
ಬೆಂಗಳೂರು, (ಜನವರಿ 16): ಕರ್ನಾಟಕದಲ್ಲಿ (Karnataka) ಮತ್ತೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು (Students elections) ನಡೆಸುವ ಸಂಬಂಧ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಮೊದಲ ಹಂತದ ಸಭೆ ಸಹ ಆಗಿದೆ. ಉನ್ನತ್ತ ಶಿಕ್ಷಣ ಇಲಾಖೆಯು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದ್ರೆ ಈ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಚುನಾವಣೆ ಬೇಕಾ ?ಬೇಡ್ವಾ ಎನ್ನುವ ಬಗ್ಗೆ ಅಭಿಪ್ರಾಯ ಕೇಳಲಾಗಿದೆ.
ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ಆದ್ರೆ ಇದಕ್ಕೆ ಈಗ ಕಾಲೇಜುಗಳಲ್ಲಿ ಹಾಗೂ ವಿವಿಗಳಲ್ಲಿ ಚುನಾವಣೆ ಬೇಕಾ? ಇದರಿಂದ ವಿದ್ಯಾರ್ಥಿಗಳ ನಡುವೆ ಜಗಳ ಕಿತ್ತಾಟ ಹೊಡೆದಾಟ ರಾಜಕೀಯ ಶುರುವಾಗುತ್ತೆ ಎನ್ನುವ ಪರ ವಿರೋಧ ಅಭಿಪ್ರಾಯ ಕೇಳಿ ಬಂದಿತ್ತು. ಹೀಗಾಗಿ ಸರ್ಕಾರ ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ಬೇಕಾ ಬೇಡ್ವ ಎಂಬುವುದರ ಕುರಿತು ಶಿಕ್ಷಣ ತಜ್ಞರು ಸಾರ್ವಜನಿಕರು ಹಾಗೂ ಪೋಷಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ.
ಪೋಷಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಏನು ಎಂಬ ಅಭಿಪ್ರಾಯ ಪಡೆದು ಚುನಾವಣೆ ಅಖಾಡಕ್ಕೆ ತಯಾರಿ ತಯಾರಿ ಮಾಡಲಾಗುತ್ತದೆ. ಹೀಗಾಗಿ ಅಭಿಪ್ರಾಯ ಸಂಗ್ರಹಕ್ಕೆ ಪ್ರತ್ಯೇಕ ಮೇಲ್ ಐಡಿ ಕೂಡಾ ನೀಡಿ ಪೋಷಕರ ಅಭಿಪ್ರಾಯ ಕೇಳಿದೆ. ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ karstudentselections@gmail.com ಇಲ್ಲಿ ಸಲಹೆ ರೂಪದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದಾಗಿದೆ.
ಯುವಕರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ತಿಳಿವಳಿಕೆ ಅರಿವು ಇರಬೇಕು. ನಾಯಕತ್ವ ಗುಣ ಅಳವಡಿಸಿಕೊಳ್ಳೋದಕ್ಕೆ ಇದು ಬುನಾದಿ ಆಗತ್ತೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಬೇಕಾದರೆ ಚುನಾವಣೆ ನಡೆಸುವುದು ಅತ್ಯಗತ್ಯ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ರಾಜ್ಯದ ಕಾಲೇಜುಗಳಲ್ಲಿ ಚುನಾವಣೆಗಳು ಆಗಬ್ಬೇಕು. ಅದರ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಒಂದು ವರದಿ ಒಪ್ಪಿಸಲಿಕ್ಕೆ ಹೇಳಿದ್ದಾರೆ. ಆ ಕಮಿಟಿ ಮುಖ್ಯಸ್ಥನನ್ನಾಗಿ ನನ್ನನ್ನ ನೇಮಕ ಮಾಡಿದ್ದಾರೆ. ಈಗಾಗಲೇ ಒಂದು ಸಭೆ ಮಾಡಿದ್ದೇವೆ. ಈಗ ಚುನಾವಣೆಗಳನ್ನ ಮಾಡ್ಬೇಕಂದ್ರೆ ಹೇಗೆ ಮಾಡಬೇಕು? ಅದರ ರೂಪುರೇಷೆ ಹೇಗಿರಬೇಕು? ಟರ್ಮ್ಸ್ ಆಫ್ ರೆಫರನ್ಸ್ ಬಗ್ಗೆ ಚರ್ಚೆ ಆಗಿದೆ. ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ತಿವಿ ಎಂದಿದ್ದಾರೆ.
ಒಟ್ಟಿನಲ್ಲಿ ದಶಕಗಳ ಬಳಿಕ ಬ್ಯಾನ್ ಮಾಡಿದ್ದ ಎಲೆಕ್ಷನ್ ಈಗ ಮತ್ತೆ ಕಾಲೇಜು ಹಾಗೂ ವಿವಿಗಳಲ್ಲಿ ನಡೆಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರು ಶಿಕ್ಷಕರು ಸೇರಿದಂತೆ ಅನೇಕರ ಅಭಿಪ್ರಾಯಗಳನ್ನು ಸಲಹೆಗಳ ರೂಪದಲ್ಲಿ ಪಡೆಯಲು ಸಮಿತಿ ಮುಂದಾಗಿದ್ದು, ಕಾಲೇಜು ವಿವಿಗಳಲ್ಲಿ ಈ ವರ್ಷದಿಂದಲೇ ಮತ್ತೆ ಚುನಾವಣೆ ಆಂಭವಾಗುತ್ತಾ ಅಂತ ಕಾದುನೋಡಬೇಕಿದೆ.
Published On - 10:21 pm, Fri, 16 January 26