ತಿಂಗಳು ಕಳೆದ್ರೂ ಸಿಕ್ಕಿಲ್ಲ ಶಿಕ್ಷೆ, ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಜೀವಗಳಿಗೆ ನ್ಯಾಯಾ ಯಾವಾಗ?

| Updated By: ಆಯೇಷಾ ಬಾನು

Updated on: Jun 03, 2021 | 8:27 AM

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಎರಡು ದಿನಗಳ ಅಂತರದಲ್ಲಿ 37 ಜನರು ತಮ್ಮ ಉಸಿರು ನಿಲ್ಲಿಸಿದ್ರು. ಆದರೆ ದುರಂತವೆಂದರೆ ಘಟನೆ ನಡೆದು ತಿಂಗಳು ಕಳೆದ್ರೂ ಇನ್ನೂ ಸರ್ಕಾರ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.

ತಿಂಗಳು ಕಳೆದ್ರೂ ಸಿಕ್ಕಿಲ್ಲ ಶಿಕ್ಷೆ, ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಜೀವಗಳಿಗೆ ನ್ಯಾಯಾ ಯಾವಾಗ?
ಪ್ರಾತಿನಿಧಿಕ ಚಿತ್ರ
Follow us on

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಜನ ಸಾವನಪ್ಪಿದ ಪ್ರಕರಣಕ್ಕೆ ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಎರಡು ದಿನಗಳ ಅಂತರದಲ್ಲಿ 37 ಜನರು ತಮ್ಮ ಉಸಿರು ನಿಲ್ಲಿಸಿದ್ರು. ಆದರೆ ದುರಂತವೆಂದರೆ ಘಟನೆ ನಡೆದು ತಿಂಗಳು ಕಳೆದ್ರೂ ಇನ್ನೂ ಸರ್ಕಾರ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ.

ಈ ಹಿಂದೆ ಮೇ 2ರಂದು ಆಕ್ಸಿಜನ್ ಸಮಸ್ಯೆಯಿಂದ ಮೃತಪಟ್ಟವರ ಸಂಖ್ಯೆ 24 ಎಂದು ಸರ್ಕಾರ ಹೇಳಿತ್ತು. ಬಳಿಕ 37 ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎಂದು ಹೈಕೋರ್ಟ್ ನೇಮಕ ಮಾಡಿದ್ದ ತಜ್ಞರ ಸಮಿತಿಯಲ್ಲಿ ಸಾವಿನ ಸಂಖ್ಯೆ ಬಯಲಾಗಿತ್ತು. ಹೈಕೋರ್ಟ್ನ‌ ನಿವೃತ್ತ ನ್ಯಾಯಾಧೀಶ ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ವರದಿ ನೀಡಿತ್ತು. ಸಾವನಪ್ಪಿದ 37 ಮಂದಿ ಪೈಕಿ 24 ಮಂದಿಗೆ ಮಾತ್ರ ಸರ್ಕಾರ ಪರಿಹಾರ ನೀಡಿದೆ. ಉಳಿದ 12 ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಅನ್ಯಾಯ ಮಾಡಿದೆ.

ಪ್ರಕರಣದಲ್ಲಿ ಜಿಲ್ಲಾಧಿಕಾರಿ ಎಂ.ಆರ್ ರವಿ ತಪ್ಪಿತಸ್ಥರೆಂದು ತಜ್ಞರ‌ ಸಮಿತಿ ಹೇಳಿದೆ. ಜೊತೆಗೆ ಡಿಹೆಚ್ಓ ಎಂ.ಸಿ ರವಿ, ಡೀನ್ ಸಂಜೀವ್ ರೆಡ್ಡಿ, ಜಿಲ್ಲಾಸ್ಪತ್ರೆಯ ನೋಡಲ್ ಅಧಿಕಾರಿ ಮಹೇಶ್ ಸೇರಿದಂತೆ ಹಲವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವರದಿ ಹೇಳಿದೆ. ಇಷ್ಟೇಲ್ಲಾ ವರದಿ ಬಂದರೂ ಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಪಾಡಿಗೆ ಸುಮ್ಮನಾಗಿದೆ. ಸರ್ಕಾರದ ನಿರ್ಲಕ್ಷ್ಯತನಕ್ಕೆ ಜನತೆ ಆಕ್ರೋಶ ಹೊರ ಹಾಕಿದೆ.

ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ; 24 ಕುಟುಂಬಗಳಿಗೆ ಪರಿಹಾರ, ರಾಜ್ಯ ಸರ್ಕಾರದ ಈ ಕ್ರಮ ಸರಿಯಲ್ಲ ಎಂದು ಆರ್.ಧ್ರುವನಾರಾಯಣ