ಸಹೋದರಿಯರ ಶವ ಪತ್ತೆ; ಆತ್ಮಹತ್ಯೆ ಶಂಕೆ
2 ದಿನಗಳಿಂದ ಸಂಬಂಧಿಕರ ಫೋನ್ ರಿಸೀವ್ ಮಾಡಿರಲಿಲ್ಲ. ಇಂದು ಮನೆ ಬಳಿ ಬಂದು ಪರಿಶೀಲಿಸಿದಾಗ ಶವಗಳು ಪತ್ತೆಯಾಗಿವೆ.
ಬೆಂಗಳೂರು: ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ಜಮುನಾ (60) ಮತ್ತು ರಾಣಿ (58) ಅವರ ಶವ ಪತ್ತೆಯಾಗಿದೆ. ಅವಿವಾಹಿತ ಇಬ್ಬರೂ ಸಹೋದರಿಯರು ಒಟ್ಟಿಗೆ ವಾಸವಿದ್ದರು. 2 ದಿನಗಳಿಂದ ಸಂಬಂಧಿಕರ ಫೋನ್ ರಿಸೀವ್ ಮಾಡಿರಲಿಲ್ಲ. ಇಂದು ಮನೆ ಬಳಿ ಬಂದು ಪರಿಶೀಲಿಸಿದಾಗ ಶವಗಳು ಪತ್ತೆಯಾಗಿವೆ. ವಿಷ ಸೇವಿಸಿ ಇಬ್ಬರು ಸಹೋದರಿಯರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮಾರ್ಗಸೂಚಿ ಉಲ್ಲಂಘಿಸಿದವರಿಗೆ ದಂಡ ಬೆಂಗಳೂರಿನಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ. ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ಸಂಚರಿಸುತ್ತಿದ್ದವರಿಗೆ ದಂಡ ವಿಧಿಸಲಾಗಿದೆ. ನಗರದ ಪೂರ್ವ ವಿಭಾಗದಲ್ಲಿ 10 ದಿನಗಳಲ್ಲಿ 4970 ಪ್ರಕರಣಗಳು ದಾಖಲಾಗಿವೆ. ತಾತ್ಕಾಲಿಕವಾಗಿ 59 ಅಂಗಡಿ, ಇತರ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ.
ಗಾಂಜಾ ಮಾರುತ್ತಿದ್ದ ನಾಲ್ವರ ಬಂಧ ಬಾಗಲಕೋಟೆ ಜಿಲ್ಲಾ ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 6 ಕೆಜಿ 905 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಬೀಳಗಿ ತಾಲೂಕಿನ ಸುನಗ ಕ್ರಾಸ್ ಬಳಿ ಗಾಂಜಾ ಮಾರುತ್ತಿದ್ದರು. ಬೀಳಗಿ ಪಟ್ಟಣದ ಭೀಮಶಿ ಛಲವಾದಿ, ಪ್ರಕಾಶ್ ಪವಾರ, ಯಮನಪ್ಪ ಬಿರಾದಾರ, ಮಹೇಶ್ ದೊಡಮನಿ ಬಂಧಿತರು.
(Sisters found dead in magadi road)
ಇದನ್ನೂ ಓದಿ: ಬಿಎಂಟಿಸಿ ಬಸ್ ನಿರ್ವಾಹಕ, ವಿವಿಧೆಡೆ 2 ಲಕ್ಷ ಸಾಲ ಮಾಡಿದ್ದ ರೈತ ಆತ್ಮಹತ್ಯೆ
ಇದನ್ನೂ ಓದಿ: ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಅಂತಿಮ ಹಂತಕ್ಕೆ ಬಂದ ತನಿಖೆ