ಸ್ಮಾರ್ಟ್ ಮೀಟರ್: ಪಕ್ಕದ ರಾಜ್ಯದಲ್ಲಿ 900 ರೂ.ಇಲ್ಯಾಕೆ 10 ಸಾವಿರ: ಸರ್ಕಾರಕ್ಕೆ ಕೋರ್ಟ್ ಪ್ರಶ್ನೆ

ವಿದ್ಯುತ್ ಬಳಕೆಗೆ ಸ್ಮಾರ್ಟ್ ಪ್ರೀ ಪೇಮೆಂಟ್ ಮೀಟರ್ ಆಳವಡಿಕೆಗೆ ಬೆಸ್ಕಾಂ ಅಧಿಸೂಚನೆ ಹೊರಡಿಸಿದೆ. ಬೆಸ್ಕಾಂನ ಸ್ಮಾರ್ಟ್​ ಮೀಟರ್​​ (Bescom smart meter ) ಅಳವಡಿಕೆಗೆ ಆರಂಭಿಕ ವಿಘ್ನ ಎದುರಾಗಿದೆ.ಸ್ಮಾರ್ಟ್ ಮೀಟರ್ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್​ ನಲ್ಲಿ ವಿಚಾರಣೆ ನಡೆದಿದ್ದು, ಇದರಲ್ಲಿ ಸರ್ಕಾರದ ನಡೆಯನ್ನು ಕೋರ್ಟ್ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಹಾಗಾದ್ರೆ, ವಾದ ಪ್ರತಿವಾದ ಹೇಗಿತ್ತು ನೋಡಿ.

ಸ್ಮಾರ್ಟ್ ಮೀಟರ್: ಪಕ್ಕದ ರಾಜ್ಯದಲ್ಲಿ 900 ರೂ.ಇಲ್ಯಾಕೆ 10 ಸಾವಿರ: ಸರ್ಕಾರಕ್ಕೆ ಕೋರ್ಟ್ ಪ್ರಶ್ನೆ
Smart Prepaid Meter
Updated By: ರಮೇಶ್ ಬಿ. ಜವಳಗೇರಾ

Updated on: Jul 07, 2025 | 6:58 PM

ಬೆಂಗಳೂರು, (ಜುಲೈ 07): ಬೆಸ್ಕಾಂನ ಸ್ಮಾರ್ಟ್​ ಮೀಟರ್​​ (Bescom smart meter) ಕಡ್ಡಾಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court), ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ. ಸ್ಮಾರ್ಟ್​ ಮೀಟರ್ ಸಂಬಂಧ ಬೆಸ್ಕಾಂ ಕ್ರಮ ಪ್ರಶ್ನಿಸಿ ಜಯಲಕ್ಷ್ಮೀ ಎಂಬುರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪಕ್ಕದ ರಾಜ್ಯದಲ್ಲಿ 900 ರೂಪಾಯಿ ಇದೆ. ಆದ್ರೆ, ಇಲ್ಯಾಕೆ (ಕರ್ನಾಟಕ) 10 ಸಾವಿರ ರೂಪಾಯಿ ಎಂದು ಪ್ರಶ್ನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿದೆ.

ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾ ಮಂಡಿಸಿದ್ದು, ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್. ಹೊಸ ವಿದ್ಯುತ್ ಸಂಪರ್ಕಕ್ಕೆ ಪೋಸ್ಟ್ ಪೇಯ್ಡ್ ಸ್ಮಾರ್ಟ್ ಮೀಟರ್. ಇನ್ನು ಹೊಸ ಗ್ರಾಹಕರಿಗೆ ಮಾತ್ರ ಈ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ತಿಳಿಸಿದರು.

ಇದನ್ನೂ ಓದಿ: ಫ್ರೀ ವಿದ್ಯುತ್ ಯಾರು ಕೇಳಿದ್ರು?: ಸ್ಮಾರ್ಟ್ ಮೀಟರ್​ ಶುಲ್ಕಕ್ಕೆ ಹೈಕೋರ್ಟ್​ ತಡೆ, ಬೆಸ್ಕಾಂಗೆ ಫುಲ್ ಕ್ಲಾಸ್​!

ಇದಕ್ಕೆ ಪ್ರತಿವಾದ ಮಂಡಿಸಿದ ಅರ್ಜಿದಾರ ಜಯಲಕ್ಷ್ಮೀ ಪರ ವಕೀಲ ಲಕ್ಷ್ಮೀ ಐಯ್ಯಂಗಾರ್, 3 ಫೇಸ್ ಸ್ಮಾರ್ಟ್ ಮೀಟರ್ ಗೆ 10 ಸಾವಿರ ವಿಧಿಸಲಾಗುತ್ತಿದೆ. ಪ್ರತಿ ತಿಂಗಳು ಗುತ್ತಿಗೆದಾರ 75 ರೂಪಾಯಿ ರಾಜಶ್ರೀ ಎಲೆಕ್ಟ್ರಿಕಲ್ಸ್ ಗೆ ನೀಡಬೇಕಾಗಿದೆ ಎಂದರು.

ಈ ವಾದ ಪ್ರತಿವಾದ ಆಲಿಸಿದ ನ್ಯಾyಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಗ್ರಾಹಕರಿಗೆ ಗೊಂದಲ ಉಂಟುಮಾಡುವ ನೀತಿ ಏಕೆ ರೂಪಿಸಿದ್ದೀರಿ?  ನೆರೆ ರಾಜ್ಯಗಳಿಗಿಂತ ನಮ್ಮ ಗ್ರಾಹಕರಿಗೆ ದರ ಏರಿಕೆ ಹೊಡೆತ ಬೀಳಬಾರದು. ಪಕ್ಕದ ರಾಜ್ಯದಲ್ಲಿ 900 ರೂಪಾಯಿ. ಇಲ್ಯಾಕೆ 10 ಸಾವಿರ ರೂಪಾಯಿ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು, ಈ ಬಗ್ಗೆ ಬಗ್ಗೆ ಜುಲೈ 9ರಂದು ಪ್ರತಿಕ್ರಯಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ವಿದ್ಯುತ್‌ ಬಳಕೆ ಸಂಬಂಧ ರಿಯಲ್ ಟೈಂನಲ್ಲಿ ವಿದ್ಯುತ್ ಬಳಕೆ ಬಗ್ಗೆ ನಿಖರ ಮಾಹಿತಿ ಒದಗಿಸುವ ಸ್ಮಾರ್ಟ್‌ ಮೀಟರ್‌ಗಳಿಗೆ ಭಾರಿ ಮೊತ್ತದ ಹೆಚ್ಚುವರಿ ದರ ನಿಗದಿ ಆಕ್ಷೇಪಿಸಿ ಜಯಲಕ್ಷ್ಮೀ ಎನ್ನುವರು ಸಲ್ಲಿಸಿದ್ದರು. ಈ ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.‌ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಸ್ಮಾರ್ಟ್​ ಮೀಟರ್​​ (Smart Meter ) ಶುಲ್ಕಕ್ಕೆ ಮಧ್ಯಂತರ ತಡೆ ನೀಡಿತ್ತು. ಅಲ್ಲದೇ ಬಡವರಿಂದ ಇಷ್ಟು ಹಣ ಕಿತ್ತುಕೊಂಡರೆ ಎಲ್ಲಿಗೆ ಹೋಗಬೇಕು. ಎಲ್ಲರೂ ಸ್ಮಾರ್ಟ್ ಮೀಟರ್ ಹಾಕಬೇಕೆಂದರೆ ಬಡವರೇನು ಮಾಡಬೇಕು ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ