AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಹಾನಿ: ಕೇಂದ್ರ ಸರ್ಕಾರದಿಂದ 1,545 ಕೋಟಿ ನೆರವಿಗೆ ಮನವಿ ಸಲ್ಲಿಸಲು ತೀರ್ಮಾನ

ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿ ಉಂಟಾಗಿರುವ ಹಿನ್ನಲೆ NDRF ಅಡಿಯಲ್ಲಿ 1545.23 ಕೋಟಿ ಆರ್ಥಿಕ ಸಹಾಯ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಲ್ಲದೆ, ಅನುದಾನ ಹಂಚಿಕೆ ತಾರತಮ್ಯ ವಿಚಾರವಾಗಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್​, ತಾರತಮ್ಯ ನೀತಿಯನ್ನು ಖಂಡಿಸಬೇಕಾದ ರಾಜ್ಯದ ಬಿಜೆಪಿ ಸಂಸದರು ಧ್ವನಿ ಕಳೆದುಕೊಂಡವರಂತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದೆ.

ಮಳೆಹಾನಿ: ಕೇಂದ್ರ ಸರ್ಕಾರದಿಂದ 1,545 ಕೋಟಿ ನೆರವಿಗೆ ಮನವಿ ಸಲ್ಲಿಸಲು ತೀರ್ಮಾನ
ಮಳೆ ಹಾನಿ (ಸಾಂದರ್ಭಿಕ ಚಿತ್ರ)
ಪ್ರಸನ್ನ ಹೆಗಡೆ
|

Updated on: Oct 30, 2025 | 5:35 PM

Share

ಬೆಂಗಳೂರು, ಅಕ್ಟೋಬರ್​ 30: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ  ಮತ್ತು ಪ್ರವಾಹದಿಂದ ತೀವ್ರ ಹಾನಿ ಉಂಟಾಗಿರುವ ಹಿನ್ನಲೆ ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ ಕೇಂದ್ರದ ಮೊರೆ ಹೋಗಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಸ್ತೆ, ಸೇತುವೆ, ಚೆಕ್ ಡ್ಯಾಂಗಳು ಸೇರಿ 5000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸಾರ್ವಜನಿಕ ಆಸ್ತಿ ನಷ್ಟ ಅಂದಾಜು ಮಾಡಿರುವ ಸರ್ಕಾರ, NDRF ಅಡಿಯಲ್ಲಿ 1545.23 ಕೋಟಿ ಆರ್ಥಿಕ ಸಹಾಯ ಕೋರಿ ಮನವಿ ಸಲ್ಲಿಸಲು ತೀರ್ಮಾನಿಸಿದೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಕಿಡಿ

ಅತಿವೃಷ್ಟಿಯಿಂದ ಹಾನಿಯುಂಟಾಗಿರುವ ಹಿನ್ನೆಲೆ ಕರ್ನಾಟಕಕ್ಕೆ ಕೇಂದ್ರ ಗೃಹ ಸಚಿವಾಲಯವು ಎಸ್‌ಡಿಆರ್‌ಎಫ್‌ನಿಂದ 2ನೇ ಕಂತಿನ ಹಣವನ್ನು ಈಗಾಲೇ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಕೇವಲ 384.40 ಕೋಟಿ ರೂ.ಸಿಕ್ಕಿದ್ದರೆ, ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಬರೋಬ್ಬರಿ 1,566.40 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್​ ಕಿಡಿ ಕಾರಿದ್ದು, ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಕೇಂದ್ರ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಜಿಎಸ್‌ಟಿ ಹೇರಿಕೆಯಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದ ರಾಜ್ಯಗಳ ತೆರಿಗೆ ಆದಾಯದಲ್ಲಿ‌ ದೊಡ್ಡ ಪ್ರಮಾಣದ ಕೊರತೆ ಎದುರಾಗಿದೆ. ಕರ್ನಾಟಕ ರಾಜ್ಯಕ್ಕೆ ಜಿಎಸ್‌ಟಿ ಪೂರ್ವದ ಆದಾಯ ವೃದ್ಧಿಯ ಪ್ರಮಾಣಕ್ಕೆ ಹೋಲಿಸಿದರೆ ಒಂದೇ ವರ್ಷದಲ್ಲಿ ರೂ.30,000 ಕೋಟಿಗೂ ಅಧಿಕ ನಷ್ಟವಾಗಿದೆ. ಕನ್ನಡಿಗರಿಗೆ, ರಾಜ್ಯಕ್ಕೆ ಶಾಪವಾಗಿರುವ ಕೇಂದ್ರ ಬಿಜೆಪಿ ಸರ್ಕಾರದಿಂದ ಅನುದಾನ ಹಂಚಿಕೆ, ಜಿಎಸ್‌ಟಿ ಪಾಲು, ನೆರೆ – ಬರ ಪರಿಹಾರ, ಅವೈಜ್ಞಾನಿಕ ನೀತಿಗಳು ಸೇರಿದಂತೆ ಪ್ರತಿಯೊಂದರಲ್ಲೂ ನಿರಂತರ ಅನ್ಯಾಯವಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: ಅತಿವೃಷ್ಟಿ: ಮಹಾರಾಷ್ಟ್ರಕ್ಕೆ 1,566.40 ಕೋಟಿ ರೂ. ಕರ್ನಾಟಕಕ್ಕೆ ಕೇವಲ 384 ಕೋಟಿ

ದೇಶದಲ್ಲೇ ಅತೀ ಹೆಚ್ಚು ತೆರಿಗೆ ನೀಡುವ, ಪ್ರತಿ ವರ್ಷ ದೇಶದ ಬೊಕ್ಕಸಕ್ಕೆ 4.5 ಲಕ್ಷ ಕೋಟಿ ರೂಪಾಯಿಗಳನ್ನು ತುಂಬಿಸುವ ಕರ್ನಾಟಕ್ಕೆ ಕೇಂದ್ರದಿಂದ ಸಿಗುತ್ತಿರುವುದು ಕನಿಷ್ಠ ಪಾಲು ಮಾತ್ರ. ಉತ್ತರ ಪ್ರದೇಶ – ಬಿಹಾರದಂತಹ ಭ್ರಷ್ಟಾಚಾರದಿಂದ ಬಳಲುತ್ತಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿ ಕರ್ನಾಟಕಕ್ಕೆ ನಿರಂತರ ದ್ರೋಹ ಬಗೆಯಲಾಗುತ್ತಿದೆ. ಕೇಂದ್ರದ ಈ ತಾರತಮ್ಯ ನೀತಿಯನ್ನು ಖಂಡಿಸಬೇಕಾದ ರಾಜ್ಯದ ಬಿಜೆಪಿ ಸಂಸದರು ಧ್ವನಿ ಕಳೆದುಕೊಂಡವರಂತೆ ಮೌನಕ್ಕೆ ಶರಣಾಗಿದ್ದಾರೆ ಎಂದೂ ಆಡಳಿತಾರೂಢ ಕಾಂಗ್ರೆಸ್​ ಆರೋಪಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ