ಅಂಜನಾದ್ರಿ ಪರ್ವತಕ್ಕೆ ರಾಜ್ಯಪಾಲರ ಭೇಟಿ: ಗುಜರಾತ್​ನ ಹನುಮ ದೇವಸ್ಥಾನಕ್ಕೆ ಬಳಸುವ ಶಿಲೆಗೆ ಪೂಜೆ

ಗುಜರಾತ್ ರಾಜ್ಯದ ಲಂಬವೇಲ್ ಎಂಬಲ್ಲಿ ನಿರ್ಮಾಣವಾಗುತ್ತಿರುವ ಹನುಮ ದೇವಸ್ಥಾನಕ್ಕೆ, ಅಂಜನಾದ್ರಿ ಪರ್ವತದಿಂದ ಶಿಲೆ ಕೊಂಡೊಯ್ಯಲು ರಾಜ್ಯಪಾಲರು ಇಲ್ಲಿಗೆ ಆಗಮಿಸಿದ್ದರು.

ಅಂಜನಾದ್ರಿ ಪರ್ವತಕ್ಕೆ ರಾಜ್ಯಪಾಲರ ಭೇಟಿ: ಗುಜರಾತ್​ನ ಹನುಮ ದೇವಸ್ಥಾನಕ್ಕೆ ಬಳಸುವ ಶಿಲೆಗೆ ಪೂಜೆ
ಅಂಜನಾದ್ರಿಯಲ್ಲಿ ರಾಜ್ಯಪಾಲ ವಜುಭಾಯಿ ವಾಲ
Edited By:

Updated on: Apr 06, 2022 | 9:14 PM

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ‌ಇಂದು ರಾಜ್ಯಪಾಲ ವಜುಭಾಯಿ ವಾಲ ಭೇಟಿ ನೀಡಿದ್ದಾರೆ. ಗುಜರಾತ್ ರಾಜ್ಯದ ಲಂಬವೇಲ್ ಎಂಬಲ್ಲಿ ನಿರ್ಮಾಣವಾಗುತ್ತಿರುವ ಹನುಮ ದೇವಸ್ಥಾನಕ್ಕೆ, ಅಂಜನಾದ್ರಿ ಪರ್ವತದಿಂದ ಶಿಲೆ ಕೊಂಡೊಯ್ಯಲು ರಾಜ್ಯಪಾಲರು ಇಲ್ಲಿಗೆ ಆಗಮಿಸಿದ್ದಾರೆ. ಶಿಲೆಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಶಿಲೆಯನ್ನು ಗುಜರಾತ್​ನ ಲಂಬವೇಲ್​ಗೆ ಕೊಂಡೊಯ್ದಿದ್ದಾರೆ.

ಬೆಳಗ್ಗೆ 11.30ಕ್ಕೆ ಸ್ಥಳಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ಸ್ವಾಗತಿಸಿದ್ದರು. ವಜುಭಾಯಿ ವಾಲಾ ಭೇಟಿ ಹಿನ್ನೆಲೆಯಲ್ಲಿ, ಅಂಜನಾದ್ರಿ ಪರ್ವತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಅಂಜನಾದ್ರಿಯಲ್ಲಿ ರಾಜ್ಯಪಾಲರು

ಪೂಜೆಗೆ ಸಿದ್ಧತೆ

ಪೂಜೆ ನೆರವೇರಿಸಿದ ರಾಜ್ಯಪಾಲರು

ಪೂಜೆಗೊಂಡ ಶಿಲೆ

ಅಂಜನಾದ್ರಿಯ ನೋಟ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ; ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ

Published On - 5:27 pm, Sun, 10 January 21