Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 7,345 ಜನರಿಗೆ ಕೊರೊನಾ ದೃಢ; 148 ಮಂದಿ ನಿಧನ

ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 33,296 ಆಗಿದೆ. 1,51,566 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 7,345 ಜನರಿಗೆ ಕೊರೊನಾ ದೃಢ; 148 ಮಂದಿ ನಿಧನ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಜೂನ್ 16) ಹೊಸದಾಗಿ 7,345 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 27,84,355ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 25,99,472 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 148 ಜನರ ಸಾವು ಸಂಭವಿಸಿದೆ. ಇದರಿಂದ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 33,296 ಆಗಿದೆ. 1,51,566 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 1,611 ಜನರಿಗೆ ಸೋಂಕು ತಗುಲಿರುವುದು ಧೃಡವಾಗಿದೆ. ನಗರದಲ್ಲಿ ಇಂದು ಕೊರೊನಾ ಸೋಂಕಿಗೆ 19 ಜನರು ನಿಧನರಾಗಿದ್ದಾರೆ. ಬೆಂಗಳೂರಿನ ಕೊರೊನಾ ಪೀಡಿತರ ಸಂಖ್ಯೆ 12,00,754ಕ್ಕೆ ಏರಿಕೆಯಾಗಿದೆ. 12,00,754 ಸೋಂಕಿತರ ಪೈಕಿ 11,06,138 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15,354 ಜನರ ಸಾವು ಸಂಭವಿಸಿದೆ. 79,261 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ
ಬಾಗಲಕೋಟೆ 47, ಬಳ್ಳಾರಿ 183, ಬೆಳಗಾವಿ 254, ಬೆಂಗಳೂರು ಗ್ರಾಮಾಂತರ 275, ಬೆಂಗಳೂರು ನಗರ 1611, ಬೀದರ್ 14, ಚಾಮರಾಜನಗರ 97, ಚಿಕ್ಕಬಳ್ಳಾಪುರ 145, ಚಿಕ್ಕಮಗಳೂರು 254, ಚಿತ್ರದುರ್ಗ 95, ದಕ್ಷಿಣ ಕನ್ನಡ 790, ದಾವಣಗೆರೆ 207, ಧಾರವಾಡ 112, ಗದಗ 52, ಹಾಸನ 531, ಹಾವೇರಿ 27, ಕಲಬುರಗಿ 26, ಕೊಡಗು 116, ಕೋಲಾರ 102, ಕೊಪ್ಪಳ 77, ಮಂಡ್ಯ 317, ಮೈಸೂರು 841, ರಾಯಚೂರು 22, ರಾಮನಗರ 58, ಶಿವಮೊಗ್ಗ 262, ತುಮಕೂರು 347, ಉಡುಪಿ 159, ಉತ್ತರ ಕನ್ನಡ 239, ವಿಜಯಪುರ 73 ಹಾಗೂ ಯಾದಗಿರಿಯಲ್ಲಿ 12 ಕೊವಿಡ್-19 ಪ್ರಕರಣಗಳು ಇಂದು ವರದಿಯಾಗಿವೆ.

ಜಿಲ್ಲಾವಾರು ಕೊರೊನಾದಿಂದ ಮೃತರ ಸಂಖ್ಯೆ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 148 ಜನರ ಸಾವು ಸಂಭವಿಸಿದೆ. ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 28 ಜನರ ಬಲಿಯಾಗಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 19 ಜನರ ಬಲಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 14, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಜನ, ಧಾರವಾಡ ಜಿಲ್ಲೆಯಲ್ಲಿ 9 ಜನರು, ಬಳ್ಳಾರಿ, ದಾವಣಗೆರೆ ಜಿಲ್ಲೆಯಲ್ಲಿಂದು ತಲಾ 7 ಜನರು, ಮಂಡ್ಯ ಜಿಲ್ಲೆಯಲ್ಲಿ 7 ಜನರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6 ಜನ, ತುಮಕೂರು ಜಿಲ್ಲೆಯಲ್ಲಿ 5, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 4, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 4, ಕೋಲಾರ, ಕೊಪ್ಪಳ ಜಿಲ್ಲೆಯಲ್ಲಿ ತಲಾ 3, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ 3, ಗದಗ, ಕೊಡಗು ಜಿಲ್ಲೆಯಲ್ಲಿ ಇಂದು ತಲಾ 2, ರಾಮನಗರ, ಉಡುಪಿ ಜಿಲ್ಲೆಯಲ್ಲಿ ತಲಾ 2, ಚಾಮರಾಜನಗರ ಜಿಲ್ಲೆಯಲ್ಲಿ 1, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ತಲಾ 1 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: VivaTech Summit 2021: ಕೊರೊನಾ ನಿರ್ವಹಣೆಗೆ ಆವಿಷ್ಕಾರ, ನವೋದ್ಯಮಗಳ ಕೊಡುಗೆ ನೆನೆದ ಪ್ರಧಾನಿ ನರೇಂದ್ರ ಮೋದಿ

ಕೊರೊನಾದಿಂದ ಗುಣಮುಖನಾದ ವ್ಯಕ್ತಿಯಲ್ಲಿ ಹಸಿರು ಫಂಗಸ್ ಪತ್ತೆ.. ಶುರುವಾಗಿದೆ ಬಣ್ಣ ಬಣ್ಣದ ಫಂಗಸ್​ಗಳ ಹಾವಳಿ

Click on your DTH Provider to Add TV9 Kannada