AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡತ ವಿಲೇವಾರಿ ತ್ವರಿತಗೊಳಿಸಲು ಸರ್ಕಾರ ದಿಟ್ಟ ಹೆಜ್ಜೆ: ಡಿಪಿಎಆರ್ ಸುತ್ತೋಲೆಯ ವಿವರ ಹೀಗಿದೆ

ಕರ್ನಾಟಕ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ತ್ವರಿತಗೊಳಿಸಲು ಆಡಳಿತ ಸುಧಾರಣೆಗೆ ಮುಂದಾಗಿದೆ. ಈ ಕುರಿತಾಗಿ ಸರ್ಕಾರಿ ಕಚೇರಿಗಳಲ್ಲಿ ಕಡತಗಳ ವಿಲೇವಾರಿಯನ್ನು ಶೀಘ್ರಗೊಳಿಸಲು ಹೊಸ ಸುತ್ತೋಲೆ ಹೊರಡಿಸಲಾಗಿದೆ. ಸಚಿವಾಲಯ ಕೈಪಿಡಿ-2005ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕಡತಗಳನ್ನು ಬಾಕಿ ಉಳಿಸಿಕೊಳ್ಳದೆ ಅದೇ ದಿನ ವಿಲೇವಾರಿ ಮಾಡಲು ಸೂಚಿಸಲಾಗಿದೆ.

ಕಡತ ವಿಲೇವಾರಿ ತ್ವರಿತಗೊಳಿಸಲು ಸರ್ಕಾರ ದಿಟ್ಟ ಹೆಜ್ಜೆ: ಡಿಪಿಎಆರ್ ಸುತ್ತೋಲೆಯ ವಿವರ ಹೀಗಿದೆ
ವಿಧಾನಸೌಧImage Credit source: Getty images
ಗಂಗಾಧರ​ ಬ. ಸಾಬೋಜಿ
|

Updated on: Oct 02, 2026 | 10:01 PM

Share

ಮುಖ್ಯಾಂಶಗಳು

  • ಕಡತಗಳ ತ್ವರಿತ ವಿಲೇವಾರಿಗೆ ಕಟ್ಟುನಿಟ್ಟಿನ ನಿಯಮ
  • ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ
  • ಆಡಳಿತ ಸುಧಾರಣೆಗೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ

ಬೆಂಗಳೂರು, ಅಕ್ಟೋಬರ್​​ 02: ಕರ್ನಾಟಕ ಸರ್ಕಾರ ಇತ್ತೀಚೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ‘ಪ್ರಜಾಸೇವಾ ಯೋಜನೆ‘ಯನ್ನು ಜಾರಿಗೆ ತಂದಿದೆ. ಆ ಮೂಲಕ ಜನರ ಮನೆಬಾಗಿಲಿಗೆ ಸಚಿವರು ಹಾಗೂ ಶಾಸಕರು ತೆರಳಿ ಅಹವಾಲು ಸ್ವೀಕರಿಸಿ, ತ್ವರಿತವಾಗಿ ಬಗೆಹರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದೀಗ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಇಲಾಖೆಗಳ ಒಳಗೆ ಕಡತ ವಿಲೇವಾರಿ ತ್ವರಿತಗೊಳಿಸಲು ಆಜ್ಞೆ ಹೊರಡಿಸಲಾಗಿದೆ.

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಸಚಿವಾಲಯ ಕೈಪಿಡಿ–2005ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ?

ದಿನನಿತ್ಯದ ಕಡತ ವಿಲೇವಾರಿ ನಿಯಮಗಳು ಶಾಖಾಧಿಕಾರಿಗಳು ಹಾಗೂ ಮೇಲಧಿಕಾರಿಗಳು ತಮ್ಮ ಬಳಿಗೆ ಬರುವ ಹೊಸ ಟಪ್ಪಾಲು ಅಥವಾ ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳದೆ, ಅದೇ ದಿನವೇ ವಿಲೇವಾರಿ ಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಕಾರಣಗಳನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಲಿಖಿತವಾಗಿ ದಾಖಲಿಸಬೇಕು.

ಮಾಸಿಕ ವಿಲೇವಾರಿ ವರದಿ

ಕಿರಿಯ ಸಹಾಯಕರು, ತತ್ಸಮಾನ ನೌಕರರು ಹಿಂದಿನ ತಿಂಗಳ ಅಂತ್ಯದವರೆಗೆ ಬಾಕಿ ಇರುವ ಹಾಗೂ ವಿಲೇವಾರಿ ಮಾಡಿದ ಎಲ್ಲಾ ಕಡತಗಳು ಮತ್ತು ಕಡತಕ್ಕೆ ಸೇರಿಸದ ಸ್ವೀಕೃತಿಗಳನ್ನು ಪಟ್ಟಿ ಮಾಡಿ, ಆ ಪಟ್ಟಿಯನ್ನು ಪ್ರತಿ ತಿಂಗಳ 3ನೇ ಕೆಲಸದ ದಿನದೊಳಗೆ ಸಿದ್ಧಪಡಿಸಬೇಕು.

ಇದನ್ನೂ ಓದಿ: ಹಲವೆಡೆ ಸುರಿದ ಮಳೆ ಎಫೆಕ್ಟ್​​: ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆ ಶೇ.25ರಷ್ಟು ಕುಸಿತ

ಪ್ರತಿ ತಿಂಗಳು ಅಧೀನ ಕಾರ್ಯದರ್ಶಿಗಳು 2 ವರ್ಷಗಳೊಳಗೆ ಬಾಕಿ ಇರುವ ಕಡತಗಳನ್ನು, ಅವರ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳು 2 ರಿಂದ 4 ವರ್ಷಗಳವರೆಗೆ ಬಾಕಿ ಇರುವ ಕಡತಗಳನ್ನು ಹಾಗೂ ಇಲಾಖಾ ಕಾರ್ಯದರ್ಶಿಗಳು 4 ವರ್ಷಕ್ಕಿಂತ ಹೆಚ್ಚು, ಬಾಕಿ ಇರುವ ಕಡತಗಳನ್ನು ಸಂಬಂಧಿತ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಬೇಕು.

ವಿಲೇವಾರಿ ಪ್ರಕ್ರಿಯೆಗೆ ನಿರ್ದಿಷ್ಟ ಗಡುವು

ಇನ್ನು ಮೂರು ತಿಂಗಳಿಗಿಂತ ಹೆಚ್ಚು ಕಾಲ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಎಲ್ಲಾ ಪ್ರಕರಣಗಳ ಸಂಪೂರ್ಣ ಪಟ್ಟಿಯನ್ನು ಇಲಾಖಾ ಮುಖ್ಯಸ್ಥರು ಕಾರ್ಯದರ್ಶಿಗಳ ವೈಯಕ್ತಿಕ ಗಮನಕ್ಕೆ ತರಬೇಕು. ಕಾರ್ಯದರ್ಶಿಗಳು ಪ್ರಕರಣಗಳು ಬಾಕಿ ಉಳಿಯಲು ಕಾರಣವೇನು ಎಂದು ಪರಿಶೀಲನೆ ಮಾಡಿ ಪ್ರಕರಣಗಳ ಶೀಘ್ರ ಅಂತಿಮ ಆದೇಶಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು.

LIVE TV

ಒಂದು ತಿಂಗಳಿಗಿಂತ ಹೆಚ್ಚು ಬಾಕಿ ಇರುವ ಪ್ರಕರಣಗಳ ಪಟ್ಟಿಯನ್ನು ಕಾರ್ಯದರ್ಶಿಗಳು ಪರಿಶೀಲಿಸಿ, ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳಿಗೆ ವರದಿಯನ್ನು ಸಲ್ಲಿಸಬೇಕು. ಸಚಿವರ ಆಪ್ತ ಕಾರ್ಯದರ್ಶಿಗಳು, ಸಚಿವರ ಬಳಿ ಬಾಕಿ ಇರುವ ಪ್ರಕರಣಗಳ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿ, ಮುಂದಿನ ತಿಂಗಳ ಮೊದಲ ವಾರದೊಳಗೆ ಮುಖ್ಯಕಾರ್ಯದರ್ಶಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕು.

ಇದನ್ನೂ ಓದಿ: ಸಂಪುಟ ಸಭೆ ಮುಂದೂಡಿ ಧರಣಿ ನಡೆಸಿದ್ದು ಕರಾಳ ಇತಿಹಾಸ: ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

ಸಚಿವಾಲಯ ಕೈಪಿಡಿಯಲ್ಲಿ ಸೂಚಿಸಿರುವಂತೆ ಸ್ವೀಕೃತಿ, ಕಡತಗಳ ವಿಲೇವಾರಿಗಳ ಕುರಿತು ಕ್ರಮವಹಿಸಿ ಪ್ರತಿ ತಿಂಗಳ 2ನೇ ಸೋಮವಾರದಂದು ಕೈಗೊಂಡ ಕ್ರಮದ ವರದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸುವಂತೆ ಸುತ್ತೋಲೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More