ಹಿಜಾಬ್ ಮತ್ತು ಕೇಸರಿ ಶಾಲು ವಿಚಾರಣೆ ಶುರುವಾಗಿ ಸುಮಾರು ದಿನಗಳೂ ಕಳೆದಿವೆ. ಹೈಕೋರ್ಟ್ನಲ್ಲಿ ಈ ಕುರಿತಾಗಿ ವಾದ ಪ್ರತಿವಾದಗಳು ನಡೆಯುತ್ತಿವೆ. ಈ ಸಮವಸ್ತ್ರಕ್ಕಾಗಿ ನಡೆಯುತ್ತಿರುವ ಕಾನೂನು ಸಮರ ಇಂದು ಕೂಡ ಮುಂದುವರೆದಿದೆ. ಇಂದು 11ನೇ ದಿನ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಇಂದು ವಾದ ಮಂಡನೆ ಮುಕ್ತಾಯಗೊಳಿಸಬೇಕು ಮತ್ತು ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ನಿನ್ನೆ ಸೂಚನೆ ನೀಡಿತ್ತು. ಅದರಂತ್ತೆಯೇ ಇಂದು 11ದಿನಗಳ ಹೈಕೋರ್ಟ್ ವಾದಮಂಡನೆ ಮುಕ್ತಾಯವಾಗಿದೆ. ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಪೀಠ ತೀರ್ಪು ಕಾಯ್ದಿರಿಸಿದೆ. ಮಧ್ಯಂತರ ಅರ್ಜಿದಾರರು ಬಯಸಿದರೆ ಲಿಖಿತ ವಾದ ಸಲ್ಲಿಸಬಹುದಾಗಿದೆ. ವಾದ ಪ್ರತಿವಾದಿಗಳು ಲಿಖಿತ ವಾದ ಸಲ್ಲಿಸಬಹುದಾಗಿದೆ.
ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಅರ್ಜಿ ವಿಚಾರಣೆಯ ವಾದಮಂಡನೆ ಮುಕ್ತಾಯವಾಗಿದ್ದು, ಹೈಕೋರ್ಟ್ ಪೂರ್ಣಪೀಠ ತೀರ್ಪು ಕಾಯ್ದಿರಿಸಿದೆ. ಮಧ್ಯಂತರ ಅರ್ಜಿದಾರರು ಬಯಸಿದರೆ ಲಿಖಿತ ವಾದ ಸಲ್ಲಿಸಬಹುದು. ವಾದ ಪ್ರತಿವಾದಿಗಳು ಲಿಖಿತ ವಾದ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.
ಹಿಜಾಬ್ಗಾಗಿ ರಾತ್ರೋರಾತ್ರಿ ಇಂತಹ ಗಲಭೆಗಳು ನಡೆಯಲು ಸಾಧ್ಯವಿಲ್ಲ. ಇದೇ ವಿದ್ಯಾರ್ಥಿನಿಯರು ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ. ಈ ಬಗ್ಗೆ ಫೋಟೋಗ್ರಾಫ್ಗಳು ಲಭ್ಯವಿದೆ. ಹಿಜಾಬ್ಗಾಗಿ ದೇಶಾದ್ಯಂತ ಹಿರಿಯ ವಕೀಲರನ್ನು ನೇಮಿಸಲಾಗಿದೆ. ಭಾರತವನ್ನು ಇಸ್ಲಾಮೀಕರಣ ಮಾಡಬೇಕೆಂದು ಹಣಕಾಸಿನ ನೆರವು ನೀಡಲಾಗಿದೆ. ಹೀಗಾಗಿ ಸಿಬಿಐ ತನಿಖೆಯಾಗಬೇಕೆಂದು ಕೋರುತ್ತಿದ್ದೇವೆ ಎಂದು ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡಿಸಿದರು.
ಹಿಜಾಬ್ ವಿಚಾರದಲ್ಲಿ ಪಿಎಫ್‌ಐ, ಸಿಎಫ್‌ಐ, ಜಮಾತ್ ಇ ಇಸ್ಲಾಮಿಗಳ ಪಾತ್ರವಿದೆ. ಈ ಸಂಘಟನೆಗಳಿಗೆ ಸೌದಿ ಅರೇಬಿಯಾದಿಂದ ಹಣಕಾಸಿನ ನೆರವು ಸಿಗುತ್ತಿದೆ. ಹೀಗಾಗಿ ಸಿಬಿಐ ತನಿಖೆ ನಡೆದರೆ ಸತ್ಯ ತಿಳಿಯಲಿದೆ. ಹರ್ಷ ಎಂಬ ಯುವಕನ ಹತ್ಯೆಯಲ್ಲಿ ಕೆಲ ಸಂಘಟನೆಗಳ ಕೈವಾಡವಿದೆ ಎಂದು ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡಿಸಿದರು.
ಹೊಸ ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡನೆ ಆರಂಭಿಸಿದ್ದಾರೆ. 1973 ರಿಂದಲೂ ಹಿಜಾಬ್, ಬುರ್ಖಾ, ಗಡ್ಡಗಳ ಬಗ್ಗೆ ತೀರ್ಮಾನವಾಗಿದೆ. ಇನ್ನೆಷ್ಟು ವರ್ಷ ಕೋರ್ಟ್ಗಳು ಈ ವಿಚಾರಗಳನ್ನು ತೀರ್ಮಾನಿಸಬೇಕು. ವಕೀಲರಿಗೆ ಸಮವಸ್ತ್ರವಾಗಿ ಧೋತಿ ಕುರ್ತಾ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಭಾರತದ ಸಂಸ್ಕೃತಿಯಂತೆ ಸಮವಸ್ತ್ರ ಕೋರಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ ಎಂದಿದ್ದಾರೆ. ವಕೀಲರೂ ಸಮವಸ್ತ್ರ ಧರಿಸುತ್ತಾರೆ. ನ್ಯಾಯಮೂರ್ತಿಗಳೂ ಕೂಡಾ ಸಮವಸ್ತ್ರ ಧರಿಸುತ್ತಾರೆ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅತ್ಯಗತ್ಯ ಎಂದು ಸುಭಾಶ್ ಝಾ ವಾದ ಮಂಡಿಸಿದರು. ನೀವು ಸಿಬಿಐ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದೀರಾ, ಸಂಘಟನೆಗಳ ಪಾತ್ರವಿದೆ ಎಂದು ಆರೋಪಿಸಿದ್ದೀರಾ, ಇದಕ್ಕೆ ನೀವು ಯಾವ ದಾಖಲೆಗಳನ್ನು ಸಲ್ಲಿಸಿದ್ದೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ.
ಪಿಐಎಲ್ ಅರ್ಜಿದಾರ ಡಾ.ವಿನೋದ್ ಕುಲಕರ್ಣಿ ವಾದಮಂಡನೆ ಆರಂಭಿಸಿದ್ದು, 1400 ವರ್ಷಗಳಿಂದ ಹಿಜಾಬ್ ಆಚರಣೆ ಮಾಡಲಾಗುತ್ತಿದೆ. ಹಿಜಾಬ್ ಧರಿಸುವುದನ್ನು ತಡೆಯದಂತೆ ಮನವಿ ಮಾಡಿದ್ದು, ಲಿಖಿತ ವಾದಮಂಡನೆ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಕಾಲೇಜನ್ನು ತಟ್ಟೆಯಲ್ಲಿಟ್ಟು ಶಾಸಕರಿಗೆ ನೀಡಲಾಗಿದೆ. ಶಾಸಕರ ಮೇಲೆ ಕಾಲೇಜಿಗೆ ಯಾವುದೇ ಅಧಿಕಾರವಿರುವುದಿಲ್ಲ. ಸಮಿತಿಯ ಮೂಲಕ ಅಧಿಕಾರವನ್ನು ಸಮಿತಿ ಹೈಜಾಕ್ ಮಾಡಿದೆ ಎಂದು ರವಿವರ್ಮಕುಮಾರ್ ವಾದಮಂಡನೆ ಮುಕ್ತಾಯಗೊಳ್ಳಿಸಿದರು.
ಅರ್ಜಿದಾರರ ಪರ ರವಿವರ್ಮಕುಮಾರ್ ವಾದಮಂಡನೆ ಆರಂಭಿಸಿದ್ದು, ಕಾಲೇಜು ಅಭಿವೃದ್ದಿಗೆ ಶಾಸನಬದ್ಧ ಅಧಿಕಾರವಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಶಾಸಕರ ನೇತೃತ್ವದ ಅಭಿವೃದ್ಧಿ ಸಮಿತಿ ಸಮರ್ಥಿಸಿಕೊಂಡಿದ್ದಾರೆ. ಸಿಡಿಸಿಯ ಇತರೆ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ಶಾಸಕರ ತೀರ್ಮಾನವನ್ನು ಜಾರಿ ಮಾಡುವುದಷ್ಟೇ ಇವರ ಕೆಲಸ. ಶಾಸಕರಿಗೆ ಕಾಲೇಜಿನ ಆಡಳಿತ ನೀಡುವುದೇ ಕಾನೂನುಬಾಹಿರ ಎಂದಿದ್ದಾರೆ.
ಹದೀಸ್ನಲ್ಲೂ ಕೂಡಾ ತಲೆ ಮುಚ್ಚುವ ಬಗ್ಗೆ ಹೇಳಲಾಗಿದೆ. ಮುಖವನ್ನು ಬಟ್ಟೆಯಿಂದ ಮುಚ್ಚುವ ಅಗತ್ಯವಿಲ್ಲ. ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ ಎಂಬ ವಾದ ಸರಿಯಲ್ಲ. ಎರಡೂ ಕಡೆಯವರು ಹಲವಾರು ತೀರ್ಪುಗಳನ್ನು ಕೊಟ್ಟಿದ್ದಾರೆ. ನೀವು ನಿಮ್ಮ ವಾದಗಳ ಒಂದು ಸಣ್ಣ ಟಿಪ್ಪಣಿ ನೀಡಿ. ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಯೂಸುಫ್ ಮುಕ್ಕಲಾ ವಾದಮಂಡನೆ ಮುಕ್ತಾಯಗೊಳಿಸಿದ್ದಾರೆ.
ಹೈಕೋರ್ಟ್ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಇಂದು 4 ಗಂಟೆವರೆಗೆ ಮಾತ್ರ ವಿಚಾರಣೆ ನಡೆಯಲಿದೆ. ಇಂದು ವಾದಮಂಡನೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಸರ್ಕಾರ, ಪ್ರತಿವಾದಿಗಳ ವಾದಮಂಡನೆಯನ್ನು ವಿರೋಧಿಸುತ್ತೇನೆ. ನಮಗೆ ಆತ್ಮಸಾಕ್ಷಿಯ ಆಚರಣೆಯ ಸ್ವಾತಂತ್ರ್ಯ ಇದೆ. ತಲೆಯ ಮೇಲೆ ಮಾತ್ರ ಹಿಜಾಬ್ ಧರಿಸುತ್ತಾರೆ ಎಂದು ಅರ್ಜಿದಾರರ ಪರ ಯೂಸುಫ್ ಮುಕ್ಕಲಾ ವಾದ ಮಂಡಿಸುತ್ತಿದ್ದಾರೆ. ನೀವು ಈ ಹಿಂದೆ ಮಾಡಿರುವ ವಾದವನ್ನೇ ಪುನರಾವರ್ತಿಸಬೇಡಿ ಎಂದು ಸಿಜೆ ಸೂಚನೆ ನೀಡಿದ್ದಾರೆ.
Published On - 2:44 pm, Fri, 25 February 22