AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಸಿರು ನೀಡಲು ಇಸ್ರೇಲ್ನಿಂದ ಕೋಲಾರಕ್ಕೆ ಬಂದಿದ್ದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಗಿತ

ಆಕ್ಸಿಜನ್ ಉತ್ಪಾದನಾ ಘಟಕವನ್ನು ಮೇ 10ರಂದು ಕೋಲಾರದ ಕೆಜಿಎಫ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿತ್ತು. ಈ ಘಟಕ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು. ಆದರೆ ಈಗ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಆಯಿಲ್ ಸೋರಿಕೆ ಹಾಗೂ ಏರ್ ಪಿಲ್ಟರ್ನಲ್ಲಿ ಸಮಸ್ಯೆ ಎದುರಾಗಿದೆ.

ಉಸಿರು ನೀಡಲು ಇಸ್ರೇಲ್ನಿಂದ ಕೋಲಾರಕ್ಕೆ ಬಂದಿದ್ದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಗಿತ
ಇಸ್ರೇಲ್ನಿಂದ ಕೋಲಾರಕ್ಕೆ ಬಂದಿದ್ದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಗಿತ
TV9 Web
| Updated By: ಆಯೇಷಾ ಬಾನು|

Updated on: Jun 03, 2021 | 7:51 AM

Share

ಕೋಲಾರ: ಜಿಲ್ಲೆಯ ಆಕ್ಸಿಜನ್ ಉತ್ಪಾದನಾ ಘಟಕ ಮತ್ತೆ ಕೈಕೊಟ್ಟ ಹಿನ್ನೆಲೆಯಲ್ಲಿ ಜಂಬೋ ಸಿಲಿಂಡರ್ ಮೂಲಕ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಕೊರೊನಾ ಮಹಾಮಾರಿಯ ಸೋಂಕಿಗೆ ತುತ್ತಾಗಿ ನಿಂತು ಹೋಗುತ್ತಿರುವ ಉಸಿರಿಗೆ ಉಸಿರು ನೀಡಲು ಇಸ್ರೇಲ್‌ನಿಂದ ತರಿಸಲಾಗಿದ್ದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಗಿತಗೊಂಡಿದೆ.

ಆಕ್ಸಿಜನ್ ಉತ್ಪಾದನಾ ಘಟಕವನ್ನು ಮೇ 10ರಂದು ಕೋಲಾರದ ಕೆಜಿಎಫ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿತ್ತು. ಈ ಘಟಕ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು. ಆದರೆ ಈಗ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಆಯಿಲ್ ಸೋರಿಕೆ ಹಾಗೂ ಏರ್ ಪಿಲ್ಟರ್ನಲ್ಲಿ ಸಮಸ್ಯೆ ಎದುರಾಗಿದೆ. ಆಕ್ಸಿಜನ್ ಉತ್ಪಾದನಾ ಘಟಕದ ಸಹಾಯದಿಂದ ನೂರು ಹಾಸಿಗೆಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿತ್ತು. ಈಗ ಮತ್ತೆ ಜಂಬೋ ಸಿಲಿಂಡರ್ ಮೂಲಕ ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿದೆ.

Kolar hospital

ಕೆಜಿಎಫ್ ಸರ್ಕಾರಿ ಆಸ್ಪತ್ರೆ

ಕೆಜಿಎಫ್ಗೆ ಬಂತು ಇಸ್ರೇಲ್ ಆಕ್ಸಿಜನ್ ಉತ್ಪಾದನಾ ಯಂತ್ರ.. ಜಕ್ಕೂರು ವಿಮಾನ ನಿಲ್ದಾಣದಲ್ಲಿ ಕಂಟೈನರ್ನಲ್ಲಿ ಕೂರಿಸಿಕೊಂಡು ಬೃಹತ್ ಆಕ್ಸಿಜನ್ ಉತ್ಪಾನಾ ಘಟಕ, ಎನ್ಡಿಆರ್ ಎಫ್ ಸಿಬ್ಬಂದಿಯ ಬಂದೋಬಸ್ತ್ನಲ್ಲಿ ಕೆಜಿಎಫ್ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಬಂದಿಳಿದಿತ್ತು. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರು ಆಕ್ಸಿಜನ್ ಕೊರತೆಯಿಂದ ಸಾವಿರಾರು ಸಂಖ್ಯೆಯ ಜನರು ಮೃತಪಡುತ್ತಿದ್ದಾರೆ ಈ ಹಿನ್ನೆಲೆ ಇಸ್ರೇಲ್ ದೇಶದಿಂದ ಮೂರು 500 LPM ಆಕ್ಸಿಜನ್ ಉತ್ಪಾದನಾ ಯಂತ್ರಗಳನ್ನು ಕಳಿಸಲಾಗಿತ್ತು.

ಆ ಪೈಕಿ ಉತ್ತರ ಪ್ರದೇಶದ ವಾರಣಾಸಿಗೆ ಒಂದು, ಹಾಗೂ ಮೈಸೂರಿನ ಹೆಚ್. ಡಿ. ಕೋಟೆಗೆ ಒಂದು ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್ಗೆ ಒಂದರಂತೆ ಕಳುಹಿಸಲಾಗಿತ್ತು. ಈ ಪೈಕಿ ಕೋಲಾರ ಜಿಲ್ಲೆ ಕೆಜಿಎಫ್ಗೆ ದೇಶದ ಮೊದಲ ಉತ್ಪಾದನಾ ಯಂತ್ರ ಬಂದು ತಲುಪಿತ್ತು. ಜಕ್ಕೂರು ವಿಮಾನ ನಿಲ್ದಾಣಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಬಂದ ಆಕ್ಸಿಜನ್ ಉತ್ಪಾದನಾ ಯಂತ್ರ ಒಳಗೊಂಡಿದ್ದ ಕಂಟೇನರ್ ನಂತರ ಟ್ರಕ್ ಮೂಲಕ ಬೆಳಗಿನ ಜಾವ 5 ಗಂಟೆಗೆ ಎನ್ಡಿಆರ್ಎಫ್ ಸಿಬ್ಬಂದಿಯ ಬಂದೋಬಸ್ತ್ನಲ್ಲಿ ಬಂದಿಳಿದಿತ್ತು.

ಇದನ್ನೂ ಓದಿ: ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದ ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ.. ಉಸಿರಿಗೆ ಉಸಿರು ನೀಡಲು ಬಂತು ಇಸ್ರೇಲ್​ ಆಕ್ಸಿಜನ್​!