ಬಾವಿಗೆ ಹಾರಿ ಕುಟುಂಬದ 6 ಮಂದಿ ಆತ್ಮಹತ್ಯೆ; ಮತ್ತೊಂದೆಡೆ ಬಟ್ಟೆ ಒಗೆಯಲು ಹೋಗಿದ್ದ 4 ಸಹೋದರರು ಕೃಷ್ಣಾ ನದಿ ನೀರುಪಾಲು
ಬಾವಿಗೆ ಹಾರಿ ಒಂದೇ ಕುಟುಂಬದ 6 ಜನರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ, ನೀರಲ್ಲಿ ಕಾಲು ಜಾರಿದ ಒಬ್ಬರನ್ನು ಹಿಡಿಯಲು ಹೋಗಿ ನಾಲ್ವರು ಸೋದರರು ಕೃಷ್ಣಾ ನದಿ ನೀರುಪಾಲಾಗಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯಾದಗಿರಿ: ಬಾವಿಗೆ ಹಾರಿ ಒಂದೇ ಕುಟುಂಬದ 6 ಜನರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ನಡೆದಿದೆ. ದೋರನಹಳ್ಳಿಯಲ್ಲಿ ದಂಪತಿ ಮತ್ತು ನಾಲ್ವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೋರನಹಳ್ಳಿ ದಂಪತಿಯರಾದ ಭೀಮರಾಯ ಸುರಪುರ(45) ಮತ್ತು ಶಾಂತಮ್ಮ(36) ಹಾಗೂ ಮಕ್ಕಳಾದ ಸುಮಿತ್ರಾ(12), ಶ್ರೀದೇವಿ(12), ಲಕ್ಷ್ಮೀ(8), ಶಿವರಾಜ(9) ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಲಬಾಧೆಯಿಂದ ಇಡೀ ಕುಟುಂಬದ ಸದಸ್ಯರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಶವಗಳಿಗಾಗಿ ಶೋಧ ಕಾರ್ಯ ನಡೆದಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಥಣಿ ತಾಲೂಕಿನ ಹಲ್ಯಾಳ ಬಳಿ ಬಟ್ಟೆ ತೊಳೆಯಲು ಹೋಗಿದ್ದ 4 ಸಹೋದರರು ಕೃಷ್ಣಾ ನದಿ ನೀರುಪಾಲು: ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಕೃಷ್ಣಾ ನದಿ ನೀರುಪಾಲಾಗಿದ್ದಾರೆ. ಪರಶುರಾಮ್ ಬನಸೊಡೆ, ಶಂಕರ್ ಬನಸೊಡೆ, ಸದಾಶಿವ ಬನಸೊಡೆ ಮತ್ತು ಧರೆಪ್ಪ ಬನಸೊಡೆ ನೀರುಪಾಲು ಆದ ಸೋದರರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬಳಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ನಡೆದಿದೆ.
ನೀರಲ್ಲಿ ಕಾಲು ಜಾರಿದ ಒಬ್ಬರನ್ನು ಹಿಡಿಯಲು ಹೋಗಿ ಘಟನೆ ನಡೆದಿದ್ದು, ಒಬ್ಬರ ಹಿಂದೊಬ್ಬರಂತೆ ನಾಲ್ವರೂ ಸೋದರರು ಕೃಷ್ಣಾ ನದಿ ನೀರುಪಾಲಾಗಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
(six members of a family committed suicide in shahapur yadgir while 4 brothers die in krishna river near athani)
Published On - 4:49 pm, Mon, 28 June 21