ಬಿಪಿಎಲ್ ಕಾರ್ಡ್ದಾರರಿಗೆ ನೀಡುವ ಅಕ್ಕಿಯ ಪ್ರಮಾಣ 5ರಿಂದ 10 ಕೆ.ಜಿಗೆ ಹೆಚ್ಚಳ
BPL Card holders in Karnataka: ಪ್ರತಿ ಕೆಜಿಗೆ ₹15ರಂತೆ 10 ಕೆಜಿ ಅಕ್ಕಿಯನ್ನು ಎಪಿಎಲ್ ಅರ್ಜಿದಾರರಿಗೂ ಈ ಅವಧಿಯಲ್ಲಿ ಆಹಾರ ಇಲಾಖೆ ವಿತರಣೆ ಮಾಡಲಿದೆ.
ಬೆಂಗಳೂರು: ಬಿಪಿಎಲ್ ಕಾರ್ಡ್ದಾರರಿಗೆ ನೀಡುವ ಅಕ್ಕಿಯನ್ನು 5ರಿಂದ 10 ಕೆ.ಜಿಗೆ ಹೆಚ್ಚಿಸಲು ಆಹಾರ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಪರಿಶೀಲನೆ ಹಂತದಲ್ಲಿದ್ದಲ್ಲಿರುವವರಿಗೂ ಮೇ, ಜೂನ್ ತಿಂಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಕೆಜಿಗೆ ₹15ರಂತೆ 10 ಕೆಜಿ ಅಕ್ಕಿಯನ್ನು ಎಪಿಎಲ್ ಅರ್ಜಿದಾರರಿಗೂ ಈ ಅವಧಿಯಲ್ಲಿ ಆಹಾರ ಇಲಾಖೆ ವಿತರಣೆ ಮಾಡಲಿದೆ. ಈ ಕುರಿತು ಆಹಾರ ಸಚಿವ ಉಮೇಶ್ ಕತ್ತಿ ಪ್ರಕಟಣೆ ಹೊರಡಿಸಿದ್ದಾರೆ.
ಅಷ್ಟೇ ಅಲ್ಲದೇ, ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ 35 ಕೆಜಿ ಧಾನ್ಯದ ಜತೆಗೆ 5 ಕೆಜಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಎಪಿಎಲ್ ಕಾರ್ಡ್ದಾರರಿಗೆ ಕೆಜಿಗೆ 15 ರೂ.ನಂತೆ ಅಕ್ಕಿ, ರಾಜ್ಯದಿಂದ ನೀಡಲಾಗುತ್ತಿರುವ 5 ಕೆಜಿ ಧಾನ್ಯದ ಜತೆಗೆ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಿಎಂಜಿಕೆವೈ ಅಡಿಯಲ್ಲಿ ಮೇ ಮತ್ತು ಜೂನ್ ತಿಂಗಳಿಗೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ತಿಂಗಳಿಗೆ ರಾಜ್ಯದಿಂದ ನೀಡಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 10 ಕೆಜಿ ಆಹಾರ ಧಾನ್ಯ ನೀಡುವುದಾಗಿ ತಿಳಿಸಲಾಗಿದೆ.
ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಚೀಟಿಗೆ 25 ಕಿಜಿ ಆಹಾರ ಧಾನ್ಯದ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ ವಿತರಿಸಲು ಆಹಾರ ಸಚಿವ ಉಮೇಶ್ ಕತ್ತಿ ಆದೇಶಿಸಿದ್ದಾರೆ. ಈ ಮೂಲಕ ಕೊವಿಡ್ ಮತ್ತು ಲಾಕ್ಡೌನ್ನಿಂದ ತೊಂದರೆಗೆ ಒಳಗಾದವರಿಗೆ ಸದ್ಯ ನೇರವಾಗಿ ವಿಶೇಷ ಪ್ಯಾಕೇಜ್ ಘೋಷಿಸದೆ ಪಡಿತರ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: ಕೊವಿಡ್ ದೃಢಪಟ್ಟ 1 ಗಂಟೆಯೊಳಗೆ ಐಸೋಲೇಶನ್ ಕಿಟ್ ಮನೆ ಬಾಗಿಲಿಗೆ; ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಮತ್ತು ಲಸಿಕೆ ಬಳಕೆ ಬಗ್ಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖಾಂಶಗಳು (Karnataka govt increase the quantity of rice to BPL card holders from 5 to 10 kg in May and June months)
Published On - 4:46 pm, Fri, 14 May 21