ಆನ್‌ಲೈನ್‌ ನಲ್ಲಿ ಫುಡ್‌ ಆರ್ಡರ್ ಮಾಡಿ ಊಟ ಮಾಡುವವರು ಈ ಸುದ್ದಿ ಓದಲೇಬೇಕು!

ಕಬಾಬ್, ಇಡ್ಲಿ, ಗೋಬಿ‌ ಮಂಚೂರಿಯಂತಹ ಫುಡ್‌ಗಳ ಮೇಲೆ ಕರ್ನಾಟಕ ಆರೋಗ್ಯ ಇಲಾಖೆ ಈಗಾಗಲೇ ಸಮರ ಸಾರಿದೆ. ಈಗ ಅದರ ಕಣ್ಣು ಫುಡ್ ಪ್ಯಾಕ್ ಮಾಡುವ ಪ್ಲಾಸ್ಟಿಕ್ ಬಾಕ್ಸ್‌ಗಳ ಮೇಲೂ ಬಿದ್ದಿದೆ. ಸ್ವಿಗಿ ಹಾಗೂ ಜೊಮ್ಯಾಟೊ ಸೇರಿ ಫುಡ್ ಡೆಲಿವರಿಗಳ ಮೇಲೆ ಕ್ರಮಕ್ಕೆ ಮುಂದಾಗಿದೆ. ಇನ್ನು ಆನ್​​ ಲೈನ್​​ ನಲ್ಲಿ ಫುಡ್ ಆರ್ಡರ್​ ಮಾಡಿ ಊಟ ಮಾಡುವವರು ಈ ಸುದ್ದಿ ಓದಲೇಬೇಕು.

ಆನ್‌ಲೈನ್‌ ನಲ್ಲಿ ಫುಡ್‌ ಆರ್ಡರ್ ಮಾಡಿ ಊಟ ಮಾಡುವವರು ಈ ಸುದ್ದಿ ಓದಲೇಬೇಕು!
Online Food
Edited By:

Updated on: Jul 28, 2025 | 9:56 PM

ಬೆಂಗಳೂರು, (ಜುಲೈ 28): ಬಾಯಿ ರುಚಿ, ತಿನ್ನೋ ಗೀಳು, ಸಮಯ ಇಲ್ಲ ಎಂದು ಅಯ್ಯೋ, ಅಡುಗೆ ಮಾಡಲು ಬೇಜಾರು ಅಂತ್ಹೇಳಿ ಬೆಂಗಳೂರು ಸಿಟಿಯಲ್ಲಿ ಆನ್‌ಲೈನ್‌ ಫುಡ್‌ ಆರ್ಡರ್‌ ಮಾಡುವವರು ಎಷ್ಟು ಜನ ಇಲ್ಲ ಹೇಳಿ. ಆದ್ರೆ, ಹಾಗೇ ಬಿಸಿಬಿಸಿ ಆಹಾರದಲ್ಲಿ ನಿಮ್ಗೇ ಗೊತ್ತಿಲ್ಲದೇ ವಿಷಕಾರಿ ಅಂಶ ನಿಮ್ಮ ದೇಹ ಸೇರುತ್ತಿದೆ. ಆನ್‌ಲೈ‌ನ್ ಯುಗದಲ್ಲಿ ಆನ್‌ಲೈನ್ ಫುಡ್ ಆರ್ಡರ್ ಜನರ ಆರೋಗ್ಯ ಕೆಡಿಸುತ್ತಿದೆ. ಆನ್‌ಲೈನ್ ಆರ್ಡರ್ ಮಾಡಿದಾಗ ಹೆಚ್ಚಿನಂಶ ಊಟ, ತಿಂಡಿಗಳು ಪ್ಲಾಸ್ಟಿಕ್ ಕಂಟೈನರ್‌ನಲ್ಲಿ ಡೆಲಿವರಿಯಾಗುತ್ತೆ. ಪ್ಲಾಸ್ಟಿಕ್ ಕಂಟೈನರ್‌ನಲ್ಲಿ ಬಿಸಿಬಿಸಿ ಪದಾರ್ಥಗಳಿಂದ ಪ್ಲಾಸ್ಟಿಕ್ ಕರಗಿ, ಬಿಸ್ಪೆನೊಲ್ಎ(bisphenol A) ಎಂಬ ವಿಷಕಾರಿ ಅಂಶ ರಿಲೀಸ್​ ಆಗುತ್ತದೆ.

ಬಿಪಿಎ ಅಂಶ ಹೊಟ್ಟೆಗೆ ಸೇರಿರುವುದರಿಂದ ನರಗಳ ದೌರ್ಬಲ್ಯ, ಥೈರಾಯ್ಡ್‌, ಅಸ್ತಮಾದಿಂದ ಶುರುವಾಗಿ ಕ್ಯಾನ್ಸರ್‌ಗೂ ಅದು ದಾರಿ ಮಾಡಿಕೊಡ್ತಿದೆ.‌ ಜಿಎಂಪಿ‌ ಅಂದ್ರೆ ಜನರಲ್ ಮ್ಯಾನುಫ್ಯಾಕ್ಚರಿಂಗ್ ಪ್ರಾಕ್ಟೀಸ್ ಸರ್ಟಿಫಿಕೇಟ್ ಇರುವ ಪ್ಲಾಸ್ಟಿಕ್ ವಸ್ತುಗಳನ್ನೇ ಬಳಸಿ ಅಂತಾ ಆಹಾರ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೂಲ್ ಕೂಲ್ ವೆದರ್: ಶುರುವಾಯ್ತು ಸಾಂಕ್ರಾಮಿಕ ರೋಗಗಳ ಆತಂಕ!

ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಪ್ಲಾಸ್ಟಿಕ್ ಕಂಟೈನರ್‌ಗಳ ಬ್ಯಾನ್‌ಗೆ ಆರೋಗ್ಯ ಇಲಾಖೆ ಚಿಂತಿಸುತ್ತಿದೆ. ಆಹಾರ ಇಲಾಖೆ ಜೊತೆಗೂಡಿ ಕಂಟೈನರ್‌ಗಳ ಸ್ಯಾಂಪಲ್ ಟೆಸ್ಟ್‌ಗೆ ಆರೋಗ್ಯ ಇಲಾಖೆ ಚಿಂತಿಸುತ್ತಿದ್ದು, ಇದನ್ನ ಹೋಟೆಲ್ ಮಾಲೀಕರು ಸ್ವಾಗತಿಸಿದ್ದಾರೆ. ಬಾಳೆ ಎಲೆ, ಅಡಕೆ ಎಲೆ ಬಳಕೆಯಂತಹ ಕಂಟೈನರ್‌ಗಳನ್ನ ಪರ್ಯಾಯವಾಗಿ ಬಳಸಬೇಕು ಎನ್ನುತ್ತಿದ್ದಾರೆ.

ನೀವೇನಾದ್ರೂ ಪದೇ ಪದೇ ಆನ್‌ಲೈನ್ ಫುಡ್ ಆರ್ಡರ್ ಮಾಡುತ್ತಿದ್ದರೆ ಅದನ್ನ ಈಗಲೇ ನಿಲ್ಲಿಸುವುದು ಒಳಿತು.

Published On - 9:19 pm, Mon, 28 July 25