ಬಿಎಂಟಿಸಿ ಬಸ್ ನಿರ್ವಾಹಕ, ವಿವಿಧೆಡೆ 2 ಲಕ್ಷ ಸಾಲ ಮಾಡಿದ್ದ ರೈತ ಆತ್ಮಹತ್ಯೆ
ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದರು. ಮುಷ್ಕರ ಬೆಂಬಲಿಸಿ ಗದಗದ ನಿಡಗುಂದಿಗೆ ತೆರಳಿದ್ದರು. ಹೀಗಾಗಿ ಕೆಲಸ ಮಾಡಿದರೂ ಸಹ ಸಂಬಳ ದೊರಕಿರಲಿಲ್ಲ.
ಗದಗ: ಬಿಎಂಟಿಸಿ ಘಟಕದ ಉತ್ತರಹಳ್ಳಿಯ ಡಿಪೋ 33ದಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ 40 ವರ್ಷದ ಟಿಪ್ಪು ಸುಲ್ತಾನ್ ಎಂಬುವವರು ನೇಣಿಗೆ ಶರಣಾಗಿದ್ದಾರೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ತಮ್ಮ ಸ್ವಂತ ಮನೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾರಿಗೆ ನೌಕರರ ಮುಷ್ಕರ ಮತ್ತು ವೇತನ ವಿಳಂಬವಾದ ಕಾರಣ ಮನನೊಂದು ಟಿಪ್ಪು ಸುಲ್ತಾನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರಿನ ಉತ್ತರಹಳ್ಳಿಯ ಡಿಪೋ 33 ರಲ್ಲಿ ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದರು. ಮುಷ್ಕರ ಬೆಂಬಲಿಸಿ ಗದಗದ ನಿಡಗುಂದಿಗೆ ತೆರಳಿದ್ದರು. ಹೀಗಾಗಿ ಕೆಲಸ ಮಾಡಿದರೂ ಸಹ ಸಂಬಳ ದೊರಕಿರಲಿಲ್ಲ. ಮನೆಯಲ್ಲಿ ಇದೇ ವಿಚಾರಕ್ಕೆ ಜಗಳವಾಗಿತ್ತು. ಹೀಗಾಗಿ ಮನನೊಂದು ಟಿಪ್ಪು ಸುಲ್ತಾನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ನೌಕರರು ತಿಳಿಸಿದ್ದಾರೆ.
ಬ್ಯಾಂಕ್ ಸೇರಿ ವಿವಿಧೆಡೆ 2 ಲಕ್ಷ ಸಾಲ ಮಾಡಿದ್ದ ರೈತ ಆತ್ಮಹತ್ಯೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ರೈತರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಣಕನಪುರ ಗ್ರಾಮದ 60 ವರ್ಷದ ಶಿವಣ್ಣಾಚಾರಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ರೈತ. ಸಾಲಬಾಧೆಯೇ ಅವರ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ನಿನ್ನೆ ರಾತ್ರಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಬ್ಯಾಂಕ್ ಸೇರಿ ವಿವಿಧೆಡೆ 2 ಲಕ್ಷ ಸಾಲ ಮಾಡಿದ್ದರು. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಾರಿಗೆ ಮುಷ್ಕರ; ಬಸ್ಗಳಿಲ್ಲದೆ ಪರದಾಡುತ್ತಿದ್ದ ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9
ನೌಕರರ ಮನವೊಲಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ; ಮುಷ್ಕರ ವಾಪಸ್, ಅಥಣಿಯಲ್ಲಿ ಬಸ್ ಸಂಚಾರ ರೈಟ್ ರೈಟ್!
(BMTC conductor Suicide for Karnataka bus strike and dont pay salary)