ತಾಕತ್ತಿದ್ರೆ ಮುಂದಿನ ಚುನಾವಣೆಯಲ್ಲಿ ನೀನೆ ನಿಲ್ಲು, ಆಗ ನನ್ನ ತಾಕತ್ತು ತೋರಿಸ್ತೀನಿ: ಹುನಗುಂದ ಬಿಜೆಪಿ ಶಾಸಕಗೆ ಕಾಶಪ್ಪನವರ ಸವಾಲ್

Hungund: ಕ್ಷೇತ್ರದಲ್ಲಿ ಗುಂಡಾಗಿರಿ ನಡೆದಿದೆ. ನಾನು ಮಾಜಿ ಶಾಸಕ.. ನನ್ನ ಮೇಲೆಯೇ ಹಲ್ಲೆ ಆಗ್ತಿದೆ. ಶಾಸಕ ಹಾಗೂ ಅವರ ಪುತ್ರನ ಕುಮ್ಮಕ್ಕಿನಿಂದ ನನ್ನ ಮನೆಗೆ ಬಂದು ಹಲ್ಲೆ ಮಾಡ್ತೇವಿ ಅಂತಾರೆ. ಊರಲ್ಲಿ ಹಫ್ತಾ ವಸೂಲಿ ನಡೆದಿದೆ...ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ವಿರುದ್ಧ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪ

ತಾಕತ್ತಿದ್ರೆ ಮುಂದಿನ ಚುನಾವಣೆಯಲ್ಲಿ ನೀನೆ ನಿಲ್ಲು, ಆಗ ನನ್ನ ತಾಕತ್ತು ತೋರಿಸ್ತೀನಿ: ಹುನಗುಂದ ಬಿಜೆಪಿ ಶಾಸಕಗೆ ಕಾಶಪ್ಪನವರ ಸವಾಲ್
ತಾಕತ್ತಿದ್ರೆ ಮುಂದಿನ ಚುನಾವಣೆಯಲ್ಲಿ ನೀನೆ ನಿಲ್ಲು, ಆಗ ನನ್ನ ತಾಕತ್ತು ಏನು ಅಂತಾ ತೋರಿಸ್ತೀನಿ: ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡಗೆ ಕಾಶಪ್ಪನವರ ಸವಾಲ್
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 28, 2021 | 4:16 PM

ಬಾಗಲಕೋಟೆ: ಇನ್ನೂ ಎರಡೂವರೆ ವರ್ಷವಿದೆ ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು. ಆದರೆ ರಾಜಕೀಯ ಪಕ್ಷಗಳು ಮತ್ತು ನೇತಾರರು ಅದಾಗಲೇ ಅಖಾಡಕ್ಕೆ ಇಳಿದಂತೆ ಮಾತನಾಡತೊಡಗಿದ್ದಾರೆ. ಆದರೆ ಅದು ಅಭಿವೃದ್ಧಿ ಆಧಾರಿತವಾಗದೆ ಪರಸ್ಪರ ಆರೋಪ, ನಿಂದನೆಗಳಿಗೆ ಸೀಮಿತವಾಗಿದೆ. ತಾಕತ್ತಿದ್ರೆ 2023ರ ಚುನಾವಣೆಯಲ್ಲಿ ನೀನೆ ನಿಲ್ಲು… ಆಗ ನನ್ನ ತಾಕತ್ತು ಏನು ಅಂತ ತೋರಿಸ್ತೀನಿ… ಎಂದು ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲ್ ಹಾಕಿದ್ದಾರೆ.

ಇಳಕಲ್ ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ವಿಜಯಾನಂದ ಕಾಶಪ್ಪನವರ, ಹಾಲಿ ಶಾಸಕನ ವಿರುದ್ದ ವಾಗ್ದಾಳಿ ನಡೆಸಿದರು. ಶಾಸಕ ದೊಡ್ಡನಗೌಡ ಪಾಟಿಲ್ ಹಾಗೂ ಅವರ ಪುತ್ರ ರಾಜುಗೌಡ ಪಾಟಿಲ್ ವಿರುದ್ದ ಏಕವಚನದಲ್ಲೇ ಕಾಶಪ್ಪನವರ ವಾಗ್ದಾಳಿ ನಡೆಯಿತು. 2023 ರಲ್ಲಿ ನೀನೇ (ದೊಡ್ಡನಗೌಡ ಪಾಟೀಲ್) ನಿಲ್ಲಬೇಕು. ಅವರಿವರನ್ನು ನಿಲ್ಲಿಸುತ್ತೇನೆ ಅಂತ ಹೇಳ್ತೀರಿ ಯಾಕೆ…? ಕ್ಷೇತ್ರದಲ್ಲಿ ಅಪ್ಪ-ಮಗ ಜೋಡಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನಿಮ್ಮ ಮಗನ ಕೈಯಲ್ಲಿ ಒಬ್ಬ ಅಧಿಕಾರಿ ಉಳಿದಿಲ್ಲ. ಕ್ಷೇತ್ರದಲ್ಲಿ ಒಂದು ಮರಳು ಪಾಯಿಂಟ್ ಉಳಿದಿಲ್ಲ ಎಂದು ಭ್ರಷ್ಟಾಚಾರದ ವಿರುದ್ಧ ಕಾಶಪ್ಪನವರ ದನಿಯೆತ್ತಿದರು.

ಕ್ಷೇತ್ರದಲ್ಲಿ ಗುಂಡಾಗಿರಿ ನಡೆದಿದೆ. ನಾನು ಮಾಜಿ ಶಾಸಕ.. ನನ್ನ ಮೇಲೆಯೇ ಹಲ್ಲೆ ಆಗ್ತಿದೆ. ಶಾಸಕ ಹಾಗೂ ಅವರ ಪುತ್ರನ ಕುಮ್ಮಕ್ಕಿನಿಂದ ನನ್ನ ಮನೆಗೆ ಬಂದು ಹಲ್ಲೆ ಮಾಡ್ತೇವಿ ಅಂತಾರೆ. ಊರಲ್ಲಿ ಹಫ್ತಾ ವಸೂಲಿ ನಡೆದಿದೆ. ಬಡವರಿಗೆ ಹತ್ತರ ಬಡ್ಡಿಯಲ್ಲಿ ದುಡ್ಡು ಕೊಡುವ ದಂಧೆ ಇಲ್ಲಿ ನಡೆಯುತ್ತದೆ. ಈ ಬಡ್ಡಿ ವ್ಯವಹಾರ ನಡೆಯಲು ಬಿಟ್ಟವರು ಯಾರು..? ಇದೇ ಶಾಸಕ ದೊಡ್ಡನಗೌಡ ಎಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಿಡಿಕಾರಿದರು. ಎರಡು ದಿನಗಳ ಹಿಂದೆ ತಮ್ಮ ಮನೆಗೆ ವಾರೆಂಟ್ ಕೊಡಲು ಬಂದಿದ್ದ ಪೊಲೀಸ್ ಅಧಿಕಾರಿಗಳಿಗೆ ಆವಾಜ್ ಹಾಕಿದ್ದ ಕಾಶಪ್ಪನವರ ಇಂದು ಶಾಸಕ ದೊಡ್ಡನಗೌಡ ಪಾಟಿಲ್ ವಿರುದ್ದ ಕಿಡಿಕಿಡಿಯಾದರು.

(Hungund ex mla vijayanand kashappanavar challenges sitting mla doddanagouda patil to contest next assembly election)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ