ಬೆಂಗಳೂರು (ಡಿಸೆಂಬರ್.19): ಕಳೆದ ಮೂರ್ನಾಲ್ಕು ವರ್ಷಗಳಿಂದ ಕೋವಿಡ್ (Coronavirus) ಎನ್ನುವ ಮಹಾಮಾರಿ ಸೋಂಕು ಹೊಸ ವರ್ಷದ ಅದ್ಧೂರಿ ಸಂಭ್ರಮಾಚರಣೆಯನ್ನು ಕಿತ್ತುಕೊಂಡಿತ್ತು. ಈ ವರ್ಷ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎನ್ನುವಷ್ಟರಲ್ಲಿ ಪುನಃ ಕೋವಿಡ್ ವೈರಸ್ ಮತ್ತೊಂದು ರೂಪಾಂತರವಾಗಿ(Coronavirus JN1) ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದ್ದು, ಮುಂಜಾಗ್ರತೆ ಕ್ರಮವಹಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ.
ಆಸ್ಪತ್ರೆಗಳ ಸಿದ್ಧತೆ ಹಾಗೂ ಟೆಸ್ಟಿಂಗ್ ಕುರಿತು ಸುತ್ತೋಲೆ ಹೊರಡಿಸಿದ್ದು, ಎಲ್ಲ ಮುಂಜಾಗ್ರತೆ ಕ್ರಮವಹಿಸುವಂತೆ ತಿಳಿಸಿದೆ. ಅಲ್ಲದೇ ಐಸಿಯು ಘಟಕ ಹಾಗೂ ಆಕ್ಸಿಜನ್ ಘಟಕಗಳನ್ನ ಲಿಕ್ವಿಡ್ ಆಕ್ಸಿಜನ್, ವೆಂಟಿಲೇಟರ್ ಉಪಕಣಗಳನ್ನು ಪರಿಶೀಲಿಸಿ ಅವುಗಳ ಸ್ಥಿತಿಗತಿಯ ವಾಸ್ತವ ವರದಿಯನ್ನ ಸಲ್ಲಿಸಲು ಜಂಟಿ ನಿರ್ದೇಶಕರಿಗೆ ಸುತ್ತೋಲೆ ಮೂಲಕ ಸೂಚಿಸಿದೆ.
ಇದನ್ನೂ ಓದಿ: Karnataka Covid Guidelines: ಕರ್ನಾಟಕ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ, ಇಲ್ಲಿದೆ ವಿವರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ