ಕೊರೊನಾ 2ನೇ ಅಲೆಗೆ ತುತ್ತಾದ ಶೇ.95.6ರಷ್ಟು ರೋಗಿಗಳು ಗುಣಮುಖ: ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ

| Updated By: guruganesh bhat

Updated on: Jun 28, 2021 | 6:26 PM

ಪ್ರತಿನಿತ್ಯ ಒಂದೂವರೆ ಲಕ್ಷ ಜನರಿಗೆ ಟೆಸ್ಟ್ ಮಾಡುತ್ತಿದ್ದೇವೆ. ಕಳೆದ 2 ದಿನಗಳಿಂದ 11 ಜಿಲ್ಲೆಗಳಲ್ಲಿ ಕೊವಿಡ್​ನಿಂದ ಸಾವಾಗಿಲ್ಲ. ಡಾ.ರೆಡ್ಡೀಸ್ ಲ್ಯಾಬ್‌ನಿಂದ 2ಜಿ ಔಷಧ ಬಿಡುಗಡೆಯಾಗಿದೆ. ಈ ಔಷಧವನ್ನು ಖರೀದಿ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ: ಆರೋಗ್ಯ ಸಚಿವ ಡಾ.ಸುಧಾಕರ್

ಕೊರೊನಾ 2ನೇ ಅಲೆಗೆ ತುತ್ತಾದ ಶೇ.95.6ರಷ್ಟು ರೋಗಿಗಳು ಗುಣಮುಖ: ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ
ಕೆ. ಸುಧಾಕರ್​
Follow us on

ಬೆಂಗಳೂರು: ಕೊರೊನಾ 2ನೇ ಅಲೆಗೆ ತುತ್ತಾದ ಶೇ.95.6ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 3,36,73,392 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ. ಪ್ರತಿನಿತ್ಯ ಒಂದೂವರೆ ಲಕ್ಷ ಜನರಿಗೆ ಟೆಸ್ಟ್ ಮಾಡುತ್ತಿದ್ದೇವೆ. ಕಳೆದ 2 ದಿನಗಳಿಂದ 11 ಜಿಲ್ಲೆಗಳಲ್ಲಿ ಕೊವಿಡ್​ನಿಂದ ಸಾವಾಗಿಲ್ಲ. ಡಾ.ರೆಡ್ಡೀಸ್ ಲ್ಯಾಬ್‌ನಿಂದ 2ಜಿ ಔಷಧ ಬಿಡುಗಡೆಯಾಗಿದೆ. ಈ ಔಷಧವನ್ನು ಖರೀದಿ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. 3ನೇ ಅಲೆ ವೇಳೆಗೆ ಅಗತ್ಯ ಪ್ರಮಾಣದ ಔಷಧ ಖರೀದಿ ಸಂಗ್ರಹಿಸಲು ತಯಾರಿ ನಡೆಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

1001 ವೈದ್ಯರನ್ನು ಹೊರಗುತ್ತಿಗೆಯಲ್ಲಿ ತೆಗೆದುಕೊಂಡಿದ್ದೇವೆ. ಜಿಲ್ಲಾ, ತಾಲೂಕು ಐಸಿಯುನಲ್ಲಿ ಇವರನ್ನು ನೇಮಿಸುತ್ತೇವೆ. 666 ವೈದ್ಯರನ್ನ ಐಸಿಯುನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. 248 ವೈದ್ಯರನ್ನು NHMರಡಿಯಲ್ಲಿ ನೇಮಕ ಮಾಡಲಾಗಿದೆ. 90 ವೈದ್ಯರನ್ನ ಸಮುದಾಯ ಆರೋಗ್ಯ ವೈದ್ಯರಾಗಿ ನೇಮಕ ಮಾಡಲಾಗಿದೆ. ಒಟ್ಟಾರೆಯಾಗಿ 2,108 ವೈದ್ಯರನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ 1,740 ವೈದ್ಯರ ನೇರ ನೇಮಕಾತಿ ಮಾಡಲಾಗಿದೆ . ಈ ಮೂಲಕ ಒಟ್ಟು 4 ಸಾವಿರ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕರ್ನಾಟಕ ಹೆಲ್ತ್ ಪ್ರಮೋಶನ್ ಟ್ರಸ್ಟ್, ಅಸೋಸಿಯೇಶನ್ ಆಫ್ ಪಬ್ಲಿಕ್ ಹೆಲ್ತ್ ಟೆಕ್ನಾಲಜೀಸ್ ವತಿಯಿಂದ ಕ್ಷಯ ರೋಗಿಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಪರೀಕ್ಷೆಗೆ ಪ್ರಾಯೋಗಿಕ ಯೋಜನೆ ರೂಪಿಸಲಾಗಿದೆ. ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಈ ರೀತಿ ತಪಾಸಣೆ ನಡೆಸಲಾಗುತ್ತದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಕೊವಿಡ್ 3ನೇ ಅಲೆ ಎದುರಿಸಲು ಹೊಸ ಸಮಿತಿ ರಚನೆಗೆ ತೀರ್ಮಾನ
ಕೊವಿಡ್ 3ನೇ ಅಲೆ ನಿರ್ವಹಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವರ ಪ್ರತ್ಯೇಕ ಹೊಸ ಸಮಿತಿ ರಚಿಸಲಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ನೀಡಿದ್ದಾರೆ. ಸದ್ಯ ಈಗಿರುವ ಕೊವಿಡ್ ಉಸ್ತುವಾರಿ ಸಚಿವರನ್ನು ಬಿಟ್ಟು ಹೊಸ ಸಮಿತಿ ರಚನೆ ಮಾಡಲಾಗುವುದು. ಈಗ ಇರುವ ಸಮಿತಿಯಲ್ಲಿ ನಾವೆಲ್ಲರೂ ಕೈ ಜೋಡಿಸಿ ಕೆಲಸ ಮಾಡಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಆರೋಪದ ಬಗ್ಗೆ ವೈಯಕ್ತಿಕ ಜಾಹೀರಾತಿಗೆ ಇಲಾಖೆ ಹಣ ಬಳಕೆ ಆರೋಪ ಕೇಳಿಬಂದಿರುವ ಕುರಿತೂ ಪ್ರತಿಕ್ರಿಯೆ ನೀಡಿರುವ ಅವರು, ಸಂಕಷ್ಟ ಬಂದಾಗ ಸುಧಾಕರ್ ನಮ್ಮ ಜೊತೆಗೂಡಿ ಕೆಲಸ ಮಾಡಿದ್ದಾರೆ. ಎಲ್ಲ ಜವಾಬ್ದಾರಿ ಹಂಚಿಕೊಂಡು ನಾನೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಲ್ಲರೂ ಕೆಲಸ ಮಾಡಿದ್ದೇವೆ. ಈ ಕುರಿತು ಸಚಿವ ಸುಧಾಕರ್ ಜತೆಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕೊವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೊವಿಡ್​ ಲಸಿಕೆ ಸಿದ್ಧ; ಜುಲೈ-ಅಗಸ್ಟ್​​ನಿಂದ 12 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಶನ್​​

(Karnataka Health Minister Dr Sudhakar says 95.6 percent of coronavirus patients were cured in 2nd wave)

Published On - 5:46 pm, Mon, 28 June 21