಹ ಮಾತನ್ನು ಹೇಳಲಿಕ್ಕೆ ಬಯಸುತ್ತಿದ್ದೇನೆ. ಹಾಗೇ ಗುಜರಾತ್ ರಾಜ್ಯಕ್ಕೆ ಕೂಡ ಇದೇ ಸಾಲಿನಲ್ಲಿ 2,619 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪೋರ್ಟಲ್‌ನಲ್ಲಿ 2,104 ಕೋಟಿಗೆ ಸ್ವೀಕೃತಿ ಇದೆ. ಅವರೇನು ಈ ಗ್ರಾಮ ಸ್ವರಾಜ್ ಪೋರ್ಟಲ್ ಇದೆ. ಅದರಲ್ಲಿ 2,104 ಸ್ವೀಕೃತಿ ಇದ್ದು, ವ್ಯತ್ಯಾಸದಲ್ಲಿ 515 ಕೋಟಿ ರೂಪಾಯಿ ಇದೆ. ಆದರೂ ಅವರಿಗೆ ಪೂರ್ತಿ ಹಣ ಕೊಟ್ಟಿದ್ದಾರೆ. ಅಸ್ಸಾಂ ರಾಜ್ಯಕ್ಕೆ 1,315 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಪೋರ್ಟಲ್‌ನಲ್ಲಿ 447 ಕೋಟಿ ರೂಪಾಯಿ ಸ್ವೀಕೃತಿ ಇದೆ. ವ್ಯತ್ಯಾಸ 867 ಕೋಟಿ ರೂಪಾಯಿ. ಇಷ್ಟಿದ್ದರೂ ಅವರಿಗೆ ಪೂರ್ತಿ ಹಣ ಬಿಡುಗಡೆಯಾಗಿದೆ. ಇನ್ನು ಬಿಹಾರ್ ರಾಜ್ಯಕ್ಕೆ 4,109 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಪೋರ್ಟಲ್‌ನಲ್ಲಿ ಆಗಿರುವ ಸ್ವೀಕೃತಿ ಹಣ 1,775 ಕೋಟಿ ರೂಪಾಯಿ ಮಾತ್ರ. ವ್ಯತ್ಯಾಸ 2,334 ಕೋಟಿ ರೂಪಾಯಿ ಇದ್ದರೂ ಅವರಿಗೆ ಪೂರ್ತಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದು ತಾರತಮ್ಯ ಮಾಡುವಂತಹ ಒಂದು ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಮನವಿಗೆ ಸ್ಪಂದನೆ ಸಿಗಲಿಲ್ಲ

ಕೇಂದ್ರ ಸರ್ಕಾರಕ್ಕೆ ನಾವು ಹಲವಾರು ಬಾರಿ ಪತ್ರ ಬರೆದಿದ್ದೇವೆ. ರಾಜ್ಯದಿಂದ, ವೈಯಕ್ತಿಕವಾಗಿ ನಮ್ಮ ರಾಜ್ಯದ ಎಲ್ಲಾ 28 ಲೋಕಸಭಾ ಸದಸ್ಯರಿಗೆ ಮನವಿ ಮಾಡಿದ್ದೆ. ಕೇಂದ್ರದ ಆಡಳಿತ ಪಕ್ಷದಲ್ಲಿ ಇರುವಂತಹ ಸದಸ್ಯರಿಗೆ, ಕೇಂದ್ರ ಸಚಿವರಿಗೆ, ರಾಜ್ಯಸಭಾ ಸದಸ್ಯರಿಗೆ, ಎಲ್ಲರಿಗೂ ಪತ್ರವನ್ನು ಬರೆದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದೆ. ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದಂತಹ ಹಣ ಇವತ್ತು ಬಾಕಿ ಹಣ ಬಿಡುಗಡೆ ಮಾಡಿಸಬೇಕು ಅಂತ ಹೇಳಿ ಕೇಳಿದ್ದೆ. ದುರದೃಷ್ಟವಶಾತ್ ಇಲ್ಲಿಯವರೆಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಯಾರೂ ಮಾತಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
ಚಿಕಿತ್ಸೆಗೆ 5 ಸಾವಿರ ರೂ. ಕಡಿಮೆ ಇದ್ದಿದ್ದಕ್ಕೆ ಮೊಬೈಲ್ ನೀಡುವಂತೆ ಒತ್ತಾಯ
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
ಮಂಜನನ್ನೇ ನಾಮಿನೇಟ್ ಮಾಡಿ ಸಗಣಿ ಸುರಿದ ‘ಮಂಜಿ’: ವಿಡಿಯೋ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
RDPR ಪರೀಕ್ಷೆಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಮೇಲಿನ ಆರೋಪ ಕೆದಕಿದ ಇಡಿ
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಕ್ರಮ: ಖಾದರ್
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಮೀನು ರಪ್ತು ವಾಹನದಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಲಿಕ್ಕರ್​ ಜಪ್ತಿ
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಕಾಂಗ್ರೆಸ್ ನಾಯಕರ ವೈಯಕ್ತಿಕ ಟೀಕೆಗೆ ಯದುವೀರ್ ಒಡೆಯರ್ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?