ಗೋಮಾಂಸ ನಿಷೇಧಿಸಿದ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಸಿಡಿಮಿಡಿ; ದರಿದ್ರ ಸರ್ಕಾರ ಎಂದ ಮಾಜಿ ಸಿಎಂ
ಎಷ್ಟು ದಿನ ಗೋಮಾತೆಯ ಪೂಜೆ ಮಾಡುತ್ತಾರೆ? ಸಗಣಿ ಎತ್ತದೆ ಇದ್ದವರು, ಬೆರಣಿ ತಟ್ಟದೆ ಇರುವರು, ಗಂಜಲ ಮುಟ್ಟದೆ ಇರೋರೆಲ್ಲ ಗೋಮಾತೆಯ ಪೂಜೆ ಮಾಡುತ್ತಾರೆ. ಹಾಲು ಕೊಡದೆ ಇರುವ ಹಸುಗಳನ್ನು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನವನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೆ ಅದೇ ವಿಚಾರವನ್ನಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಎಷ್ಟು ದಿನ ಗೋಮಾತೆಯ ಪೂಜೆ ಮಾಡುತ್ತಾರೆ? ಸಗಣಿ ಎತ್ತದೆ ಇದ್ದವರು, ಬೆರಣಿ ತಟ್ಟದೆ ಇರುವರು, ಗಂಜಲ ಮುಟ್ಟದೆ ಇರೋರೆಲ್ಲ ಗೋಮಾತೆಯ ಪೂಜೆ ಮಾಡುತ್ತಾರೆ. ಹಾಲು ಕೊಡದೆ ಇರುವ ಹಸುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಇಡೀ ದೇಶದಲ್ಲಿ ಗೋಮಾಂಸ ನಿಷೇಧಿಸಿ. ವಿದೇಶಗಳಿಂದ ಬೀಫ್ ಆಮದು ಆಗುವುದನ್ನೂ ಬ್ಯಾನ್ ಮಾಡಿ. ಕೇರಳದಲ್ಲೇಕೆ ಗೋಹತ್ಯೆ ನಿಷೇಧ ಮಾಡಿಲ್ಲ ಎಂದರು. ಹಾಗೇ, ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಗ್ರಾಮೀಣ ಪ್ರದೇಶದ ಜನರು, ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಚರ್ಮ ಉದ್ಯಮದ ಮೇಲೆ ಕೂಡ ಪ್ರಭಾವ ಬೀರುತ್ತದೆ ಎಂದು ಹೇಳಿದರು.
ದರಿದ್ರ ಸರ್ಕಾರ ಬಿಜೆಪಿಯ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯನವರು, ಬಿಜೆಪಿಯವರು ದರಿದ್ರದವರು. ಅವರದ್ದು ದರಿದ್ರ ಸರ್ಕಾರ. ‘ನಮ್ಮ ಹಳ್ಳಿಯಲ್ಲಿ ನೀನು ತಂದಾಕು, ನಾನು ಉಂಡಾಕ್ತೀನಿ’ ಅನ್ನೋ ತರ ಬಿಜೆಪಿಯವರು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.