ಇನ್ನೂ ನಿಂತಿಲ್ಲ 108 ಆಂಬುಲೆನ್ಸ್ ಸಿಬ್ಬಂದಿಗಳ ಪರದಾಟ: ಆಂಬುಲೆನ್ಸ್ ನಿರ್ವಹಣೆಗೆ ಹಣ ಬಿಡುಗಡೆ ಮಾಡದ ಸರ್ಕಾರ
ಅಂಬುಲೆನ್ಸ್ಗಳ ನಿರ್ವಹಣೆಗೆ ಸರಿಯಾಗಿ ಹಣ ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ.
ಬೆಂಗಳೂರು: 108 ಆಂಬುಲೆನ್ಸ್ (108 Ambulance) ಸಿಬ್ಬಂದಿಗಳ ಪರದಾಟ ಇನ್ನೂ ನಿಂತಿಲ್ಲ. ಇಷ್ಟು ದಿವಸ ವೇತನಕ್ಕಾಗಿ ಪರದಾಡಿದರೆ ಈಗ ಬೇರೆ ತೊಂದರೆ ಶುರುವಾಗಿದೆ. ಅಂಬುಲೆನ್ಸ್ಗಳ ನಿರ್ವಹಣೆಗೆ ಸರಿಯಾಗಿ ಹಣ ಸಿಗದೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಇದರಿಂದ ನಾಲ್ಕೈದು ತಿಂಗಳಿನಿಂದ ಅಂಬುಲೆನ್ಸ್ಗಳು ನಿಂತಲ್ಲೆ ನಿಂತಿವೆ. ಸರ್ಕಾರ ಈ ಮೊದಲು ಪ್ರತಿ 3 ತಿಂಗಳಿಗೊಮ್ಮೆ ಅಂಬುಲೆನ್ಸ್ ನಿರ್ವಹಣೆಗೆಂದು ಸರ್ಕಾರ ಹಣ ಬಿಡುಗಡೆ ಮಾಡುತ್ತಿತ್ತು.
ಆದರೆ ಈಗ ಆರೋಗ್ಯ ಇಲಾಖೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಇದರಿಂದ ಗ್ಯಾರೇಜ್ಗಳಿಗೆ ಕೊಡಬೇಕಾದ ಬಿಲ್ಗಳು ಇನ್ನು ಪಾವತಿಯಾಗಿಲ್ಲ. ಹೀಗಾಗಿ ಆಂಬುಲೆನ್ಸ್ಗಳು ರಿಪೇರಿಯಾಗದೆ ನಾಲ್ಕೈದು ತಿಂಗಳಿನಿಂದ ನಿಂತಲ್ಲೆ ನಿಂತಿವೆ. ಅಂಬುಲೆನ್ಸ್ ಮಾಲೀಕರು ಬಿಲ್ ಪಾವತಿಯಾಗುವವರೆಗೂ ಗಾಡಿ ಸರಿ ಮಾಡಾಲ್ಲ ಎನ್ನುತ್ತಿದ್ದಾರೆ.
ಅಂಬುಲೆನ್ಸ್ಗಳು ಸಮಸ್ಯೆ ಬಂದಾಗ ಡ್ರೈವರ್ಗಳು ಗ್ಯಾರೇಜ್ ತಂದು ಬಿಟ್ಟುಹೋಗುತ್ತಾರೆ. ರೀಪೆರಿ ನಂತರ ಸರ್ಕಾರಕ್ಕೆ ಖರ್ಚುವೆಚ್ಚ ಕಳುಹಿಸುತ್ತೇವೆ. ಆಗ ಸರ್ಕಾರ ವಾರದ ಒಳಗೆ ಹಣವನ್ನು ನೀಡುತ್ತದೆ. ಆದರೆ ಈಗೀಗ ಬರುತ್ತಿರುವ ಗಾಡಿಗಳ ಡಿಟೇಲ್ಸ್ ಕಳ್ಸಿ 5 ತಿಂಗಳು ಕಳೆದರು ಇನ್ನು ಬಿಲ್ ಪಾವತಿಮಾಡಿಲ್ಲ. ಒಂದೊಂದು ಗ್ಯಾರೇಜ್ನಲ್ಲಿ 10 ರಿಂದ 20 ಲಕ್ಷದಷ್ಟು ಬಿಲ್ ಬಾಕಿ ಇದೆ. ಇನ್ನು ಅಂಬುಲೆನ್ಸ್ಗಳು ಗ್ಯಾರೇಜ್ನಲ್ಲಿ ಇರುವ ಕಾರಣದಿಂದಾಗಿ ಅಂಬುಲೆನ್ಸ್ ಕೊರತೆ ಉಂಟಾಗುತ್ತಿದೆ. ಆದರೆ ಸರ್ಕಾರ ಇದನ್ನ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಗ್ಯಾರೇಜ್ ಮಾಲೀಕರು ಹೇಳುತ್ತಿದ್ದಾರೆ.
108 ಆ್ಯಂಬುಲೆನ್ಸ್ ನೌಕರರ ಜತೆಗಿನ ಸಭೆ ಅಂತ್ಯ: ವಾರದೊಳಗೆ ವೇತನ ನೀಡುವುದಗಿ ಜಿವಿಕೆ ಸಂಸ್ಥೆ ಭರವಸೆ
108 ಆ್ಯಂಬುಲೆನ್ಸ್ ಆರೋಗ್ಯ ಸಿಬ್ಬಂದಿಗಳಿಗೆ ಒಂದು ವಾರದೊಳಗೆ ವೇತನ ನೀಡುವುದಗಿ ಜಿವಿಕೆ ಸಂಸ್ಥೆ ಹೇಳಿದೆ. ಆರೋಗ್ಯ ಸೌಧದಲ್ಲಿ ಇಂದು ಆರೋಗ್ಯ ಇಲಾಖೆ ಆಯುಕ್ತರ ಜೊತೆಗೆ, 108 ಆ್ಯಂಬುಲೆನ್ಸ್ ನೌಕರರ ಸಂಘ ನಡೆಸಿದ ಸಭೆಯಲ್ಲಿ ಜಿವಿಕೆ ಸಂಸ್ಥೆ ಹೇಳಿದೆ. 108 ಆ್ಯಂಬುಲೆನ್ಸ್ ಆರೋಗ್ಯ ಸಿಬ್ಬಂದಿಗಳಿಗೆ ಕಳೆದ 2 ತಿಂಗಳಿನಿಂದ ವೇತನ ನೀಡಿರಲಿಲ್ಲ. ಹೀಗಾಗಿ 108 ಆ್ಯಂಬುಲೆನ್ಸ್ ಆರೋಗ್ಯ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದರು. ಈ ಹಿನ್ನೆಲೆ ಇಂದು ಸಭೆ ನಡೆಸಲಾಗಿದೆ.
ಹಿನ್ನೆಲೆ
ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ: 108 ಸಿಬ್ಬಂದಿಗಿಲ್ಲ ದಸರಾ ಸಂಭ್ರಮ
ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎಂಬಂತಾಗಿದೆ 108 ಆರೋಗ್ಯ ಕವಚ ಸಿಬ್ಬಂದಿಗಳ ಪಾಡು. ಸಿಬ್ಬಂದಿಗಳಿಗೆ ವೇತನ ನೀಡಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಜೆವಿಕೆ ಕಂಪನಿಯವರು 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ 108 ಆರೋಗ್ಯ ಕವಚ ಸಿಬ್ಬಂದಿಗಳು ದಸರಾ ಹಬ್ಬ ಆಚರಿಸಿಲ್ಲ. ಇಂದು 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಆಯುಧ ಪೂಜೆ ಕೂಡ ಮಾಡಿಲ್ಲ. 108 ಆರೋಗ್ಯ ಕವಚ ಸಿಬ್ಬಂದಿಗಳ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಬಳಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ ಜಿವಿಕೆ ಕಂಪನಿ ಸಿಬ್ಬಂದಿಗಳಿಗೆ ಸಂಬಳ ಮಾತ್ರ ನೀಡಿರಲಿಲ್ಲ.
108 ಆರೋಗ್ಯ ಕವಚದ ಅಡಿಯಲ್ಲಿ ಮೂರು ಸಾವಿರ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಕಂಪನಿ ಇನ್ನೂ ಸಂಬಳ ಬಿಡುಗಡೆ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಮಧ್ಯಪ್ರವೇಶ ಮಾಡಬೇಕು. ಎರಡು ದಿನದಲ್ಲಿ ಸಂಬಳ ಬಿಡುಗಡೆ ಮಾಡುವಂತೆ ಮಾಡಬೇಕು ಎಂದು 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಕಳೆದ 26 ವರ್ಷಗಳ ಇತಿಹಾಸವನ್ನು ಅಳಸಿ ಪ್ರಥಮಬಾರಿಗೆ ಸೆಪ್ಟೆಂಬರ್ 1ನೇ ತಾರಿಕಿನಂದೇ ಸಂಬಳ ನೀಡಿದೆ. ಆದರೆ ಜಿವಿಕೆ ಕಂಪನಿ ಮಾತ್ರ ಕಳೆದ ಎರಡು ತಿಂಗಳಿಂದ ಸಿಬ್ಬಂದಿಗಳಿಗೆ ಸಿಬ್ಬಂದಿಗೆ ಸಂಬಳ ನೀಡಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Sat, 8 October 22