ದಕ್ಷ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ನಿವೃತ್ತ ನ್ಯಾ. ಡಿ.ವಿ.ಶೈಲೇಂದ್ರ ಕುಮಾರ್ ನಿಧನ

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಹಾಗೂ ಹಲವು ಮಹತ್ವದ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ ಅವರು ನಿಧನ ಹೊಂದಿದ್ದಾರೆ.

ದಕ್ಷ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ನಿವೃತ್ತ ನ್ಯಾ. ಡಿ.ವಿ.ಶೈಲೇಂದ್ರ ಕುಮಾರ್ ನಿಧನ
ನಿವೃತ್ತ ನ್ಯಾ. ಡಿ.ವಿ.ಶೈಲೇಂದ್ರ ಕುಮಾರ್
Follow us
Rakesh Nayak Manchi
|

Updated on:Mar 03, 2023 | 3:46 PM

ಬೆಂಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್ (D.V.Shylendra Kumar) ಇಂದು 72ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಬಳ್ಳಾರಿಯಿಂದ ಅದಿರು ರಫ್ತು ನಿಷೇಧಿಸಲು ನಿರ್ದೇಶನ ನೀಡಿದ್ದ ಡಿ.ವಿ.ಶೈಲೇಂದ್ರ ಅವರು ಮೊಟ್ಟ ಮೊದಲಬಾರಿ ತಮ್ಮ ಆಸ್ತಿ ವಿವರ ಬಹಿರಂಗಪಡಿಸಿದ್ದರು. ಮಾತ್ರವಲ್ಲದೆ, ಹೈಕೋರ್ಟ್ ನ್ಯಾಯಮೂರ್ತಿಯಾಗಿ ಹಲವು ಮಹತ್ವದ ತೀರ್ಪು ನೀಡಿದ್ದರು.

ದಿಟ್ಟ, ದಕ್ಷ ನ್ಯಾಯಮೂರ್ತಿ ಎಂದೇ ಪ್ರಸಿದ್ಧರಾಗಿದ್ದ ಶೈಲೇಂದ್ರ ಕುಮಾರ್ ಅವರ ಕಣ್ಣಿಗೆ ಯಾವುದು ತಪ್ಪು ಎಂದು ಕಾಣಿಸುತ್ತದೆಯೋ ಅದನ್ನು ಅವರು ನೇರವಾಗಿ ಯಾವುದೇ ಭೀತಿ ಇಲ್ಲದೆ ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು. ಹೈಕೋರ್ಟ್​ನ ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಪಿ.ಡಿ.ದಿನಕರನ್ ಅವರ ಕೆಲವೊಂದು ತೀರ್ಮಾನಗಳ ಬಗ್ಗೆ ಬಹಿರಂಗವಾಗಿಯೇ ಲೇಖನಗಳನ್ನು ಬರೆದು ಗಮನಸೆಳೆದಿದ್ದರು.

ಇದನ್ನೂ ಓದಿ: Hijab Row: ಮಾ.9ಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ, ಹೋಳಿಯ ನಂತರ ಹಿಜಾಬ್ ವಿಚಾರಣೆ ಎಂದ ಸುಪ್ರೀಂ

ಮಾತ್ರವಲ್ಲದೆ, ಜಿ ಕೆಟಗರಿ ಕೋಟಾದಡಿ ಹಂಚಿಕೆ ಮಾಡಲಾಗಿರುವ 814 ನಿವೇಶನಗಳ ಕಾನೂನು ಬದ್ಧತೆ ಪರಾಮರ್ಶೆ ಮಾಡಲು 1029ರಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಆರಂಭದಲ್ಲಿ ಈ ಸಮಿತಿಯ ಅಧ್ಯಕ್ಷರು ನ್ಯಾ. ಎ.ಎಂ.ಫಾರೂಕ್ ಅವರಾಗಿದ್ದರು. ಆದರೆ ಇವರ ನಿಧನದ ಹಿನ್ನಲೆ ಶೈಲೇಂದ್ರ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

1951ರ ಸೆಪ್ಟೆಂಬರ್ 5ರಂದು ಜನಿಸಿದ್ದ ಶೈಲೇಂದ್ರ ಕುಮಾರ್ ಅವರು, 1976ರಲ್ಲಿ ವಕೀಲ ವೃತ್ತಿಯನ್ನು ಆರಂಬಿಸಿದ್ದರು. 2000ರ ಡಿಸೆಂಬರ್​ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅದಾದ ಎರಡು ವರ್ಷಗಳಲ್ಲಿ (2002) ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Fri, 3 March 23