ಬೆಂಗಳೂರು: ಕರ್ನಾಟಕದಲ್ಲಿ 2ನೇ ಡೋಸ್ ಲಸಿಕೆ ಪೂರೈಕೆಯಲ್ಲಿ ಸಮಸ್ಯೆಯಾದ ಹಿನ್ನೆಲೆಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಾಜ್ಯಕ್ಕೆ ಅಗತ್ಯ ಪ್ರಮಾಣದ ಲಸಿಕೆ ಪೂರೈಸಬೇಕೆಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯದಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ 2ನೇ ಡೋಸ್ಗಾಗಿ 60.87 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ಬೇಕಿದೆ. ಆದರೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಆಗಸ್ಟ್ 4ರೊಳಗೆ 41.35 ಲಕ್ಷ ಡೋಸ್ ಲಸಿಕೆಗಳು ಮಾತ್ರವೇ ಸಿಗಲಿದೆ. ರಾಜ್ಯ ಸರ್ಕಾರವು ಲಸಿಕೆಗಳ ಬೇಡಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಹೇಳಿತು.
ಮಕ್ಕಳಿಗೆ ನೀಡುತ್ತಿದ್ದ ರೋಗನಿರೋಧಕ ಲಸಿಕೆ ಅಭಿಯಾನ ನಿಂತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, ಲಸಿಕೆ ಅಭಿಯಾನವನ್ನು ಮತ್ತೆ ಆರಂಭಿಸಬೇಕು ಎಂದು ಸಲಹೆ ಮಾಡಿತು.
ಮೆಟ್ರೋಗಾಗಿ ಮರ ಕಡಿಯಲು ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್
ಬೆಂಗಳೂರು ಮೆಟ್ರೋ ರೈಲು ಯೋಜನೆಗಾಗಿ ಮರಗಳನ್ನು ಕಡಿಯಲು ಕರ್ನಾಟಕ ಹೈಕೋರ್ಟ್ ಗುರುವಾರ ಷರತ್ತುಬದ್ಧ ಅನುಮತಿ ನೀಡಿದೆ. ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ ಮೆಟ್ರೋ ಯೋಜನೆಗಾಗಿ ಮರಗಳನ್ನು ಕಡಿಯಬೇಕಾಗಿದೆ. ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪರಿಹಾರ ರೂಪದಲ್ಲಿ 4000 ಮರಗಳನ್ನು ಬೆಳೆಸಬೇಕು ಮತ್ತು ಸ್ಥಳಾಂತರಗೊಂಡ ಮರಗಳನ್ನು ಸರಿಯಾಗಿ ಪೋಷಿಸಬೇಕು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.
ಮರ ಅಧಿಕಾರಿ ಮತ್ತು ಡಿಸಿಎಫ್ ವರ್ತನೆ ಸರಿಯಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಮರ ಬೆಳೆಸಲು ಸೂಕ್ತ ಪರ್ಯಾಯ ಜಾಗವನ್ನು ಪರಿಶೀಲಿಸಬೇಕಿತ್ತು ಎಂದು ಹೇಳಿತು. ಕಡಿಯುವ ಮರಗಳಿಗೆ ಬದಲಿಯಾಗಿ ಬೆಳೆಸುವ ಮರಗಳು ಮತ್ತು ಮಣ್ಣಿನ ಪರೀಕ್ಷೆಯ ವಿವರವನ್ನು ಎರಡು ವಾರಗಳ ಒಳಗೆ ನೀಡಬೇಕು ಎಂದು ಹೇಳಿತು.
ಇದನ್ನೂ ಓದಿ: ಕರ್ನಾಟಕದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳು: ಹೈಕೋರ್ಟ್ಗೆ ಕಾನೂನು ಪ್ರಾಧಿಕಾರ ವರದಿ
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆ; ಸುವೇಂದು ಅಧಿಕಾರಿಗೆ ಕೋಲ್ಕತ್ತ ಹೈಕೋರ್ಟ್ನಿಂದ ನೋಟಿಸ್