ಇದುವರೆಗೆ ಜಾತಿ ನಿಗಮ‌ಗಳಿಗೆ ಎಷ್ಟು ಅನುದಾನ ಹಂಚಲಾಗಿದೆ? ಎಷ್ಟು ಹಣ ಖರ್ಚಾಗಿದೆ? ಹೈಕೋರ್ಟ್​ ಪ್ರಶ್ನೆ

ನಿಗಮ ಸ್ಥಾಪನೆ ಹೈಕೋರ್ಟ್ ತೀರ್ಪಿಗೆ ಒಳಪಡುತ್ತದೆ ಎಂದು ಈಮುನ್ನ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿತ್ತು.

ಇದುವರೆಗೆ ಜಾತಿ ನಿಗಮ‌ಗಳಿಗೆ ಎಷ್ಟು ಅನುದಾನ ಹಂಚಲಾಗಿದೆ? ಎಷ್ಟು ಹಣ ಖರ್ಚಾಗಿದೆ? ಹೈಕೋರ್ಟ್​ ಪ್ರಶ್ನೆ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: guruganesh bhat

Updated on: Aug 13, 2021 | 8:47 PM

ಬೆಂಗಳೂರು: ಜಾತಿ ಆಧರಿತ ನಿಗಮ ಸ್ಥಾಪನೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court)  ವಿಭಾಗೀಯ ಪೀಠ, ಇದುವರೆಗೆ ಜಾತಿ ನಿಗಮ‌ಗಳಿಗೆ ಎಷ್ಟು ಅನುದಾನ ಹಂಚಲಾಗಿದೆ? ಎಷ್ಟು ಹಣ ಖರ್ಚಾಗಿದೆ ಎಂದು ಪ್ರಶ್ನಿಸಿತು. ಜಾತಿ ಆಧರಿತ ನಿಗಮಗಳ ಸಂವಿಧಾನಬದ್ಧತೆಯನನ್ನು ಪ್ರಶ್ನಿಸಲಾಗಿತ್ತು. ನಿಗಮ ಸ್ಥಾಪನೆ ಹೈಕೋರ್ಟ್ ತೀರ್ಪಿಗೆ ಒಳಪಡುತ್ತದೆ ಎಂದು ಹೇಳಿತು. ನಿಗಮ ಸ್ಥಾಪನೆ ಹೈಕೋರ್ಟ್ ತೀರ್ಪಿಗೆ ಒಳಪಡುತ್ತದೆ ಎಂದು ಈಮುನ್ನ ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿತ್ತು.

ಚುನಾವಣೆಗಳ ವೇಳಾಪಟ್ಟಿ  ಕೋರ್ಟ್​ಗೆ ಸಲ್ಲಿಕೆ ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ಕಲಬುರಗಿ ಪಾಲಿಕೆ ಚುನಾವಣೆಗಳ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಹೈಕೋರ್ಟ್​​ಗೆ ಸಲ್ಲಿಸಿದೆ. ಮೇ ತಿಂಗಳಲ್ಲಿ ಕೊವಿಡ್ ಹೆಚ್ಚಿದ್ದರಿಂದ ಚುನಾವಣೆ ಮುಂದೂಡುವಂತೆ ಸರ್ಕಾರ ಮನವಿ ಮಾಡಿತ್ತು. ಆದರೆ ಮನವಿ ಒಪ್ಪುವುದು, ಬಿಡುವುದು ಆಯೋಗಕ್ಕೆ ಬಿಟ್ಟಿದ್ದಾಗಿತ್ತು. ಮೇ ತಿಂಗಳ ಕೊವಿಡ್ ಪರಿಸ್ಥಿತಿ ಈಗಿಲ್ಲ ಎಂದು ಹೈಕೋರ್ಟ್​ ಎಜಿ ಪ್ರಭುಲಿಂಗ್ ನಾವದಗಿ ತಿಳಿಸಿದರು. ಆಯೋಗದ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ: 

TV9 Kannada Digital Poll: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕೇ? ಬೇಡವೇ? ನಿಮ್ಮ ಅಭಿಪ್ರಾಯ ತಿಳಿಸಿ

BBMP: ಹೈಕೋರ್ಟ್ ನಿರ್ದೇಶನದ ಬಳಿಕ 25 ಶೌಚಾಲಯ ನಿರ್ಮಾಣ ಆರಂಭ; 55 ಶೌಚಾಲಯಗಳಿಗೆ ಟೆಂಡರ್

(Karnataka High Court questions How many grants have been allocated to caste corporations so far)