ಮತ್ತೆ ಸಾರಿಗೆ ಮುಷ್ಕರದ ಸುಳಿವು: ‘ಬ್ರೇಕ್​ ಹಾಕಿ’ ಸಿಬ್ಬಂದಿಗೆ ಶಾಕ್ ಕೊಟ್ಟ ಸರ್ಕಾರ, ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ!

| Updated By: ಸಾಧು ಶ್ರೀನಾಥ್​

Updated on: Jun 26, 2021 | 10:24 AM

Transport employees strike: ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ದರಾಗ್ತಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಲಾಕ್​ಡೌನ್​ ಮುಗಿದ ಮೇಲೆ  ಜುಲೈ 5 ರ ನಂತ್ರ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಆದರೆ ಅದಕ್ಕೂ ಮೊದಲೇ...  ಅಗತ್ಯ ಸೇವೆಗಳ‌ ಮುಷ್ಕರವನ್ನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.  

ಮತ್ತೆ ಸಾರಿಗೆ ಮುಷ್ಕರದ ಸುಳಿವು: ‘ಬ್ರೇಕ್​ ಹಾಕಿ’ ಸಿಬ್ಬಂದಿಗೆ ಶಾಕ್ ಕೊಟ್ಟ ಸರ್ಕಾರ, ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ!
ಮತ್ತೆ ಸಾರಿಗೆ ಮುಷ್ಕರದ ಸುಳಿವು: ‘ಬ್ರೇಕ್​ ಹಾಕಿ’ ಸಿಬ್ಬಂದಿಗೆ ಶಾಕ್ ಕೊಟ್ಟ ಸರ್ಕಾರ, ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ!
Follow us on

 ಬೆಂಗಳೂರು: ರಾಜ್ಯದ ನಾನಾ ಸಾರಿಗೆ ಸಂಸ್ಥೆಗಳ ನೌಕರರು ಮತ್ತೆ ಮುಷ್ಕರ ಮಾಡಲು ಮುಂದಾಗಿದ್ದಾರೆ ಎಂಬ ಸುಳಿವು ಸರ್ಕಾರಕ್ಕೆ ಸಿಕ್ಕಿದೆ. ಜುಲೈ 5ರ ಬಳಿಕ ಸಾರಿಗೆ ನೌಕರರು ಮತ್ತೆ ರಸ್ತೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಇದನ್ನರಿತು ಮುಷ್ಕರಕ್ಕೆ ನಿರ್ಧರಿಸಿದ್ದ ಸಾರಿಗೆ ಸಿಬ್ಬಂದಿಗೆ ಬ್ರೇಕ್​ ಹಾಕಲು ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ. 

ಈ ವರ್ಷ ಇನ್ನು ಸಾರಿಗೆ ಮುಷ್ಕರ ನಡೆಸುವಂತಿಲ್ಲ:
ಜುಲೈ 1ರಿಂದ ಡಿಸೆಂಬರ್​​ 31ರವರೆಗೆ ಸಾರಿಗೆ ಸಿಬ್ಬಂದಿ ಮುಷ್ಕರವನ್ನು ನಿಷೇಧ ಮಾಡಲಾಗಿದೆ. ಆರ್ಥಿಕತೆಯ ಮೇಲೆ ಕೊವಿಡ್ ಸಾಕಷ್ಟು ಪ್ರಭಾವ ಬೀರಿದೆ. ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹೀಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 3
ಉಪವಿಭಾಗ 1ರ ಅನ್ವಯ ಅಗತ್ಯ ಸೇವೆಗಳ ಮುಷ್ಕರವನ್ನು (essential services maintain act) ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ದರಾಗ್ತಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಲಾಕ್​ಡೌನ್​ ಮುಗಿದ ಮೇಲೆ  ಜುಲೈ 5 ರ ನಂತ್ರ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದರು. ಆದರೆ ಅದಕ್ಕೂ ಮೊದಲೇ…  ಅಗತ್ಯ ಸೇವೆಗಳ‌ ಮುಷ್ಕರವನ್ನ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 3  ಉಪವಿಭಾಗ 1ರ ಅನ್ವಯ ಅಗತ್ಯ ಸೇವೆಗಳ ಮುಷ್ಕರವನ್ನು ನಿಷೇಧ

(karnataka government brings in essential services maintain act to curb strike by transport employees)

ಕರ್ನಾಟಕದಲ್ಲಿ ಮತ್ತೊಮ್ಮೆ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ, ಸಭೆಯಲ್ಲಿ ದಿನಾಂಕ ನಿಗದಿ: ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ