ಕರ್ನಾಟಕ ರಾಜ್ಯವ್ಯಾಪಿ ಕೆರೆಗಳ ಸರ್ವೆಗೆ ಹೈಕೋರ್ಟ್​ ಸೂಚನೆ: ನೀರಿ ವರದಿ ಆಧರಿಸಿ ಸಮೀಕ್ಷೆ ಸರ್ಕಾರದ ಒಪ್ಪಿಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 16, 2021 | 9:40 PM

ಕರ್ನಾಟಕದಲ್ಲಿ ಕೊವಿಡ್ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆರೆಗಳ ಸರ್ವೆ ನಡೆಸಲು ಹೈಕೋರ್ಟ್ ಬುಧವಾರ (ಜೂನ್ 16) ಸೂಚನೆ ನೀಡಿದೆ. ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ನಿರ್ದೇಶನ ನೀಡಿರುವ ಹೈಕೋರ್ಟ್​, ಬೆಂಗಳೂರು ನಗರದ ಕೆಲ ಕೆರೆಗಳ ಬಗ್ಗೆಯೂ ವರದಿ ನೀಡುವಂತೆ ಹೇಳಿದೆ.

ಕರ್ನಾಟಕ ರಾಜ್ಯವ್ಯಾಪಿ ಕೆರೆಗಳ ಸರ್ವೆಗೆ ಹೈಕೋರ್ಟ್​ ಸೂಚನೆ: ನೀರಿ ವರದಿ ಆಧರಿಸಿ ಸಮೀಕ್ಷೆ ಸರ್ಕಾರದ ಒಪ್ಪಿಗೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆರೆಗಳ ಸರ್ವೆ ನಡೆಸಲು ಹೈಕೋರ್ಟ್ ಬುಧವಾರ (ಜೂನ್ 16) ಸೂಚನೆ ನೀಡಿದೆ. ಕೆರೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ನಿರ್ದೇಶನ ನೀಡಿರುವ ಹೈಕೋರ್ಟ್​, ಬೆಂಗಳೂರು ನಗರದ ಕೆಲ ಕೆರೆಗಳ ಬಗ್ಗೆಯೂ ವರದಿ ನೀಡುವಂತೆ ಹೇಳಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಕೆಲ ಕೆರೆಗಳ ಸಮೀಕ್ಷೆಯ ನಂತರ ‘ನೀರಿ’ (National Environmental Engineering Research Institute – NEERI) ವರದಿ ಜಾರಿಗೊಳಿಸಲಾಗುವುದೆಂದು ಸರ್ಕಾರ ಪರ ಹಾಜರಿದ್ದ ವಕೀಲರು ಹೇಳಿದರು. ವರದಿ ಆಧರಿಸಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿತು.

ಕೆರೆಗಳನ್ನು ಕಾಪಾಡಬೇಕೆಂದು ಕೋರಿ ಎನ್​ವಿರಾನ್​ಮೆಂಟ್ ಸಪೋರ್ಟ್​ ಗ್ರೂಪ್​ (ಇಎಸ್​ಜಿ) ಸಂಸ್ಥೆಯ ಲಿಯೊ ಸಲ್ಡಾನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೆರೆಗಳ ನಿರ್ವಹಣೆಗೆ ಸಮಿತಿ ರಚಿಸಬೇಕು ಎಂದು ಸೂಚಿಸಿತ್ತು. ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದರೆ ಸಾಕು. ವಾರ್ಡ್​ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಥ ಸಮಿತಿಗಳನ್ನು ರಚಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

‘ನೀರಿ’ ಸಂಸ್ಥೆಯು ವೃಷಭಾವತಿ ಕಣಿವೆಯ ಸಂಪೂರ್ಣ ಸಮೀಕ್ಷೆಗೆ ಶಿಫಾರಸು ಮಾಡಿದೆ. ಕಂದಾಯ ಅಧಿಕಾರಿಗಳ ಮೂಲಕ ಈ ಸಮೀಕ್ಷೆ ಮಾಡಿಸಬೇಕು ಎಂದು ಹೈಕೋರ್ಟ್​ ಸಹ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನದಿಯುದ್ದಕ್ಕೂ ಎರಡೂ ಬದಿಯಲ್ಲಿ ನಿರ್ಮಾಣವಾಗಿರುವ ಅಕ್ರಮ ಕಟ್ಟಡ ಮತ್ತು ಒತ್ತುವರಿಗಳನ್ನು ಪತ್ತೆಹಚ್ಚಬೇಕು ಎಂದು ಮುಖ್ಯನ್ಯಾಯಮೂರ್ತಿ ಅಭಯ್​ ಓಕಾ ಮತ್ತು ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠವು ಸೂಚಿಸಿತ್ತು.

ವೃಷಭಾವತಿ ಕಣಿಗೆಯ ಕಣ್ಮರೆ ಮತ್ತು ಚರಂಡಿಗಳಿಂದ ನದಿಯ ಮಾಲಿನ್ಯದ ಬಗ್ಗೆ ಗೀತಾ ಮಿಶ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಲಯ ಮೇಲಿನಂತೆ ನಿರ್ದೇಶನ ನೀಡಿತ್ತು.

(Karnataka High Court Wants Govt to Conduct Survey of all Lakes of State)

ಇದನ್ನೂ ಓದಿ: Lake Conservation: ಕೆರೆ ಬಳಕೆದಾರರ ಸಂಘಕ್ಕೆ ಉತ್ತೇಜನ ನೀಡಿದ್ದು ಈ ಮೂರು ಪರಿಕಲ್ಪನೆಗಳು: ಮದನ ಗೋಪಾಲ್

ಇದನ್ನೂ ಓದಿ: Lake Conservation: ಜನರ ಪಾಲುದಾರಿಕೆಯಿಂದ ಕೆರೆ ಸಮೃದ್ಧಿ ಯೋಜನೆಯ ಆಶಯಕ್ಕೆ ಹೊಸ ವೇಗ ಬಂತು: ಮದನ್ ಗೋಪಾಲ್

Published On - 9:39 pm, Wed, 16 June 21