ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಕರ್ನಾಟಕ ಸರ್ಕಾರ (Karnataka Government) ಪೊಲೀಸ್ ಇಲಾಖೆಯಲ್ಲಿ (Police Department) ಮೇಜರ್ ಸರ್ಜರಿಯನ್ನು ಮಾಡುತ್ತಿದೆ. ಉನ್ನತ ಉದ್ದೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಈ ಹಿಂದೆ ನೂರಾರು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿತ್ತು. ಈ ನಂತರ ನಾಲ್ಕು ದಿನಗಳ ಹಿಂದೆ ಸಿವಿಲ್ ಡಿವೈಎಸ್ಪಿಗಳುಗಳನ್ನು ಮತ್ತು ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿತ್ತು. ಇದೀಗ ಮತ್ತೆ ಐವರು ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಮತ್ತಷ್ಟು ವೇಗ! ಅಭ್ಯರ್ಥಿಗಳ ಆಯ್ಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದರು ಮಾರ್ಗಸೂಚಿ
ರಾಜ್ಯ ಸರ್ಕಾರ 45 ಜನ ಸಿವಿಲ್ ಡಿವೈಎಸ್ಪಿಗಳು, 8 ಜನ ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಡಿಜಿಪಿ ಮತ್ತು ಐಜಿಪಿ ಆದೇಶ ಹೊರಡಿಸಿದ್ದಾರೆ.
2ನೇ ಬಾರಿ ಬೆಂಗಳೂರು ನಗರ ಡಿಸಿ ಆಗಿ ಕೆ.ಎ.ದಯಾನಂದ ನೇಮಕ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಕೆ.ಎ.ದಯಾನಂದ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿದೆ. ಬೆಂಗಳೂರು ನಗರ ಡಿಸಿ ಆಗಿದ್ದ ಶ್ರೀನಿವಾಸ್ ಅಮಾನತುಗೊಂಡಿದ್ದಾರೆ. ಇದರಿಂದ ಅವರ ಬಳಿಕ ಸರ್ಕಾರ ಹೊಸಬರನ್ನು ನೇಮಕ ಮಾಡಿರಲಿಲ್ಲ. ಹಿಗಾಗಿ ಸರ್ಕಾರ ಕೆ.ಎ.ದಯಾನಂದ ಅವರನ್ನು ನೇಮಕ ಮಾಡಿದೆ.
ಇದನ್ನೂ ಓದಿ: ಮೇಲ್ಮನೆ ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕರ್ನಾಟಕ ವಿಧಾನ ಪರಿಷತ್ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ
ಕೆ.ಎ.ದಯಾನಂದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ 2ನೇ ಸಲ ನೇಮಕವಾಗಿದ್ದಾರೆ. ವಿಪಕ್ಷನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Wed, 21 December 22