Basavaraj Horatti: ಮೇಲ್ಮನೆ ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಕರ್ನಾಟಕ ವಿಧಾನ ಪರಿಷತ್ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ
Legislative Council Chairman: ಎಂಟು ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು ಪರಿಷತ್ತಿನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ: ಎಂಟು ಬಾರಿ ವಿಧಾನಪರಿಷತ್ (Legislative Council) ಸದಸ್ಯರಾಗಿರುವ ಬಸವರಾಜ ಹೊರಟ್ಟಿ (Basavaraj Horatti) ಅವರು ಪರಿಷತ್ತಿನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರ ಹಿರಿತನವನ್ನು ಪರಿಗಣಿಸಿ ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ಎರಡೂ ಪಕ್ಷಗಳು ಅವರ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸದ ಕಾರಣ ಸುಮಾರು ಮೂರು ದಶಕಗಳ ನಂತರ ಹೊರಟ್ಟಿ ಮೇಲ್ಮನೆ ಸಭಾಪತಿಯಾಗಿ (Legislative Council Chairman) ಆಯ್ಕೆಯಾಗಿದ್ದಾರೆ. ಹೊರಟ್ಟಿ ಅವರು ಜೆಡಿಎಸ್‌ನಿಂದ ಹೊರಬಂದಾಗ ಬಿಜೆಪಿ (BJP) ಪಕ್ಷವು ಅವರಿಗೆ ಸಭಾಪತಿ ಸ್ಥಾನದ ಭರವಸೆ ನೀಡಿತ್ತು. ಜನತಾ ಪರಿವಾರದಿಂದ ಏಳು ಬಾರಿ ಗೆದ್ದಿರುವ (MLC) ಅವರು ಅಕ್ಟೋಬರ್ 2022 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.
43 ವರ್ಷಗಳಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿಯಾಗಿ ಆಯ್ಕೆಯಾಗಿರುವ ಹೊರಟ್ಟಿ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ನೀರಾವರಿ ಸಚಿವ ಗೋವಿಂದ ಕಾರಜೋಳ, ಪರಿಷತ್ತಿನ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಸದಸ್ಯ ಎಸ್.ವಿ. ಸಂಕನೂರು ಉಪಸ್ಥಿತರಿದ್ದರು.
ಹಿಂದಿನ ವಿಧಾನಸಭೆ ಅಧಿವೇಶನದಲ್ಲಿ ಹೊರಟ್ಟಿ ಅವರನ್ನು ಸಭಾಪತಿಯಾಗಿ ಆಯ್ಕೆ ಮಾಡಬೇಕಿತ್ತು, ಆದರೆ ಸಭಾಪತಿ ಆಯ್ಕೆ ಚುನಾವಣೆಯನ್ನು ಮುಂದೂಡಲಾಗಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಚನೆ ಮೇರೆಗೆ ಬೊಮ್ಮಾಯಿ ಅವರು ಆ ಚುನಾವಣೆಯನ್ನು ಮುಂದೂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ! ಸಿಎಂ ಬೊಮ್ಮಾಯಿಗೆ ಥ್ಯಾಂಕ್ಸ್
ಆದರೆ ಆಗ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಆಯ್ಕೆ ಮಾಡದಿರುವುದು ಅವರ ಬೆಂಬಲಿಗರಲ್ಲಿ ತಪ್ಪು ಸಂದೇಶ ರವಾನೆಯಾಗಿದೆ. ವಿಧಾನಪರಿಷತ್ ಸಭಾಪತಿಯಾಗುವ ಭರವಸೆ ನೀಡಿ ಪಕ್ಷಕ್ಕೆ ಕರೆತಂದಿರುವ ಹಿನ್ನೆಲೆಯಲ್ಲಿ ಅವರನ್ನು ಆ ಸ್ಥಾನದಲ್ಲಿ ಕೂಡಿಸಬೇಕು ಎಂದು ಬಿಜೆಪಿಯ ಕೆಲ ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಸಿಎಂ ಬೊಮ್ಮಾಯಿ ಸಹ ದನಿಯಾಗಿದ್ದರು.
ಇದನ್ನು ಪರಿಗಣಿಸಿ ಡಿಸೆಂಬರ್ 21ರಂದು ಚುನಾವಣೆ ನಡೆಸಲು ಪಕ್ಷ ನಿರ್ಧರಿಸಿ, ಹಂಗಾಮಿ ಸಭಾಪತಿ ರಘುನಾಥ ಮಲ್ಕಾಪುರೆ ಅವರು ಹೊರಟ್ಟಿಗೆ ಹಾದಿ ಸುಗಮಗೊಳಿಸಿದ್ದಾರೆ. ರಾಜ್ಯಪಾಲರು ಚುನಾವಣೆಗೆ ಅನುಮೋದನೆ ನೀಡಿ, ಬಿಜೆಪಿ ಕೋರ್ ಕಮಿಟಿ ಕೂಡ ಹೊರಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಂಡಿದೆ.
ಇದನ್ನೂ ಓದಿ: ಎಲ್ಲರ ಜೊತೆಗೂ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್: ರಾಯಚೂರಿನ ಲೇಡಿ ಎಸ್ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್!
76 ವರ್ಷ ವಯಸ್ಸಿನ ಹೊರಟ್ಟಿ ಅವರು ಜೂನ್ 22, 2018 ರಿಂದ ಡಿಸೆಂಬರ್ 12, 2018 ಮತ್ತು ಫೆಬ್ರವರಿ 16, 2021 ರಿಂದ ಮೇ 16, 2022 ರವರೆಗೆ ಎರಡು ಸಂದರ್ಭಗಳಲ್ಲಿ ಪರಿಷತ್ತಿನ ಹಂಗಾಮಿ ಅಧ್ಯಕ್ಷರಾಗಿದ್ದರು. ಹೊರಟ್ಟಿ ಮೊದಲ ಬಾರಿಗೆ 1980 ರಲ್ಲಿ MLC ಯಾಗಿ ಆಯ್ಕೆಯಾದವರು ದಾಖಲೆಯ 8ನೇ ಬಾರಿಗೆ ಗೆಲುವಿನ ಸರಣಿ ಮುಂದುವರಿಸಿದರು. ಅವರು ಹಲವಾರು ಸರ್ಕಾರಗಳಲ್ಲಿ ಸಚಿವರಾಗಿದ್ದರು. ಪ್ರಾಥಮಿಕ ಶಿಕ್ಷಣದ ಜೊತೆಗೆ ಎರಡು ಬಾರಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:01 am, Wed, 21 December 22