ಬೆಂಗಳೂರು: ಕೊರೊನಾ 2ನೇ ಅಲೆ ದಿನೇದಿನೆ ಜೋರಾಗ್ತಿದೆ. ದಿನ ಕಳೆಯುತ್ತಿದ್ದಂತೆ ಅಟ್ಟಹಾಸ ಮೆರೆಯೋಕೆ ಕೊರೊನಾ ಶುರು ಮಾಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳು ಮನ ಬಂದಂತೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕ ಆರೋಪಗಳು ಕೇಳಿ ಬಂದಿವೆ. ಸದ್ಯ ಈಗ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ನಿಗದಿಯಾದ ದರ ಹೀಗಿದೆ
-ಜನರಲ್ ವಾರ್ಡ್‌ಗೆ 5,200 ರೂಪಾಯಿ ದರ ನಿಗದಿ
-ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್‌ಗೆ ನಿತ್ಯ ₹7 ಸಾವಿರ
-ಐಸಿಯು ವಾರ್ಡ್‌ಗೆ ದಿನಕ್ಕೆ 8,500 ರೂಪಾಯಿ ನಿಗದಿ
-ಐಸಿಯು ಜೊತೆ ವೆಂಟಿಲೇಟರ್ ವಾರ್ಡ್‌ಗೆ ₹10 ಸಾವಿರ ನಿಗದಿ ಮಾಡಿದೆ. ಹಾಗೂ ನಗದು, ವಿಮಾ ಯೋಜನೆ ಇರುವವರಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.
-ಜನರಲ್ ವಾರ್ಡ್‌ಗೆ ದಿನಕ್ಕೆ 10 ಸಾವಿರ ರೂಪಾಯಿ
-ಆಕ್ಸಿಜನ್ ವ್ಯವಸ್ಥೆಯ ವಾರ್ಡ್‌ಗೆ 12 ಸಾವಿರ ರೂಪಾಯಿ
-ಐಸಿಯು ವಾರ್ಡ್‌ಗೆ 15,000 ರೂಪಾಯಿ ದರ ನಿಗದಿ
-ಐಸಿಯು, ವೆಂಟಿಲೇಟರ್ ವಾರ್ಡ್‌ಗೆ ₹25,000 ನಿಗದಿ ಮಾಡಿದೆ. ಸರ್ಕಾರ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಮರು ಅನುಷ್ಠಾನ ಮಾಡಿದೆ. ಶೇ.50ರಷ್ಟು ಬೆಡ್ ಸರ್ಕಾರ ಸೂಚಿಸುವ ಸೋಂಕಿತರಿಗೆ ನೀಡಬೇಕು ಎಂದು ಹೊರಡಿಸಿದ್ದ ಆದೇಶವನ್ನ ಸರ್ಕಾರ ಮರು ಅನುಷ್ಠಾನ ಮಾಡಿದೆ.
ಇದನ್ನೂ ಓದಿ: ಕೊರೊನಾ ಹಿಮ್ಮೆಟ್ಟಿಸಲು ರಾಜ್ಯದ ಎಲ್ಲಾ ಮನೆ ಹಾಗೂ ದೇವಸ್ಥಾನಗಳಲ್ಲಿ ಅಗ್ನಿಹೋತ್ರ ಮಾಡಿಸಿ: ಚಂದ್ರಶೇಖರ ಶಿವಾಚಾರ್ಯ ಶ್ರೀ