ಬೆಂಗಳೂರು: ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಈವರೆಗೆ ತನ್ನ ನಿಲುವು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಹಲವು ಬಾರಿ ನಿರ್ದೇಶನ ನೀಡಿದರೂ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಿಲ್ಲ. ಅರ್ಜಿದಾರರ ಮನವಿ ಬಗ್ಗೆಯೂ ತೀರ್ಮಾನ ಕೈಗೊಂಡಿಲ್ಲ. ಈ ಸಂಬಂಧ ಸಚಿವ ಸಂಪುಟದ ನಿರ್ಧಾರವನ್ನೂ ಹೈಕೋರ್ಟ್ಗೆ ತಿಳಿಸಿಲ್ಲ. ನಮ್ಮ ಆದೇಶ ಏಕೆ ಪಾಲಿಸಿಲ್ಲ ಎಂಬುದಕ್ಕೆ ವಿವರಣೆ ನೀಡಬೇಕು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಆನ್ಲೈನ್ ಜೂಜು ಮತ್ತು ಬೆಟ್ಟಿಂಗ್ ನಿಷೇಧಕ್ಕೆ ಸಂಬಂಧಿಸಿದಂತೆ ಜುಲೈ 8ರ ಒಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಆನ್ಲೈನ್ ಬೆಟ್ಟಿಂಗ್ ನಿಷೇಧಿಸಬೇಕು ಎಂದು ಆಗ್ರಹಿಸಿ ಡಿ.ಆರ್.ಶಾರದಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ತಮಿಳುನಾಡು ಬಳಿಕ, ಆಂಧ್ರದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ಬಂದ್
ತಮಿಳುನಾಡು ಸರ್ಕಾರದ ಬಳಿಕ ಇದೀಗ ಆಂಧ್ರ ಪ್ರದೇಶದಲ್ಲೂ ಆನ್ಲೈನ್ ಜೂಜಿನ ವಿರುದ್ಧ ಮಸೂದೆ ಅಂಗೀಕಾರವಾಗಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020ಯನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಈ ಹಿಂದೆ ಆಂಧ್ರದಲ್ಲಿ, ಆನ್ಲೈನ್ ಜೂಜಿನ ಸಾಲ ತೀರಿಸಲಾಗದೆ ಕೆಲವು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಗಳ ಬೆನ್ನಲ್ಲೇ ಸರ್ಕಾರ ಆನ್ಲೈನ್ ಜೂಜಾಟಗಳಿಗೆ ನಿರ್ಬಂಧ ಹೇರುವ ಮನಮಾಡಿದೆ.
ಕರ್ನಾಟಕದಲ್ಲಿ ಯಾವಾಗ?
ಆನ್ಲೈನ್ ಜೂಜಾಟಗಳನ್ನು ಬ್ಯಾನ್ ಮಾಡುವ ಬಗ್ಗೆ ಕರ್ನಾಟಕ ಸರ್ಕಾರವು ಹೇಳಿಕೆ ನೀಡುತ್ತಲೇ ಬಂದಿದ್ದು, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೂಜಿನಲ್ಲಿ ಪಾಲ್ಗೊಳ್ಳುವ ಯುವಕರಿಂದ ಅವರ ಮನೆಯವರೂ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳುನಾಡು, ಆಂಧ್ರದ ಬಳಿಕ ಕರ್ನಾಟಕದಲ್ಲೂ ಆನ್ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಮಸೂದೆ ರಚಿಸಬೇಕು ಎಂಬ ಕೂಗು ಜೋರಾಗುತ್ತಿದೆ.
(Karnataka High Court on State Govt Not informing its stand on online gambling and betting)
ಇದನ್ನೂ ಓದಿ: ಡಿಜಿಟಲ್ ಸುದ್ದಿ ಮಾಧ್ಯಮಗಳ ನಿಯಂತ್ರಣಕ್ಕಾಗಿರುವ ಹೊಸ ಐಟಿ ನಿಯಮಗಳ ಅನುಷ್ಠಾನಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ
ಇದನ್ನೂ ಓದಿ: ಪ್ರತಿ ಪೊಲೀಸ್ ಠಾಣೆಗೆ 2 ಶಬ್ದ ಮಾಪಕ ಅಗತ್ಯ: ಹೈಕೋರ್ಟ್ಗೆ ಪೊಲೀಸ್ ಇಲಾಖೆ ಮಾಹಿತಿ
Published On - 10:00 pm, Tue, 29 June 21