ಕರ್ತವ್ಯನಿರತ ಪೊಲೀಸರ ಆಘಾತಗಳಿಗೆ ನೂತನ ಪರಿಷ್ಕರಣಾ ಪರಿಹಾರ ಜಾರಿ

|

Updated on: Oct 22, 2019 | 9:41 PM

ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವಾಗ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಗಾಯಗೊಂಡಲ್ಲಿ ಅಥವಾ ಮೃತಪಟ್ಟಲ್ಲಿ ನೀಡಲಾಗುವ ಅನುಗ್ರಹ ಪೂರ್ವಕ ಮೊತ್ತದಲ್ಲಿ ನೂತನ ಪರಿಷ್ಕರಣಾ ದರ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿ ಅಥವಾ ಸಿಬ್ಬಂದಿ ಮರಣ ಹೊಂದಿದ್ದಲ್ಲಿ 30 ಲಕ್ಷ ಪರಿಹಾರ ಧನ ನೀಡಲಾಗುವುದು. ಕರ್ತವ್ಯದಲ್ಲಿದ್ದಾಗ ಶಾಶ್ವತ ಅಂಗವಿಕಲತೆ ಹೊಂದಿದ್ದಲ್ಲಿ 10 ಲಕ್ಷ ಪರಿಹಾರ ಧನ, ಕರ್ತವ್ಯ ನಿರತರಾಗಿದ್ದಾಗ ಗಂಭೀರ ಸ್ವರೂಪದ ಗಾಯಗಳಾದಾಗ 2 ಲಕ್ಷ ಪರಿಹಾರ ಧನ ಹಾಗೂ ಸಣ್ಣಪುಟ್ಟ ಗಾಯಗಳಾದಾಗ […]

ಕರ್ತವ್ಯನಿರತ ಪೊಲೀಸರ ಆಘಾತಗಳಿಗೆ ನೂತನ ಪರಿಷ್ಕರಣಾ ಪರಿಹಾರ ಜಾರಿ
Follow us on

ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವಾಗ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳು ಗಾಯಗೊಂಡಲ್ಲಿ ಅಥವಾ ಮೃತಪಟ್ಟಲ್ಲಿ ನೀಡಲಾಗುವ ಅನುಗ್ರಹ ಪೂರ್ವಕ ಮೊತ್ತದಲ್ಲಿ ನೂತನ ಪರಿಷ್ಕರಣಾ ದರ ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿ ಅಥವಾ ಸಿಬ್ಬಂದಿ ಮರಣ ಹೊಂದಿದ್ದಲ್ಲಿ 30 ಲಕ್ಷ ಪರಿಹಾರ ಧನ ನೀಡಲಾಗುವುದು. ಕರ್ತವ್ಯದಲ್ಲಿದ್ದಾಗ ಶಾಶ್ವತ ಅಂಗವಿಕಲತೆ ಹೊಂದಿದ್ದಲ್ಲಿ 10 ಲಕ್ಷ ಪರಿಹಾರ ಧನ, ಕರ್ತವ್ಯ ನಿರತರಾಗಿದ್ದಾಗ ಗಂಭೀರ ಸ್ವರೂಪದ ಗಾಯಗಳಾದಾಗ 2 ಲಕ್ಷ ಪರಿಹಾರ ಧನ ಹಾಗೂ ಸಣ್ಣಪುಟ್ಟ ಗಾಯಗಳಾದಾಗ 1 ಸಾವಿರದಿಂದ 10 ಸಾವಿರದ ಒಳಗೆ‌ ಪರಿಹಾರ ಧನ ಕೊಡಲಾಗುವುದು.

ಪರಿಹಾರ ಧನ ನೀಡಲು ಅನ್ವಯವಾಗುವ ಅಂಶಗಳು
ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಾಗ ಅಂದರೆ ಮುಷ್ಕರ, ಪ್ರತಿಭಟನೆ, ಕಲ್ಲು ತೂರಾಟ‌, ಕೋಮುಗಲಭೆ ಮುಂತಾದ ಸಂದರ್ಭಗಳಿಗೆ ಮಾತ್ರ ಅನ್ವಯಿಸುತ್ತದೆ. ಅಪಾರಧ ಕೃತ್ಯವನ್ನ ತಡೆಗಟ್ಟುವ‌ ಸಂದರ್ಭದಲ್ಲಿ ಅಂದ್ರೆ ಕಳ್ಳತನ, ದರೋಡೆ, ಕೊಲೆ ಮುಂತಾದ ಕೃತ್ಯಗಳನ್ನು ತಡೆಗಟ್ಟುವ ಸಂದರ್ಭದಲ್ಲಿ ಗಾಯಗೊಂಡಲ್ಲಿ ಅಥವಾ ಮೃತಪಟ್ಟರೆ ನೀಡಲಾಗುವ ಪರಿಹಾರ ಧನವಾಗಿದೆ.