AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು

ಪ್ರಿಯಕರ ಹಾಗೂ ಪ್ರೇಯಿಸಿ ನಡುವೆ ಮನಸ್ತಾಪ ಉಂಟಾಗಿದ್ದು, ಇಬ್ಬರ ನಡವೆ ಗಲಾಟೆಯಾಗಿದೆ. ಈ ವೇಳೆ ಪ್ರಿಯಕರ ಪ್ರೇಯಸಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಆದರೂ ಪ್ರೇಯಸಿ ತಪ್ಪಿಸಿಕೊಂಡು ಓಡುವ ವೇಳೆ ಆಯಾತಪ್ಪಿ ಬಿದ್ದು ಮೂರ್ಛೆ ಹೋಗಿದ್ದಾಳೆ. ಆದ್ರೆ, ಪ್ರೇಯಸಿ ಸತ್ತು ಬಿದ್ದಳು ಎಂದು ಬಾವಿಸಿ ಪ್ರಿಯಕರ ಆಕೆಯ ಮನೆಯಲ್ಲೇ ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಮೂರ್ಛೆ ತಪ್ಪಿ ಬಿದ್ದ ಪ್ರೇಯಸಿ, ಸತ್ತಳೆಂದು ಆಕೆಯ ಮನೆಯಲ್ಲೇ ಪ್ರಿಯಕರ ನೇಣಿಗೆ ಶರಣು
Sridhar
ಅಶೋಕ್​ ಪೂಜಾರಿ, ಮಂಗಳೂರು
| Updated By: ರಮೇಶ್ ಬಿ. ಜವಳಗೇರಾ|

Updated on: Jul 07, 2025 | 6:22 PM

Share

ಮಂಗಳೂರು, (ಜುಲೈ 07): ಪ್ರಿಯತಮೆ (Girl Friend) ಕೊಲೆಗೆ ಯತ್ನಿಸಿ ಬಳಿಕ ಆಕೆಯ ಮನೆಯಲ್ಲೇ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ  (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳಯಲ್ಲಿ ನಡೆದಿದೆ. ಕೊಡ್ಮಾಣ್ ಗ್ರಾಮದ ನಿವಾಸಿ ಸುಧೀರ್(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಶ್ರೀಧರ್, ದಿವ್ಯಾ ಯಾನೆ ಎಂಬ ಯುವತಿಯನ್ನು ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ (Love). ಆದ್ರೆ, ಅದೇನಾಯ್ತೋ ಏನೋ ಕೆಲ ತಿಂಗಳ ಹಿಂದೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದು, ಇಂದು(ಜುಲೈ 07) ದಿವ್ಯಾಳ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಆಕೆಯನ್ನು ಹತ್ಯೆಗೆ ಯತ್ನಿಸಿ ಬಳಿಕ ತಾನೂ ಸಹ ಅದೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಶ್ರೀಧರ್, ದಿವ್ಯಾ ಯಾನೆ ಎಂಬ ಯುವತಿಯನ್ನು ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ. ಆದ್ರೆ, ಅದೇನಾಯ್ತೋ ಏನೋ ಕೆಲ ತಿಂಗಳ ಹಿಂದೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದು, ದಿವ್ಯಾ ಶ್ರೀಧರನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಶ್ರೀಧರ್ ಇಂದು (ಜುಲೈ 07) ಪ್ರೇಯಸಿ ಮನೆಗೆ ಆಗಮಿಸಿ ಮದುವೆಗೆ ಪೀಡಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಶ್ರೀಧರ್, ದಿವ್ಯಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ದಿವ್ಯಾ ಮೂರ್ಛೆ ಹೋಗಿ ಬಿದ್ದಿದ್ದಾಳೆ. ಆದ್ರೆ, ದಿವ್ಯಾ ಸತ್ತಳೆಂದು ಭಯಗೊಂಡು ಪ್ರಿಯಕರ ಆಕೆಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು

ದಿವ್ಯಾ ಯಾನೆ ಶ್ರೀಧರ್​​ನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೂ ಬಿಡದ ಶ್ರೀಧರ್, ದಿವ್ಯಾಳಿಗೆ ಫೋನ್ ಮಾಡುವುದು, ಹಿಂಬಾಲಿಸುವುದು ಮಾಡುತ್ತಿದ್ದ. ಆದರೂ ದಿವ್ಯಾ ಕ್ಯಾರೇ ಎಂದಿಲ್ಲ. ಕೊನೆಗೆ ಶ್ರೀಧರ್ ಇಂದು(ಜುಲೈ 07) ದಿವ್ಯಾ ಇರುವ ಬಾಡಿಗೆ ಮನೆಗೆ ಆಗಮಿಸಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾನೆ/ ಆ ಬಳಿಕ ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಶ್ರೀಧರ್, ದಿವ್ಯಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಆಗ ದಿವ್ಯಾ ತಪ್ಪಿಸಿಕೊಂಡು ಹೋಗುವಾಗ ಮೂರ್ಛೆ ತಪ್ಪಿ ಬಿದ್ದಿದ್ದಾಳೆ.

ಆದ್ರೆ ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಸುಧೀರ್ , ದಿವ್ಯಾ ಇದ್ದ ಬಾಡಿಗೆ ಮನೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಗಾಯಾಳು ದಿವ್ಯಾಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ