ಭೀಕರ ಮಳೆಗೆ ದುರ್ಗದಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಕುಸಿತ, ಅಚ್ಚರಿ ಮೂಡಿಸಿದ ಗರ್ಭಗುಡಿ ವಿಗ್ರಹ

ಚಿತ್ರದುರ್ಗ: ಎಲ್ಲೋ ದೂರದ ಕೇದಾರನಾಥ ಅಂತಹ ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿ ಬೆಟ್ಟಗಳು ಕುಸಿದವಂತೆ, ದೇಗುಲಗಳು ಕೊಚ್ಚಿ ಹೋದವಂತೆ, ದೊಡ್ಡದಾದ ಗುಡ್ಡ ಕುಸಿತವಾದವಂತೆ ಅಂತೆಲ್ಲಾ ನಾವು ಕೇಳುತ್ತಿದ್ದೆವು. ಆದರೆ ಈಗ ನಮ್ಮ ಮಧ್ಯೆಯೇ ಇಂತಹ ರುದ್ರ ಭಯಂಕರ ದೃಶ್ಯವನ್ನು ಕಾಣಬೇಕಾಯಿತು, ಅನುಭವಿಸುವಂತೆಯೋ ಆಗಿದೆ. ರಾಜ್ಯದಲ್ಲಿ ಈ ವರ್ಷ ಹಿಂದೆಂದು ಸುರಿಯದ ಭೀಕರ ಮಳೆಯೇ ಇದಕೆಲ್ಲ ಕಾರಣವಾಗಿದೆ. ಕೇದಾರನಾಥದಲ್ಲಿ ಅಲ್ಲ, ಇಲ್ಲೇ ದುರ್ಗದ ಬಳಿ ಮಳೆಗೆ ಕೊಚ್ಚಿಹೋದ ಪುರಾತನ ದೇವಸ್ಥಾನ ಬರದ ನಾಡು ಚಿತ್ರದುರ್ಗದಲ್ಲಿ ಒಂದೇ ಸಮನೆ ಮಳೆಯಾಗುತ್ತಿದ್ದು ಬೃಹತ್ […]

ಭೀಕರ ಮಳೆಗೆ ದುರ್ಗದಲ್ಲಿ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಕುಸಿತ, ಅಚ್ಚರಿ ಮೂಡಿಸಿದ ಗರ್ಭಗುಡಿ ವಿಗ್ರಹ
Follow us
ಸಾಧು ಶ್ರೀನಾಥ್​
|

Updated on:Oct 22, 2019 | 3:57 PM

ಚಿತ್ರದುರ್ಗ: ಎಲ್ಲೋ ದೂರದ ಕೇದಾರನಾಥ ಅಂತಹ ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿ ಬೆಟ್ಟಗಳು ಕುಸಿದವಂತೆ, ದೇಗುಲಗಳು ಕೊಚ್ಚಿ ಹೋದವಂತೆ, ದೊಡ್ಡದಾದ ಗುಡ್ಡ ಕುಸಿತವಾದವಂತೆ ಅಂತೆಲ್ಲಾ ನಾವು ಕೇಳುತ್ತಿದ್ದೆವು. ಆದರೆ ಈಗ ನಮ್ಮ ಮಧ್ಯೆಯೇ ಇಂತಹ ರುದ್ರ ಭಯಂಕರ ದೃಶ್ಯವನ್ನು ಕಾಣಬೇಕಾಯಿತು, ಅನುಭವಿಸುವಂತೆಯೋ ಆಗಿದೆ. ರಾಜ್ಯದಲ್ಲಿ ಈ ವರ್ಷ ಹಿಂದೆಂದು ಸುರಿಯದ ಭೀಕರ ಮಳೆಯೇ ಇದಕೆಲ್ಲ ಕಾರಣವಾಗಿದೆ.

ಕೇದಾರನಾಥದಲ್ಲಿ ಅಲ್ಲ, ಇಲ್ಲೇ ದುರ್ಗದ ಬಳಿ ಮಳೆಗೆ ಕೊಚ್ಚಿಹೋದ ಪುರಾತನ ದೇವಸ್ಥಾನ ಬರದ ನಾಡು ಚಿತ್ರದುರ್ಗದಲ್ಲಿ ಒಂದೇ ಸಮನೆ ಮಳೆಯಾಗುತ್ತಿದ್ದು ಬೃಹತ್ ಬೆಟ್ಟವೇ ಕುಸಿದಿದೆ. ಅದರ ಜೊತೆಗೆ ಬೆಟ್ಟದಲ್ಲಿದ್ದ ಪುರಾತನ ದೇಗುಲವೂ ಕುಸಿದು ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾತ್ರಿ‌ ಧಾರಾಕಾರ ಮಳೆ ಸುರಿದ ಹಿನ್ನೆಲೆ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದ ಬಳಿಯ ಐತಿಹಾಸಿಕ ಬೆಟ್ಟ ಕುಸಿತವಾಗಿದ್ದು, ಬೆಟ್ಟದಲ್ಲಿನ ಇತಿಹಾಸ ಪ್ರಸಿದ್ಧ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಕುಸಿತವಾಗಿದೆ. ಆದರೆ ಬೆಟ್ಟ ಕುಸಿತದ ನಡುವೆ ಅಚ್ಚರಿ ರೀತಿಯಲ್ಲಿ ದೇಗುಲದ ಗರ್ಭಗುಡಿಯಲ್ಲಿರುವ ರಂಗನಾಥಸ್ವಾಮಿ ವಿಗ್ರಹ ಮಾತ್ರ ಉಳಿದುಕೊಂಡಿದೆ. ಬೆಟ್ಟದ ಕೆಳಭಾಗದಲ್ಲಿನ ಹನುಮಪ್ಪ ದೇಗುಲಕ್ಕೂ ಹಾನಿಯಾಗಿದೆ. ಕುಸಿದ ದೇಗುಲ ನೋಡಲು ಊರಿನ ಜನ ಕುತೂಹಲದಿಂದ ಬೆಟ್ಟದತ್ತ ತೆರಳುತ್ತಿದ್ದಾರೆ.

https://www.instagram.com/p/B36ilQ3Hpzm/?utm_source=ig_web_copy_link

Published On - 2:02 pm, Tue, 22 October 19

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ