ಬೆಂಗಳೂರು, ಸೆಪ್ಟೆಂಬರ್ 23: ಅಪಘಾತದಿಂದ (Accident) ಸಾವಿಗೀಡಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ (Karnataka Government) ಆಪದ್ಭಾಂಧವ ಆಂಬುಲೆನ್ಸ್ (Apathbandava Ambulance) ಆರಂಭಿಸಲಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಶೀಘ್ರದಲ್ಲಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ರಾಜ್ಯಾದ್ಯಂತ 65 ಸ್ಥಳಗಳಲ್ಲಿ ಆಪದ್ಭಾಂಧವ ಆಂಬುಲೆನ್ಸ್ ಇರುತ್ತದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಸ್ಥಳಗಳನ್ನು ಪೊಲೀಸ್ ಇಲಾಖೆ ಗುರುತಿಸಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ತುಮಕೂರು ಹೆದ್ದಾರಿ ಸೇರಿದಂತೆ ಹೆಚ್ಚು ಅಪಘಾತವಾಗುವ ಸ್ಥಳದಲ್ಲಿ ಆಪದ್ಭಾಂಧವ ಆಂಬುಲೆನ್ಸ್ ಸಂಚರಿಸಲಿದೆ.
ಇದನ್ನೂ ಓದಿ: ಅಂಗಾಂಗ ರವಾನೆ ವೇಳೆ ಆಂಬುಲೆನ್ಸ್ ಅಪಘಾತ; ಸ್ವಂತ ಗಾಯ ಲೆಕ್ಕಿಸದೆ ರೋಗಿಗೆ ಶ್ವಾಸಕೋಶ ಕಸಿ ಶಸ್ತ್ರಕ್ರಿಯೆ ನಡೆಸಿದ ವೈದ್ಯ
ಈ 65 ಸ್ಥಳಗಳಲ್ಲಿ ಆಪದ್ಭಾಂಧವ ಆಂಬುಲೆನ್ಸ್ನ್ನು ಆರೋಗ್ಯ ಇಲಾಖೆ ನಿಯೋಜನೆ ಮಾಡುತ್ತದೆ. ಆಪದ್ಭಾಂಧವ ಆಂಬುಲೆನ್ಸ್ನಲ್ಲಿ ಚಿಕಿತ್ಸೆ ನೀಡಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಆಪದ್ಭಾಂಧವ ಆಂಬುಲೆನ್ಸ್ ಸ್ಥಳಕ್ಕೆ ತೆರಳುತ್ತದೆ. ಅಲ್ಲಿ ಗಾಯಾಳುಗೆ ಬೇಕಾದ ತುರ್ತು ಚಿಕಿತ್ಸೆ ನೀಡಿ, ಸನಿಹದ ಆಸ್ಪತ್ರೆಗೆ ಕೊಂಡೊಯ್ಯುತ್ತದೆ. ಈ ಮೂಲಕ ಅಪಘಾತಕ್ಕೊಳಗಾದವರಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡುವುದು ಇದರ ಉದ್ದೇಶವಾಗಿದೆ. ಅಪಘಾತದಿಂದ ಜೀವ ಕಳೆದುಕೊಳ್ಳವರ ಪಾಲಿಗೆ ಈ ಸೇವೆ ಆಪದ್ಬಾಂಧವವಾಗಲಿದೆ.
2023ರಲ್ಲಿ ಸಂಭವಿಸಿದ 882 ಮಾರಣಾಂತಿಕ ಅಪಘಾತಗಳಲ್ಲಿ 910 ಜನರು ಮೃತಪಟ್ಟಿದ್ದಾರೆ. 4191 ಜನರು ಗಾಯಗೊಂಡಿದ್ದಾರೆ. 2024ರಲ್ಲಿ ಮೇ ಅಂತ್ಯದವರೆಗೆ ಸಂಭವಿಸಿದ 368 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. 376 ಜನರು ಮೃತಪಟ್ಟಿದ್ದಾರೆ. 2040 ಜನರು ಗಾಯಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 am, Mon, 23 September 24