ಎಲ್ಲರ ಜೊತೆಗೂ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್: ರಾಯಚೂರಿನ ಲೇಡಿ ಎಸ್​ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್!

ಒಂದರ ಮೇಲೊಂದರಂತೆ ಆರೋಪಗಳ ಸರಮಾಲೆ ಕೇಳಿ ಬಂದ ಹಿನ್ನೆಲೆ, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಿರವಾರ ಅವರು ಲೇಡಿ ಪಿಎಸ್ ಐ ಗೀತಾಂಜಲಿ ಸಿಂಧೆ ಅವರನ್ನ ಅಮಾನತು ಮಾಡಿ ಆದೇಶಿಸಿದ್ದಾರೆ.

ಎಲ್ಲರ ಜೊತೆಗೂ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್: ರಾಯಚೂರಿನ ಲೇಡಿ ಎಸ್​ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್!
ರಾಯಚೂರಿನ ಲೇಡಿ ಪಿಎಸ್​ಐ ಗೀತಾಂಜಲಿ ಕೊನೆಗೂ ಸಸ್ಪೆಂಡ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 19, 2022 | 2:21 PM

ಅಲ್ಲಿ ಪೊಲೀಸ್ ಸ್ಟೇಷನ್ ಇನ್ ಚಾರ್ಜ್‌ ಲೇಡಿ ಪಿಎಸ್ಐ (PSI) ವಿರುದ್ಧ ಆರೋಪಿಗಳ ಸರಮಾಲೆಯೇ ಕೇಳಿಬಂದಿತ್ತು.. ರೈತರ ಜೊತೆ ಕಿರಿಕ್, ಠಾಣೆಯಲ್ಲಿ ಬರ್ತ್ ಡೇ ಸೆಲೆಬ್ರೇಶನ್, ಅಷ್ಟೇ ಯಾಕೇ ತನ್ನ ಸಾವಿಗೆ ಇದೇ ಪಿಎಸ್ಐ ಮೇಡಂ ಕಾರಣ ಅಂತ ಯುವಕನೊಬ್ಬ ಪತ್ರ ಬರೆದಿಟ್ಟು ಎಸ್ಕೇಪ್ ಆಗಿದ್ದ.. ಇಷ್ಟೆಲ್ಲಾ ಕಿರಿಕ್ ಗಳ ಬೆನ್ನಲ್ಲೇ ಆ ಪಿಎಸ್ ಐ ಮೇಡಂ ಕೊನೆಗೂ ಸಸ್ಪೆಂಡ್ (suspend) ಆಗಿದ್ದಾರೆ.

ಮೇಲಿನ ಚಿತ್ರದಲ್ಲಿ ಯುನಿಫಾರ್ಮ್ನಲ್ಲಿ ನಿಂತಿರೊ ಈ ಮೇಡಂ ಹೆಸ್ರು ಗೀತಾಂಜಲಿ ಸಿಂಧೆ. ರಾಯಚೂರು ಜಿಲ್ಲೆ ಸಿರವಾರ (Siravara) ಪೊಲೀಸ್ ಠಾಣೆಯ ಪಿಎಸ್ಐ. ಇದೇ ಪಿಎಸ್ಐ ಮೇಡಂ ಈಗ ಭಾರೀ ಸುದ್ದಿಯಾಗಿದ್ದಾರೆ. ಸಿರವಾರ ಪಿಎಸ್ಐ ಗೀತಾಂಜಲಿ ಅವರ ವಿರುದ್ಧ ಆರೋಪಗಳ ಸರಮಾಲೆಯೇ ಕೇಳಿ ಬಂದಿದೆ. ಈ ಹಿಂದೆ ಪಿಎಸ್ ಐ ಮೇಡಂ ತಮ್ಮ ಹುಟ್ಟುಹಬ್ಬವನ್ನ (birthday) ಸಿರವಾರ ಪೊಲೀಸ್ ಠಾಣೆಯಲ್ಲೇ ಆಚರಿಸಿಕೊಂಡಿದ್ರು.. ಈ ಮೂಲಕ ಇಲಾಖೆಯ‌ ಆದೇಶವನ್ನು ಗಾಳಿಗೆ ತೂರಿರೊ ಆರೋಪ ಕೇಳಿ ಬಂದಿತ್ತು.

ಇದಾದ ಬಳಿಕ ಠಾಣೆಯೊಳಗಡೆಯಿದ್ದ ಆರೋಪಿಯೊಬ್ಬ ಎಸ್ಕೇಪ್ ಆಗಿದ್ದ. ಈ ಕೇಸ್ ಕೂಡ ಗೀತಾಂಜಲಿ ಅವರಿಗೆ ತಿರುಗುಬಾಣವಾಗಿತ್ತು. ಇದೆಲ್ಲಾ ತಣ್ಣಗಾಯ್ತು ಅನ್ನೋವಾಗ್ಲೆ ಇತ್ತೀಚೆಗೆ ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ರೈತರ ಮೇವಿನ ಟ್ರಾಕ್ಟರ್ ಟಚ್ ಆದ ಬಗ್ಗೆ ಕಿರಿಕ್ ಮಾಡಿಕೊಂಡಿದ್ರು. ಆ ವಿಡಿಯೋಗಳು ಕೂಡ ವೈರಲ್ ಆಗಿದ್ವು. ಹೀಗೆ ಒಂದರ ಮೇಲೊಂದರಂತೆ ಆರೋಪಗಳ ಸರಮಾಲೆ ಕೇಳಿ ಬಂದ ಹಿನ್ನೆಲೆ, ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಿರವಾರ ಅವರು ಲೇಡಿ ಪಿಎಸ್ ಐ ಗೀತಾಂಜಲಿ ಸಿಂಧೆ ಅವರನ್ನ ಅಮಾನತು ಮಾಡಿ ಆದೇಶಿಸಿದ್ದಾರೆ.

ಪಿಎಸ್ ಐ ಗೀತಾಂಜಲಿ ಸಿಂಧೆ ವಿರುದ್ಧ ಇಷ್ಟೆಲ್ಲಾ ಆರೋಪಗಳು ಕೇಳಿ ಬಂದಿದ್ದರೂ ಅವರ ಮೇಲೆ ಕ್ರಮವಾಗಿಲ್ಲ ಅಂತ ಸಾರ್ವಜನಿಕರು ಆರೋಪಿಸಿದ್ದರು. ಆದ್ರೆ ಈ ಮಧ್ಯೆ ಸಿರವಾರ ಪಟ್ಟಣದ ನಿವಾಸಿ ತಾಯಣ್ಣ ಅನ್ನೋ ಯುವಕ, ಇದೇ ಪಿಎಸ್ ಐ ಮೇಡಂ ಹೆಸರು ಬರೆದಿಟ್ಟು ನಾಪತ್ತೆಯಾಗಿದ್ದ.. ತನ್ನ ಸಾವಿಗೆ ಪಿಎಸ್ ಐ ಗೀತಾಂಜಲಿ ಕಾರಣ ಅಂತ ಲೆಟರ್ ಬರೆದಿಟ್ಟು ಊರು ಬಿಟ್ಟುಹೋಗಿದ್ದ.

ನಿತ್ಯ ಈ ಮೇಡಂ ಕಂಡಕಂಡಲ್ಲಿ ಕಿರುಕುಳ ಕೊಡ್ತಾರಂತೆ. ತಮ್ಮ ಕುಟುಂಬಸ್ಥರ ಮಧ್ಯದ ಸಿವಿಲ್ ಡಿಸ್ಪ್ಯೂಟ್ ನಲ್ಲಿ ಗೀತಾಂಜಲಿ ಅವರು ಮಧ್ಯಸ್ಥಿಕೆ ವಹಿಸಿದಾರೆ ಅಂತಾ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲ ತನ್ನ ವಿರುದ್ಧ ರೌಡಿ ಶೀಟ್ ಓಪನ್ ಮಾಡೋದಾಗಿ ಬೆದರಿಸಿದ್ದಾರೆ ಅಂತ ಆರೋಪಿಸಿ ಪತ್ರ ಬರೆದಿಟ್ಟು ತಾಯಣ್ಣ ನಾಪತ್ತೆಯಾಗಿದ್ದ. ಈತ ಬರೆದಿಟ್ಟಿದ್ದ ಲೆಟರ್ ಗಳು ವೈರಲ್ ಆಗಿದ್ವು. ಖುದ್ದು ತಾಯಣ್ಣನ ಕುಟುಂಬಸ್ಥರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರನ್ನ ಭೇಟಿಯಾಗಿ ನ್ಯಾಯಕ್ಕಾಗಿ ಅಂಗಲಾಚಿದ್ದರು.. ಮಗನನ್ನ ಹುಡುಕಿಕೊಡಿ ಅಂತ ತಾಯಣ್ಣನ ಕುಟುಂಬಸ್ಥರು ಕಣ್ಣೀರ ಕೋಡಿಯನ್ನೇ ಹರಿಸಿದ್ದರು.

ಈ ಪ್ರಸಂಗವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ ಪಿ ನಿಖಿಲ್ ಬಿ ಅವರು ಖುದ್ದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ನಾಪತ್ತೆಯಾಗಿದ್ದ ತಾಯಣ್ಣನನ್ನ ಹುಡುಕಿ ಕರೆತಂದಿದ್ರು.. ಸದ್ಯ ಪಿಎಸ್ ಐ ಗೀತಾಂಜಲಿ ಅಮಾನತಾಗಿದ್ದು, ಇಲಾಖೆ ತನಿಖೆ‌ ಮುಂದುವರೆದಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 19 December 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ