ಮಕ್ಕಳಿಗೆ ಅಕ್ಟೋಬರ್ ತಿಂಗಳಲ್ಲೇ ಕೊವಿಡ್ ಲಸಿಕೆ ವಿತರಣೆ ಸಾಧ್ಯತೆ: ಡಾ ಸುಧಾಕರ್ ಸುಳಿವು

| Updated By: guruganesh bhat

Updated on: Oct 01, 2021 | 3:14 PM

Covid Vaccine To Children: ಕೊವಿಡ್ ತಡೆ ಮಾರ್ಗಸೂಚಿ ಅನ್ವಯ ಈಗಾಗಲೇ ಶಾಲೆ ಆರಂಭವಾಗಿದೆ. ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಕೇಂದ್ರ ಸರ್ಕಾರ ಯಾವಾಗ ಬೇಕಾದರೂ ಘೋಷಣೆ ಮಾಡಬಹುದು ಎಂದು ಡಾ ಸುಧಾಕರ್ ಸುಳಿವು ನೀಡಿದರು.

ಮಕ್ಕಳಿಗೆ ಅಕ್ಟೋಬರ್ ತಿಂಗಳಲ್ಲೇ ಕೊವಿಡ್ ಲಸಿಕೆ ವಿತರಣೆ ಸಾಧ್ಯತೆ: ಡಾ ಸುಧಾಕರ್ ಸುಳಿವು
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ. ಮಕ್ಕಳಲ್ಲಿ ಲಸಿಕೆ ಪ್ರಯೋಗ ಫೇಸ್ 3 ಟ್ರಯಲ್ ಕೊನೆಯ ಹಂತ ತಲುಪಿದೆ. ಕೊವಿಡ್ ತಡೆ ಮಾರ್ಗಸೂಚಿ ಅನ್ವಯ ಈಗಾಗಲೇ ಶಾಲೆ ಆರಂಭವಾಗಿದೆ. ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಕೇಂದ್ರ ಸರ್ಕಾರ ಯಾವಾಗ ಬೇಕಾದರೂ ಘೋಷಣೆ ಮಾಡಬಹುದು. ಮಕ್ಕಳಲ್ಲಿ ಶೇಕಡಾ .008 ರಷ್ಟು ಮಾತ್ರ ಸೋಂಕು‌ ಕಂಡುಬಂದಿದೆ.ಶೇ.10ರಷ್ಟು ಮಕ್ಕಳಿಗೆ ಟೆಸ್ಟ್‌ ಮಾಡುವಂತೆ ಸೂಚಿಸಿದ್ದೇವೆ. ಶಾಲೆಗಳಲ್ಲಿ ಹೋದಾಗ, ಬೇರೆ ಸಂದರ್ಭದಲ್ಲಿ ಎಚ್ಚರ ಅಗತ್ಯ. ಕೊವಿಡ್ ಸೋಂಕು ಹೆಚ್ಚದಿರುವಂತೆ ತಡೆಯಲು ಬೇರೆ ಬೇರೆ ಇಲಾಖೆಗಳ ಮುಖಾಂತರ ಮಾರ್ಗಸೂಚಿ ಹೊರಡಿಸಬೇಕಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

ಥಿಯೇಟರ್‌ಗಳಲ್ಲಿ ಹೌಸ್‌ ಫುಲ್‌ಗೆ ಅವಕಾಶ ನೀಡಿದ್ದೇವೆ. ಇದನ್ನು ಹೊರತುಪಡಿಸಿದರೆ ಕೆಲವು ನಿರ್ಬಂಧಗಳಷ್ಟೇ ಇವೆ. ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ನೀಡುವವರೆಗೂ ಯಾವುದೇ ರೀತಿಯ ಸಮಾರಂಭ ಮಾಡಲು ಅವಕಾಶವಿಲ್ಲ. ಈಜುಕೊಳಕ್ಕೂ ಸದ್ಯಕ್ಕೆ ಅನುಮತಿಯನ್ನು ಕೊಡುವುದಿಲ್ಲ. ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಎರಡು ರಾಜ್ಯಗಳ ಗಡಿಯಲ್ಲಿ ಟೆಸ್ಟ್‌ ರಿಪೋರ್ಟ್‌ ಕಡ್ಡಾಯವಾಗಿದೆ ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಚಿವ ಡಾ.ಸುಧಾಕರ್‌ ಸ್ಪಷ್ಟಪಡಿಸಿದರು.

ಇದನ್ನೂ ಓದಿ: 

ಕೊವಿಡ್​ 19 ಲಸಿಕೆ ಸರ್ಟಿಫಿಕೆಟ್​​ನ್ನು ನವೀಕರಿಸಿದ ಭಾರತ; ಯುಕೆ ತಕರಾರಿನ ಬೆನ್ನಲ್ಲೇ ಹೊಸ ಆವೃತ್ತಿ ಬಿಡುಗಡೆ

ZyCov-D Vaccine: ಅ.2ರಂದು ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಜೈಕೋವ್-ಡಿ ಬೆಲೆ ನಿಗದಿ ಬಗ್ಗೆ ಚರ್ಚೆ

Published On - 3:07 pm, Fri, 1 October 21