ಬೆಂಗಳೂರು, (ನವೆಂಬರ್ 14): ಕರ್ನಾಟಕ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ನಾನಾ ಹಬ್ಬಗಳು ಸೇರಿದಂತೆ 2025ರಲ್ಲಿ ಒಟ್ಟು 19 ದಿನ ರಜೆ ಘೋಷಿಸಲಾಗಿದೆ. ಇನ್ನು ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ.
ಭಾನುವಾರಗಳಂದು ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ.
ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.
ಇನ್ನು ದಿನಾಂಕ 03/09/2025 (ಬುಧವಾರ) ಕೈಲ್ ಮೂಹರ್ತ, ದಿನಾಂಕ 18/10/2025 (ಶನಿವಾರ) ತುಲ ಸಂಕ್ರಮಣ ಹಾಗೂ ದಿನಾಂಕ 05/12/2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
Published On - 11:13 pm, Thu, 14 November 24