ಅಂಗಾಂಗ ರವಾನೆ ವೇಳೆ ಆಂಬುಲೆನ್ಸ್ ಅಪಘಾತ; ಸ್ವಂತ ಗಾಯ ಲೆಕ್ಕಿಸದೆ ರೋಗಿಗೆ ಶ್ವಾಸಕೋಶ ಕಸಿ ಶಸ್ತ್ರಕ್ರಿಯೆ ನಡೆಸಿದ ವೈದ್ಯ
ಸೋಮವಾರ ರಾತ್ರಿ ಅಪಘಾತದಲ್ಲಿ ಗಾಯಗೊಂಡರೂ, ಡಾ. ಸಂಜೀವ್ ಜಾಧವ್ ಅವರು ತಮ್ಮ ಯೋಜಿತ ವೇಳಾಪಟ್ಟಿಯನ್ನು ಮುಂದುವರೆಸಿದರು. ಅವರ ವೈದ್ಯಕೀಯ ತಂಡದ ಸಹಾಯದಿಂದ ತಮಿಳುನಾಡು ರಾಜಧಾನಿಯಲ್ಲಿ 26 ವರ್ಷದ ರೋಗಿಗೆ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ನಡೆಸಿದರು.ಪುಣೆ ನಗರದ ಹೊರಗಿನ ಆಸ್ಪತ್ರೆಯಿಂದ ಶ್ವಾಸಕೋಶಗಳನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಪಿಂಪ್ರಿ-ಚಿಂಚ್‌ವಾಡ್ ಟೌನ್‌ಶಿಪ್‌ನಲ್ಲಿ ಅಪಘಾತಕ್ಕೀಡಾಗಿತ್ತು.
ಚೆನ್ನೈ ನವೆಂಬರ್ 23: ರೋಗಿಯೊಬ್ಬರಿಗೆ ಅಂಗಾಂಗ ಕಸಿ (Organ transplant) ಮಾಡಲು ಪುಣೆ (Pune) ಬಳಿಯ ಆಸ್ಪತ್ರೆಯಿಂದ ಶ್ವಾಸಕೋಶವನ್ನು(lungs) ಹೊತ್ತೊಯ್ಯುವ ವೈದ್ಯಕೀಯ ತಂಡದೊಂದಿಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ, ಅಪಘಾತದಲ್ಲಿ ಕಾರ್ಡಿಯೋಥೊರಾಸಿಕ್ ಸರ್ಜನ್ ಗಾಯಗೊಂಡಿದ್ದಾರೆ. ಅವರ ಗಾಯಗಳ ಹೊರತಾಗಿಯೂ, ಅವರು ತಮ್ಮ ಸ್ವಂತ ನೋವನ್ನು ನಿರ್ಲಕ್ಷಿಸಲು ನಿರ್ಧರಿಸಿದರು. ಗಂಟೆಗಳ ನಂತರ ಜೀವ ಉಳಿಸುವ ಶಸ್ತ್ರಚಿಕಿತ್ಸೆಯನ್ನು ಮಾಡಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.
ಸೋಮವಾರ ರಾತ್ರಿ ಅಪಘಾತದಲ್ಲಿ ಗಾಯಗೊಂಡರೂ, ಡಾ. ಸಂಜೀವ್ ಜಾಧವ್ ಅವರು ತಮ್ಮ ಯೋಜಿತ ವೇಳಾಪಟ್ಟಿಯನ್ನು ಮುಂದುವರೆಸಿದರು. ಅವರ ವೈದ್ಯಕೀಯ ತಂಡದ ಸಹಾಯದಿಂದ ತಮಿಳುನಾಡು ರಾಜಧಾನಿಯಲ್ಲಿ 26 ವರ್ಷದ ರೋಗಿಗೆ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ನಡೆಸಿದರು. ಪುಣೆ ನಗರದ ಹೊರಗಿನ ಆಸ್ಪತ್ರೆಯಿಂದ ಶ್ವಾಸಕೋಶಗಳನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಲೋಹೆಗಾಂವ್ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಪಿಂಪ್ರಿ-ಚಿಂಚ್‌ವಾಡ್ ಟೌನ್‌ಶಿಪ್‌ನಲ್ಲಿ ಅಪಘಾತಕ್ಕೀಡಾಗಿತ್ತು.
ನವಿ ಮುಂಬೈನ ಅಪೋಲೋ ಆಸ್ಪತ್ರೆಯ ಮುಖ್ಯ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ. ಜಾಧವ್, ಹ್ಯಾರಿಸ್ ಸೇತುವೆಯ ಮೇಲಿನ ಟ್ರಾಫಿಕ್ ಅಪಘಾತದ ನಂತರ ಆಂಬ್ಯುಲೆನ್ಸ್ ಅನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಟೈರ್ ಸ್ಫೋಟದಿಂದ ಅಪಘಾತ ಉಂಟಾಗಿರಬಹುದೆಂದು ಶಂಕಿಸಲಾಗಿದೆ. ವೈದ್ಯರ ತಂಡಲು ಕಸಿ ಮಾಡಲಿರುವ ಶ್ವಾಸಕೋಶದೊಂದಿಗೆ ವಿಮಾನ ನಿಲ್ದಾಣವನ್ನು ತಲುಪಿ, ಅಲ್ಲಿಂದ ಚಾರ್ಟರ್ಡ್ ವಿಮಾನ ಮೂಲಕ ಚೆನ್ನೈ ತಲುಪಿದ್ದಾರೆ.
ಸೋಮವಾರ, ಆತ್ಮಹತ್ಯೆ ಮಾಡಿಕೊಂಡ 19 ವರ್ಷದ ಯುವಕನ ಶ್ವಾಸಕೋಶವನ್ನು ಡಿ.ವೈ. ಪಿಂಪ್ರಿ-ಚಿಂಚ್‌ವಾಡ್‌ನಲ್ಲಿರುವ ಪಾಟೀಲ್ ಆಸ್ಪತ್ರೆಯಲ್ಲಿರಿಸಲಾಗಿತ್ತು. ಅದನ್ನುಚೆನ್ನೈನ ಅಪೊಲೊ ಆಸ್ಪತ್ರೆಗಳಿಗೆ ರವಾನಿಸಿ ಅಲ್ಲಿ ರೋಗಿಗೆ ಶ್ವಾಸಕೋಶ ಕಸಿ ಮಾಡಬೇಕಿತ್ತು. ರೋಗಿಯ ಶ್ವಾಸಕೋಶವನ್ನು ಕಸಿ ಮಾಡಲು ಚೆನ್ನೈಗೆ ಕಳುಹಿಸುವುದು ಬಹಳ ಮುಖ್ಯ ಎಂದು ಡಾ. ಜಾಧವ್ ಹೇಳಿದ್ದಾರೆ. ಏಕೆಂದರೆ ಮರುಪಡೆಯಲಾದ ಅಂಗವು ಸಾಮಾನ್ಯವಾಗಿ ಆರು ಗಂಟೆಗಳ ಕಾರ್ಯಸಾಧ್ಯತೆ ಹೊಂದಿದ್ದು ಆದಷ್ಟು ಬೇಗ ಅದನ್ನು ಕಸಿ ಮಾಡಬೇಕು ಎಂದು ಜಾಧವ್ ಹೇಳಿದ್ದೆ.
ನಾವು ದಾರಿಯಲ್ಲಿ ಹೋಗುತ್ತಿದ್ದಾಗ, ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ನಮ್ಮ ಆಂಬ್ಯುಲೆನ್ಸ್ ಅಪಘಾತಕ್ಕೀಡಾಯಿತು, ಬಹುಶಃ ಟೈರ್ ಸ್ಫೋಟಗೊಂಡ ಕಾರಣ ಈ ಅಪಘಾತ ಸಂಭವಿಸಿರಬೇಕು ಎಂದು ಅವರು ಹೇಳಿದರು, “ಅಪಘಾತದ ಪರಿಣಾಮವು ತುಂಬಾ ಹೆಚ್ಚಿತ್ತು, ಏಕೆಂದರೆ ಆಂಬ್ಯುಲೆನ್ಸ್‌ನ ಮುಂಭಾಗವು ನಜ್ಜುಗುಜ್ಜಾಗಿದೆ. ಸೇತುವೆಯ ರೇಲಿಂಗ್‌ಗೆ ಬಡಿದ ನಂತರ ಆಮ್ಲಜನಕ ಸಿಲಿಂಡರ್ ಕೂಡಾ ಹೊರಗೆ ಬಿತ್ತು ಎಂದು ಅವರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಹೊಡೆತದ ಮೇಲೆ ಹೊಡೆತ: ಮತ್ತೆ ತಮಿಳುನಾಡಿಗೆ ಕಾವೇರಿ ನಿರು ಹರಿಸಲು ಸೂಚನೆ
ಡಾ. ಜಾಧವ್ ಪ್ರಕಾರ, ಅವರ ಮೊಣಕಾಲುಗಳು, ಕೈಗಳು ಮತ್ತು ತಲೆಯ ಮೇಲೆ ಗಾಯಗಳಾಗಿವೆ ಮತ್ತು ಇತರ ತಂಡದ ಸದಸ್ಯರಿಗೂ ಗಾಯಗಳಾಗಿವೆ.” ಚಾಲಕನನ್ನು ಡಿ.ವೈ. ಪಾಟೀಲ್ ಆಸ್ಪತ್ರೆಗೆ ಸೇರಿಸಿದ್ದೇವೆ, ಅವರಿಗೂ ಗಾಯವಾಗಿದ್ದು ಆಸ್ಪತ್ರೆಯ ಮತ್ತೊಂದು ವಾಹನವನ್ನು ಬಳಸಿಕೊಂಡಿದ್ದೇವೆ ನಿಗದಿತ ಸಮಯದಲ್ಲಿ ಅಂಗಾಂಗವನ್ನು ಸಾಗಿಸುವುದು ಮುಖ್ಯವಾದ ಕಾರಣ ನಮ್ಮನ್ನು ಹಿಂಬಾಲಿಸಿ ಬಂದ ಕಾರಿನಲ್ಲಿ ಸಂಜೆ 6 ಗಂಟೆಗೆ ವಿಮಾನ ನಿಲ್ದಾಣವನ್ನು ತಲುಪಿದೆ. ಕಾರ್ಡಿಯೋಥೊರಾಸಿಕ್ ಸರ್ಜನ್ ಮತ್ತು ಅವರ ವೈದ್ಯಕೀಯ ತಂಡದ ತ್ವರಿತ ಕ್ರಮ ಮತ್ತು ಸಮರ್ಪಣೆಯ ಪರಿಣಾಮವಾಗಿ ಕಸಿ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Thu, 23 November 23