ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದಿದೆ. ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ಆದರೆ ಈ ವಿವಾದದ ಬಗ್ಗೆ ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂದು ವಿಚಾರಣೆ ಮಾಡಲಾಗಿದ್ದು, ವಾದ ಪ್ರತಿವಾದದ ಬಳಿಕ ಹೈಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಅಂತ ಇಡೀ ರಾಜ್ಯ ಕಾದು ಕುಳಿತಿದೆ.
ಉಡುಪಿ: ನಾಳೆಯಿಂದ ರಾಜ್ಯಾದ್ಯಂತ ಕಾಲೇಜು ಆರಂಭ ಹಿನ್ನೆಲೆ ಉಡುಪಿ ಡಿ.ಸಿ ಕೂರ್ಮರಾವ್ ಜಿಲ್ಲಾಮಟ್ಟದ ಶಾಂತಿ ಸಭೆ ಕರೆದಿದ್ದಾರೆ. ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಭೆ ಕರೆಯಲಾಗಿದೆ. ಸಿಇಒ ಹಾಗೂ ಎಡಿಸಿ, ಎಸ್ಪಿ, ಜಿಲ್ಲಾ ಶಿಕ್ಷಣ ಇಲಾಖೆ, ಹಿಂದೂ ಮತ್ತು ಮುಸ್ಲಂ ಸಂಘಟನೆಗಳು ಮತ್ತು ಸಮಾಜ ಸೇವಕರು ಹಾಗೂ ಕ್ರೈಸ್ತ ಧರ್ಮಗುರುಗಳು ಉಪಸ್ಥಿತರಿದ್ದರು.
ಮಡಿಕೇರಿ: ನಾಳೆಯಿಂದ ಕಾಲೇಜುಗಳು ಆರಂಭ ಹಿನ್ನೆಲೆ, ಮಡಿಕೇರಿಯಲ್ಲಿ ಕೊಡಗು ಜಿಲ್ಲಾಡಳಿತ ಮಹತ್ವದ ಸಭೆ ನಡೆಸಿದೆ.
ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಡಾ ಬಿಸಿ ಸತೀಶ್ ಸಭೆ ಮಾಡಿದ್ದು, ಹಲವು ಸಲಹೆ ಸೂಚನೆಗಳನ್ನು ಡಿಸಿ ನೀಡಿದ್ದಾರೆ. ಹೈಕೋರ್ಟ್ ಆದೇಶ ಕಡ್ಡಾಯ ಪಾಲನೆಗೆ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಧಾರ್ಮಿಕ ಉಡುಪು ಧರಿಸಿ ಕಾಲೇಜು ಪ್ರವೇಶಿಸಲು ಅವಕಾಶ ಇಲ್ಲ. ವಿದ್ಯಾರ್ಥಿಗಳ ಹೊರತುಪಡಿಸಿ ಬೇರೆಯವರಿಗೆ ಕಾಲೇಜು ಪ್ರವೇಶವಿಲ್ಲ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಮೇಲೆ ದೈಹಿಕ ಬಲ ಪ್ರಯೋಗ ಮಾಡಬೇಡಿ ಎಂದು ಸಭೆಯಲ್ಲಿ ಪ್ರಾಂಶುಪಾಲರಿಗೆ ಡಿಸಿ ಸೂಚನೆ ನೀಡಿದ್ದಾರೆ. ಇದೇವೇಳೆ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಭಾಗಿಯಾಗಿದ್ದರು.
ದಾವಣಗೆರೆ: ಹಿಜಾಬ್ ಜತೆ ಮತ್ತೊಂದು ಹೊಸ ವಿವಾದ ಶುರುವಾಗಿದೆ. ಬಿಳಿ ಟೋಪಿ ಧರಿಸಿ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.
ಟೋಪಿ ತೆಗೆಯಲು ವಿದ್ಯಾರ್ಥಿಗಳು ನಿರಾಕರಿಸಿದ ಹಿನ್ನೆಲೆ, ಶಿಕ್ಷಕರು ಶಾಲೆಯಿಂದ ಹೊರಗೆ ಕೂರಿಸಿದ್ದಾರೆ. ನೆನ್ನೆವರೆಗೂ ಬಿಳಿ ಟೊಪ್ಪಿ ಧರಿಸಿ ಬಾರದ ವಿದ್ಯಾರ್ಥಿಗಳು, ಇಂದು ಬಿಳಿ ಟೊಪ್ಪಿ ಧರಿಸಿ ಶಾಲೆಗೆ ಬರುತ್ತಿದ್ದು, ಇದ್ದಕ್ಕಿದ್ದಂತೆ ಬದಲಾವಣೆಯಾಹಿದೆ. ಸದ್ಯ ಹೊನ್ನಾಳಿ ತಹಶೀಲ್ದಾರ್ ಬಸನಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕಾಲೇಜು ಅಭಿವೃದ್ದಿ ಸಮಿತಿಗೆ ಕಾಯ್ದೆಯಡಿ ಅಧಿಕಾರವಿಲ್ಲ. ಹೀಗಾಗಿ ಸಮವಸ್ತ್ರ ಜಾರಿ ಅಧಿಕಾರ ಸಮಿತಿಗೆ ನೀಡಲು ಸಾಧ್ಯವಿಲ್ಲ ಎಂದು ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದ್ದು, ನಾಳೆ ಮಧ್ಯಾಹ್ನ 2.30ಕ್ಕೆ ವಾದಮಂಡನೆ ಮುಂದುವರಿಸಲು ಹೈಕೋರ್ಟ್ ಸೂಚನೆ ನೀಡಿದೆ.
ನಾನು ಸುವ್ಯವಸ್ಥೆಯ ವಿವಾದಕ್ಕೆ ಹೋಗುವುದಿಲ್ಲ, ಇದು ಅವ್ಯವಸ್ಥೆ. ಸರ್ಕಾರ ಸಮವಸ್ತ್ರಕ್ಕಾಗಿಯೇ ಉನ್ನತ ಸಮಿತಿ ರಚಿಸಿದೆ. ಹೀಗಾಗಿ ಸಮವಸ್ತ್ರ ಧರಿಸಬೇಕು ಎಂಬುದೇ ಅರ್ಥಹೀನ. ಸಮವಸ್ತ್ರ ಸಂಹಿತೆ ರಚಿಸದೇ ಸಮವಸ್ತ್ರಕ್ಕೆ ಸೂಚಿಸುವುದು ಸರಿಯಲ್ಲ. ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ. ಸಮಾನತೆ, ಸಾಮರಸ್ಯಕ್ಕೆ ಧಕ್ಕೆಯಾಗುವ ಬಟ್ಟೆ ನಾವು ಧರಿಸುತ್ತಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್ಗಳ ವಿವರಣೆಯನ್ನು ವಕೀಲರು ನೀಡುತ್ತಿದ್ದಾರೆ ಎಂದು ಮತ್ತೆ ಸರ್ಕಾರದ ಆದೇಶ ರವಿವರ್ಮಕುಮಾರ್ ಓದುತ್ತಿದ್ದಾರೆ.
ಮೊದಲನೇ ಅರ್ಜಿ ಹಿಂಪಡೆಯಲು ಹೈಕೋರ್ಟ್ ಅನುಮತಿ ನೀಡಿದ್ದು, ರವಿವರ್ಮಕುಮಾರ್ ವಾದಮಂಡನೆ ಆರಂಭವಾಗಿದೆ.
ಯುವತಿಯ ಎರಡನೇ ಅರ್ಜಿ ಸಂಬಂಧ ರವಿವರ್ಮಕುಮಾರ್ ವಾದಮಂಡನೆ ಮಾಡುತ್ತಿದ್ದು, ಕರ್ನಾಟಕ ಸರ್ಕಾರದ ಸಮವಸ್ತ್ರ ಆದೇಶವನ್ನು ರವಿವರ್ಮಕುಮಾರ್ ಓದುತ್ತಿದ್ದಾರೆ. ಸರ್ಕಾರ ಸಮವಸ್ತ್ರ ನೀತಿ ಬಗ್ಗೆ ಉನ್ನತ ಸಮಿತಿ ರಚಿಸಿದೆ, ವರದಿ ಬರುವವರೆಗೂ ಈಗಿರುವಂತೆ ಸಮವಸ್ತ್ರ ಪಾಲಿಸಲು ಸೂಚನೆ ನೀಡಿದೆ. ಸರ್ಕಾರ ಸಮವಸ್ತ್ರ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಸರ್ಕಾರ ಯಾವುದೇ ಸಮವಸ್ತ್ರ ಸಂಹಿತೆ ರೂಪಿಸಿಲ್ಲ. ಸಮವಸ್ತ್ರ ನೀತಿ ಬಗ್ಗೆ ನಿರ್ಧರಿಸಲು ಉನ್ನತ ಸಮಿತಿಯನ್ನಷ್ಟೇ ರಚಿಸಿದೆ ಎಂದು ರವಿವರ್ಮಕುಮಾರ್ ವಾದ ಮಂಡಿಸುತ್ತಿದ್ದಾರೆ.
ವಾದಮಂಡನೆಗೆ ಹಲವು ವಕೀಲರಿಂದ ಹಕ್ಕು ಮಂಡನೆ. ಒಂದು ಪ್ರಕರಣದಲ್ಲಿ ರವಿವರ್ಮಕುಮಾರ್ ವಾದ. ಆದರೆ ಆ ಯುವತಿ ಈಗಾಗಲೇ ಮತ್ತೊಂದು ಅರ್ಜಿ ಸಲ್ಲಿಸಿದ್ದಾಳೆ ಎಂದು ಎಜಿ ಹೇಳಿದ್ದಾರೆ. ಆ ಯುವತಿ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ. ಒಂದೇ ಯುವತಿಯ ಎರಡನೇ ಅರ್ಜಿ ವಿಚಾರಣೆಗೆ ಎಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊದಲ ಅರ್ಜಿಯನ್ನು ಹಿಂಪಡೆಯಲು ಮೊಹಮ್ಮದ್ ತಾಹೀರ್ಗೆ ಹೇಳಲಾಗಿದೆ. ಎರಡನೇ ಅರ್ಜಿಗೆ ವಾದಮಂಡಿಸಲು ಅನುಮತಿ ಕೋರಿಕೆ. ಒಂದೇ ಅರ್ಜಿದಾರರು ಬೇರೆ ಬೇರೆ ವಕೀಲರ ಮೂಲಕ ವಾದಿಸುತ್ತಿದ್ದಾರೆ ಎಂದು ಎಜಿ ಹೇಳಿದ್ದಾರೆ. ಯುವತಿ ಪರ ಸಂಜಯ್ ಹೆಗ್ಡೆ ಈಗಾಗಲೇ ವಾದ ಮಂಡಿಸಿದ್ದಾರೆ ಎಂದು ಸಿಜೆ ಹೇಳಿದ್ದಾರೆ.
ಹಿಜಾಬ್ ಧರಿಸಿದ ಒಂದೇ ಕಾರಣಕ್ಕೆ ತರಗತಿಯೊಳಗೆ ಬಿಡುತ್ತಿಲ್ಲ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ನಿಬಂಧನೆಗಳಿಲ್ಲ ಎನ್ನುವ ಕಾಮತ್ರ ವಾದಕ್ಕೆ, ಆದರೆ ಧಾರ್ಮಿಕ ಸ್ವಾತಂತ್ರ್ಯ 25(1) ಶುರುವಾಗುವುದೇ ನಿಬಂಧನೆಗಳಿಂದ ಎಂದು ಸಿಜೆ ಪ್ರಶ್ನಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ತೆರಳುತ್ತಾರೆ. ಹೆಚ್ಚುವರಿಯಾಗಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಮುಂದುವರಿಸಬಾರದು ಎಂದು ದೇವದತ್ ವಾದಮಂಡನೆ ಮುಗಿಸಿದ್ದಾರೆ.
ನಮ್ಮ ಜಾತ್ಯಾತೀತತೆ, ಟರ್ಕಿಯ ಜಾತ್ಯಾತೀತತೆಯಲ್ಲ. ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳಿಗೂ ಸಮಭಾವವಿದೆ. ಸರ್ವ ಧರ್ಮ ಸಮಭಾವ ಎಂಬ ವೇದಗಳ ಉಲ್ಲೇಖ ಪಾಲಿಸುತ್ತೇವೆ. ಒಂದು ಧರ್ಮದವರು ಮತ್ತೊಂದು ಧರ್ಮದವರನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆ ಪರಸ್ಪರ ಅರ್ಥ ಮಾಡಿಕೊಂಡು ಭಿನ್ನಾಭಿಪ್ರಾಯ ದೂರ ಮಾಡಬೇಕು. ಧಾರ್ಮಿಕ ವೈವಿಧ್ಯತೆಯನ್ನು ನಮ್ಮ ದೇಶ ಗುರುತಿಸಿದೆ. ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸುತ್ತಾರೆ. ಜೊತೆಗೆ ಹಿಜಾಬ್ ಧರಿಸಲೂ ಅನುಮತಿ ನೀಡಬೇಕು. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಭಾಗ ಎಂದು ಪರಿಗಣಿಸಬೇಕು. ಮುಸ್ಲಿಂರನ್ನು ಅಲ್ಪಸಂಖ್ಯಾತರೆಂದು ಸಂವಿಧಾನದ 29ನೇ ವಿಧಿ ರಕ್ಷಿಸುತ್ತದೆ. ಹಿಂದೂ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸುವುದೂ ತಪ್ಪಾಗುತ್ತದೆ. ಹಿಜಾಬ್ನ ಆಧಾರದಲ್ಲಿ ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸಬಾರದು. ಹಿಜಾಬ್ ಹೆಚ್ಚುವರಿಯಾಗಿ ಧರಿಸಿದರೆ ಯಾರಿಗೂ ಸಮಸ್ಯೆಯಿಲ್ಲ. ಧಾರ್ಮಿಕ ಹಕ್ಕನ್ನು ವಿದ್ಯಾರ್ಥಿನಿ ಬಳಸಿದರೆ ತಪ್ಪೇನು, ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಅಮಾನತು ಮಾಡಬಾರದು.
ನಿಮ್ಮ ಅರ್ಜಿದಾರರನ್ನು ಶಾಲೆಯಿಂದ ಅಮಾನತು ಮಾಡಲಾಗಿದೆಯೇ ಎಂದು ಸಿಜೆ ಮರು ಪ್ರಶ್ನೆ ಮಾಡಿದೆ.
ನಾನು ಕೆನಡಾ ತೀರ್ಪನ್ನು ಉಲ್ಲೇಖಿಸಲು ಬಯಸುತ್ತೇನೆ ಎಂದು ದೇವದತ್ ಹೇಳಿದಾಗ ಆ ತೀರ್ಪುಗಳು ಇಲ್ಲಿಗೇ ಹೇಗೆ ಪೂರಕವಾಗಲಿದೆ, ನಮ್ಮ ಸಂವಿಧಾನದ ಚೌಕಟ್ಟಿನಲ್ಲಿ ನಾವು ತೀರ್ಮಾನಿಸಬೇಕು ಎಂದು ಸಿಜೆ ಹೇಳುತ್ತಾರೆ. ನಾನು ನನ್ನ ಲಿಖಿತ ವಾದಮಂಡನೆಯನ್ನೂ ಸಲ್ಲಿಸುತ್ತೇನೆ. ಗುಲಾಂ ಅಬ್ಬಾಸ್ ಪ್ರಕರಣದಲ್ಲಿ ನ್ಯಾ. ಚಂದ್ರಚೂಡ್ ನೀಡಿರುವ ತೀರ್ಪು ಗಮನಿಸಬೇಕು. ಕೆಲ ನಿಮಿಷದಲ್ಲಿ ವಾದ ಮುಗಿಸುತ್ತೇನೆ ಎಂದು ದೇವದತ್ ಹೇಳಿದ್ದಾರೆ. ನಾನು ರಸ್ತೆಯಲ್ಲಿ ಹೋಗುವುದು ನನ್ನ ಹಕ್ಕು. ಯಾರೋ ಒಬ್ಬರಿಗೆ ನಾನು ರಸ್ತೆಯಲ್ಲಿ ಓಡಾಡುವುದು ಇಷ್ಟವಿಲ್ಲದಿರಬಹುದು. ಹಾಗೆಂದ ಮಾತ್ರಕ್ಕೆ ಸರ್ಕಾರ ನನ್ನನ್ನು ರಸ್ತೆಯಲ್ಲಿ ಹೋಗದಂತೆ ತಡೆಯಬಾರದು ಎಂದು ಹೇಳಿದ್ದಾರೆ.
ನೀವು ನಿನ್ನೆ 10 ನಿಮಿಷದಲ್ಲಿ ವಾದ ಮುಗಿಸುತ್ತೇನೆಂದಿದ್ರಿ ಎಂದು ದೇವದತ್ರಿಗೆ ಸಿಜೆ ಕೇಳಿದೆ. ನಾವು ಇನ್ನೂ ಅರ್ಧ ಡಜನ್ ವಕೀಲರು ವಾದ ಮಂಡಿಸಬೇಕಿದೆ. ಅರ್ಜಿದಾರರ ಪರ ಇತರೆ ವಕೀಲರಿಂದ ದೇವದತ್ ವಾದಕ್ಕೆ ಆಕ್ಷೇಪ ಮಾಡಲಾಗಿದೆ. ನಮಗೇನೂ ತರಾತುರಿಯಿಲ್ಲ ಆದರೆ ನಿಮಗೆ ಸ್ವಲ್ಪ ಆತುರ ಬೇಕಿದೆ ಎಂದು ಸಿಜೆ ಹೇಳಿದ್ದಾರೆ. ನಾನು ಶೀಘ್ರ ವಾದಮಂಡನೆ ಮುಗಿಸುತ್ತೇನೆ, ನನ್ನ ಅವಲಂಬಿಸಿರುವ ಕೇಸ್ಗಳ ಪಟ್ಟಿ ಕೋರ್ಟ್ಗೆ ನೀಡುತ್ತೇನೆ ಎಂದು ದೇವದತ್ ಹೇಲಿದ್ದಾರೆ. ಸರ್ಕಾರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು. ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಹಕ್ಕುಗಳನ್ನು ದಮನಿಸಬಾರದು.
ಮೂಗುಬಟ್ಟು ಶಾಲೆಯ ಪಾಲಿಗೆ ಹೆಚ್ಚಿನ ಹೊರೆಯಾಗುತ್ತದೆಯೇ, ಈ ಅಂಶದ ಬಗ್ಗೆಯೂ ದಕ್ಷಿಣ ಆಫ್ರಿಕಾ ಕೋರ್ಟ್ ಚರ್ಚಿಸಿದೆ. ಶಾಲೆಯಲ್ಲಿ ಶಿಸ್ತು, ನಿಯಮ ಪಾಲನೆಗೆ ಪ್ರಾಮುಖ್ಯತೆ ಇದೆ. ಮೂಗುಬಟ್ಟು ಧರಿಸುವುದರಿಂದ ಅದಕ್ಕೆ ಧಕ್ಕೆಯಾಗುವುದಿಲ್ಲ. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ವಿನಾಯಿತಿ ನೀಡಿದರೆ ಸಮಸ್ಯೆಯಾಗಲ್ಲ, ಹಿಜಾಬ್ ವಿಚಾರದಲ್ಲೂ ತಲೆಯ ಮೇಲಿನ ವಸ್ತ್ರ ಮಾತ್ರ ಕೇಳುತ್ತಿದ್ದೇವೆ. ಹೆಚ್ಚುವರಿ ವಸ್ತ್ರದಿಂದ ಶಾಲೆಯ ಸಮವಸ್ತ್ರ ನೀತಿಗೆ ಅಡ್ಡಿಯಾಗಲ್ಲ. ಸುನಾಲಿ 2 ವರ್ಷದಿಂದಲೂ ಮೂಗುಬಟ್ಟು ಧರಿಸುತ್ತಿದ್ದಳು. ಮೂಗುಬಟ್ಟಿಗೆ ಅವಕಾಶ ನೀಡುವುದರಿಂದ ವೈವಿಧ್ಯತೆ ಹೆಚ್ಚುತ್ತದೆ. ಮಕ್ಕಳು ವೈವಿಧ್ಯತೆಯ ಸಂಸ್ಕೃತಿ ಅರ್ಥೈಸಲು ಅನುಕೂಲವಾಗುತ್ತದೆ. ಮೂಗುಬಟ್ಟಿಗೆ ಅವಕಾಶ ನೀಡಿದರೆ ಇತರೆ ವಿದ್ಯಾರ್ಥಿಗಳೂ ಧರಿಸಬಹುದು. ಫ್ಯಾಷನ್ ವಸ್ತುಗಳನ್ನು ಧರಿಸಲು ಆರಂಭಿಸಬಹುದೆಂದು ಶಾಲೆ ತಕರಾರು ಮಾಡಿತ್ತು, ಆದರೆ ಕೋರ್ಟ್ ಇದನ್ನು ಫ್ಯಾಷನ್ ಎಂದು ಪರಿಗಣಿಸಲಿಲ್ಲ.
ಮೂಗುಬಟ್ಟು ಸಮವಸ್ತ್ರದ ಭಾಗವಲ್ಲವೆಂದು ಶಾಲೆ ವಾದಿಸಿತ್ತು, ಆ ದೇಶದಲ್ಲಿ ಅದು ಜನಪ್ರಿಯ ಆಚರಣೆಯಲ್ಲವೆಂದು ವಾದಿಸಿತ್ತು. ಈಗ ಹಿಜಾಬ್ ವಿಚಾರದಲ್ಲೂ ಇಂತಹದ್ದೇ ವಾದ ಕೇಳಿ ಬಂದಿದೆ. ನಾವೆಲ್ಲರೂ ಒಂದೇ ಶಕ್ತಿಯ ಪ್ರತಿನಿಧಿಗಳಾಗಿದ್ದೇವೆ. ವೇದ, ಉಪನಿಷತ್ಗಳಲ್ಲೂ ಇದನ್ನೇ ಹೇಳಲಾಗಿದೆ. ಮೂಗಬಟ್ಟು ಅವರ ಧರ್ಮದ ಕಡ್ಡಾಯ ಆಚರಣೆಯಲ್ಲದಿರಬಹುದು, ಆದರೆ ದಕ್ಷಿಣ ಭಾರತದ ತಮಿಳು ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ. ಹೀಗಾಗಿ ಈ ಸಂಸ್ಕೃತಿ ಧರ್ಮದ ಒಂದು ಭಾಗವೆಂದು ಪರಿಗಣಿಸಿತ್ತು ಎಂದು ದಕ್ಷಿಣ ಆಫ್ರಿಕಾದ ಹೈಕೋರ್ಟ್ ತೀರ್ಪುನ್ನು ದೇವದತ್ ಉಲ್ಲೇಖಿಸುತ್ತಿದ್ದಾರೆ. ಸುನಾಲಿ ಪಿಳ್ಳೈ ಶಾಲೆಯ ಹೊರಗಡೆ ಮೂಗುಬಟ್ಟು ಧರಿಸಬಹುದು, ಶಾಲೆಯ ಈ ವಾದಕ್ಕೆ ಅಲ್ಲಿನ ಸಿಜೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮೂಗುಬಟ್ಟು ಆಕೆಯ ಪಾಲಿಗೆ ನಂಬಿಕೆಯ ಆಚರಣೆಯಾಗಿರಬಹುದು. ಆ ಆಚರಣೆ ಧರ್ಮದಲ್ಲಿ ಕಡ್ಡಾಯ ಆಚರಣೆ ಆಗದಿರಬಹುದು, ಎಷ್ಟರಮಟ್ಟಿಗೆ ಆ ಆಚರಣೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಈ ಅಂಶವನ್ನೂ ಪರಿಗಣಿಸಬೇಕು ಎಂದು ಕೋರ್ಟ್ ಹೇಳಿತ್ತು. ಬಿಜಾಯ್ ಎಮ್ಯಾನುಯಲ್ ಪ್ರಕರಣದಲ್ಲೂ ನಮ್ಮ ಸುಪ್ರೀಂಕೋರ್ಟ್ ಹೀಗೇ ಹೇಳಿದ್ದು, ಆಕೆಯ ನಂಬಿಕೆ ಸರಿಯೋ ತಪ್ಪೋ ನಾವು ಹೇಳಲಾಗದು. ಅದು ನಂಬಿಕೆ ಇಟ್ಟವನ ವಿಶ್ವಾಸವನ್ನು ಅವಲಂಬಿಸಿದೆ ಎಂದು ಹೇಳಲಾಗಿದೆ.
ರಸ್ತಾಫಾರಿಯನ್ ಸಂಪ್ರದಾಯಸ್ಥರಲ್ಲಿ ಕೂದಲು ಗಂಟು ಮಾಡುವ ಅಭ್ಯಾಸವಿದೆ. ಹಿಜಾಬ್ ಧರಿಸುವ ಸಂಪ್ರದಾಯವಿದ್ದರೆ ಅದಕ್ಕೆ ಸರ್ಕಾರ ಅನುಮತಿ ನೀಡಬೇಕು. ಬದಲಿಗೆ ಹಿಜಾಬ್ ಧರಿಸುವವರನ್ನು ದಂಡಿಸಬಾರದು. ದಕ್ಷಿಣ ಭಾರತದ ವಿದ್ಯಾರ್ಥಿನಿ ಮೂಗುಬಟ್ಟು ಇಟ್ಟು ಶಾಲೆಗೆ ತೆರಳಿದ್ದಳು. ಶಾಲೆಯ ಆಡಳಿತ ಮಂಡಳಿ ಇದನ್ನು ಅಡ್ಡಿಪಡಿಸಿತ್ತು. ಇದಕ್ಕೆ ಅನುಮತಿ ನೀಡಿದರೆ ಭಯಾನಕ ಮೆರವಣಿಗೆಯಾಗತ್ತದೆ ಎಂದಿದ್ದ ಶಾಲೆ. ಇದನ್ನು ಪ್ರಶ್ನಿಸಿ ದಕ್ಷಿಣ ಆಫ್ರಿಕಾ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
ಈ ಬಗ್ಗೆ 200 ಪುಟಗಳ ತೀರ್ಪನ್ನು ಕೋರ್ಟ್ ನೀಡಿತ್ತು. ಮೂಗುಬಟ್ಟು ಐದು ಸಾವಿರ ವರ್ಷಗಳ ಸಂಪ್ರದಾಯವೆಂದು ಸುನಾಲಿ ಪಿಳ್ಳೈ ದಕ್ಷಿಣ ಆಫ್ರಿಕಾ ಕೋರ್ಟ್ ನಲ್ಲಿ ವಾದಿಸಿದ್ದಳು. ಶಾಲೆಯಿಂದ ಹೊರಗಡೆ ಮೂಗುಬಟ್ಟು ಧರಿಸಬಹುದೆಂದು ಶಾಲೆ ವಾದಿಸಿತ್ತು.
ನಾನು ಶಾಲೆಗೆ ಹೋಗುವಾಗ ರುದ್ರಾಕ್ಷಿಯನ್ನು ಧರಿಸುತ್ತಿದ್ದೆ. ಇದು ನನ್ನ ಧಾರ್ಮಿಕ ಗುರುತಿನ ಪ್ರದರ್ಶನವಾಗಿರಲಿಲ್ಲ. ಇದು ನನ್ನ ನಂಬಿಕೆಯ ವಿಚಾರವಾಗಿತ್ತು. ಇದು ನನಗೆ ವಿಶ್ವಾಸ ನೀಡುವ ಅಂಶವಾಗಿತ್ತು. ಕೆಲ ಸಂಪ್ರದಾಯಗಳನ್ನು ವೇದ, ಉಪನಿಷತ್ಗಳಲ್ಲಿ ನಿಗದಿಪಡಿಸಿರಬಹುದು. ಅಂತಹ ಸಂಪ್ರದಾಯಗಳನ್ನೂ ಕೋರ್ಟ್ ರಕ್ಷಿಸಬೇಕು. ರಸ್ತಾಫಾರಿಯನ್ ಸಂಪ್ರದಾಯಸ್ಥರಲ್ಲಿ ಕೂದಲು ಗಂಟು ಮಾಡುವ ಅಭ್ಯಾಸವಿದೆ. ಹಿಜಾಬ್ ಧರಿಸುವ ಸಂಪ್ರದಾಯವಿದ್ದರೆ ಅದಕ್ಕೆ ಸರ್ಕಾರ ಅನುಮತಿ ನೀಡಬೇಕೆ ಹೊರತು, ಬದಲಿಗೆ ಹಿಜಾಬ್ ಧರಿಸುವವರನ್ನು ದಂಡಿಸಬಾರದು ಎಂದು ದಕ್ಷಿಣ ಆಫ್ರಿಕಾ ಕೋರ್ಟ್ ನ ತೀರ್ಪು ದೇವದತ್ ಉಲ್ಲೇಖಿಸುತ್ತಿದ್ದಾರೆ.
ಸತೀ ಪದ್ದತಿ, ದೇವದಾಸಿ ಪದ್ದತಿ, ನರಬಲಿಯಂತಹ ಸಂಪ್ರದಾಯಗಳನ್ನು ನಿರ್ಬಂಧಿಸಬಹುದು. ಆದರೆ ಧರ್ಮದಲ್ಲಿ ಕಡ್ಡಾಯ ಆಚರಣೆಗಳನ್ನು ನಿರ್ಬಂಧಿಸಲಾಗದು. ಕಾಲ ವಕೀಲರು ಹಣೆಯಲ್ಲಿ ನಾಮ ಇಡುತ್ತಾರೆ, ಇದನ್ನು ಧಾರ್ಮಿಕ ಆಚರಣೆ ಎಂಬುದಕ್ಕಿಂತ ವೈಯಕ್ತಿಕ ವಿಶ್ವಾಸ ಎನ್ನಬಹುದು. ಸಂವಿಧಾನ ರಚನಾಕಾರರು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನೂ ಗುರುತಿಸಿದ್ದಾರೆ. ಶಿಕ್ಷಣದ ಕಾಯ್ದೆ ಆಧರಿಸಿ ಮತ್ತೊಬ್ಬರ ಹಕ್ಕನ್ನು ಕಿತ್ತುಕೊಳ್ಳಲಾಗದು ಎಂದು ದೇವದತ್ ಕಾಮತ್ ವಾದ ಮಂಡನೆ ಮಾಡಿದ್ದು, ನೀವು ಶಿಕ್ಷಣ ಕಾಯ್ದೆಯನ್ನು ಅರ್ಜಿಯಲ್ಲಿ ಪ್ರಶ್ನಿಸಿಲ್ಲ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ಶಿಕ್ಷಣ ಕಾಯ್ದೆ ಜಾರಿಗೆ ಬಂದಿರುವುದು ಹಿಜಾಬ್ ನಿರ್ಬಂಧಕ್ಕಲ್ಲ, ಯಾವುದೇ ಧಾರ್ಮಿಕ ಆಚರಣೆಯ ನಿರ್ಬಂಧಕ್ಕಲ್ಲ ಎಂದು ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಾಡುತ್ತಿದ್ದಾರೆ.
ಬೊಹ್ರಾ ಸಮುದಾಯದ ಸಂಪ್ರದಾಯಕ್ಕೆ ಸಂಬಂಧಿಸಿದ ವಿಚಾರ ಕುರಿತು ವಾದ ಮಂಡಿಸುತ್ತಿರುವ ಕಾಮತ್, ಸಮುದಾಯದ ಮುಖ್ಯಸ್ಥ, ಬೇರೆ ವ್ಯಕ್ತಿಗಳನ್ನು ಹೊರಗಿಡಲು ಅವಕಾಶವಿತ್ತು. ಬಾಂಬೆ ಸರ್ಕಾರ ಇದನ್ನು ಪ್ರತಿಬಂಧಿಸಿ ಆದೇಶ ಹೊರಡಿಸಿತ್ತು, ಆದೇಶ ಪ್ರಶ್ನಿಸಿ ಹಲವು ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಹೈಕೋರ್ಟ್ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು. ಧರ್ಮದ ಅತ್ಯಗತ್ಯ ಭಾಗವಾಗಿದ್ದರೆ 25(1) ಉಲ್ಲಂಘನೆಯಲ್ಲ, ಹೀಗೆಂದು ಕೋರ್ಟ್ ತೀರ್ಪು ನೀಡಿತ್ತು. ಸಾರ್ವಜನಿಕ ಸುವ್ಯವಸ್ಥೆ ಅಡಿ ಕ್ರಮಕ್ಕೆ ಸರ್ಕಾರಕ್ಕೆ ಪರಮಾಧಿಕಾರವಿಲ್ಲ. ಧರ್ಮದ ಅತ್ಯಗತ್ಯ ಭಾಗವಾಗಿದ್ದರೆ 25(2)(ಎ) ಅಡಿಯೂ ನಿರ್ಬಂಧಿಸುವಂತಿಲ್ಲ ಎಂದು ಸರ್ದಾರ್ ಸಹಿದ್ನಾ ಸೈಫುದ್ದೀನ್ ಪ್ರಕರಣವನ್ನು ದೇವದತ್ ಉಲ್ಲೇಖಿಸುತ್ತಿದ್ದಾರೆ.
ತಾಹೀರ್ ವಾದಕ್ಕೆ ಅಡ್ವೊಕೆಟ್ ಜನರಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಸೂಕ್ತ ಅರ್ಜಿ ಸಲ್ಲಿಸದೇ ವಾದಮಂಡಿಸುವುದು ಸರಿಯಲ್ಲ ಎಂದಿದ್ದಾರೆ. ಅರ್ಜಿ ಸಲ್ಲಿಸಿದರೆ ನಾವು ಅದಕ್ಕೆ ಆಕ್ಷೇಪ ಸಲ್ಲಿಸುತ್ತೇವೆ ಎಂದು ಎಜಿ ಪ್ರಭುಲಿಂಗ್ ನಾವದಗಿ ಹೇಳಿದ್ದಾರೆ. ಅರ್ಜಿದಾರರ ಪರ ದೇವದತ್ ಕಾಮತ್ ವಾದಮಂಡನೆ ಮುಂದುವರಿಕೆಯಾಗಿದ್ದು, ಪಬ್ಲಿಕ್ ಆರ್ಡರ್ ಅಂದರೆ ಸಾರ್ವಜನಿಕ ಸುವ್ಯವಸ್ಥೆ ಎಂದೇ ಅರ್ಥ. ಕನ್ನಡದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದು ಶಬ್ದಕೋಶದಲ್ಲಿದೆ ಎಂದು ಹೇಳಿದ್ದಾರೆ. ಸರ್ಕಾರಿ ಆದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದಿದೆ. ಸಂವಿಧಾನದ 25(1) ವಿಧಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದಿದೆ. ಹೀಗಾಗಿ ಅದೇ ಅರ್ಥವನ್ನು ಸರ್ಕಾರಿ ಆದೇಶದಲ್ಲೂ ಅರ್ಥೈಸಬೇಕು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಯಲ್ಲಿ ಸಂವಿಧಾನ ಪ್ರಕಟಿಸಿದೆ. ಅದರಲ್ಲೂ ಪಬ್ಲಿಕ್ ಆರ್ಡರ್ ಎಂದರೆ ಸಾರ್ವಜನಿಕ ಸುವ್ಯವಸ್ಥೆ, ಸರ್ಕಾರಿ ಆದೇಶದಲ್ಲೂ ಅದನ್ನೇ ಹೇಳಲಾಗಿದೆ. ಸರ್ದಾರ್ ಸಹಿದ್ನಾ ಸೈಫುದ್ದೀನ್ ಪ್ರಕರಣವನ್ನು ದೇವದತ್ ಉಲ್ಲೇಖಿಸುತ್ತಿದ್ದಾರೆ.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ವಿಚಾರಣೆ ಹೈಕೋರ್ಟ್‌ನಲ್ಲಿ ಆರಂಭವಾಗಿದ್ದು, ಇನ್ನೂ ಕೆಲ ವಕೀಲರಿಂದ ವಾದಮಂಡನೆಗೆ ಅವಕಾಶಕ್ಕೆ ಮನವಿ ಮಾಡಲಾಗುತ್ತಿದೆ. ಉರ್ದು ಶಾಲೆಗಳಿಗೂ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ಮೊಹಮ್ಮದ್ ತಾಹೀರ್ ವಾದ ಮಂಡಿಸುತ್ತಿದ್ದಾರೆ. ನೀವು ಈ ಸಂಬಂಧ ಯಾವುದೇ ಅರ್ಜಿ ಸಲ್ಲಿಸಿಲ್ಲ
ಸೂಕ್ತ ಅರ್ಜಿ ಸಲ್ಲಿಸಲು ಸಿಜೆ ಸಲಹೆ ನೀಡಿದೆ. ನಾನೇ ಪ್ರಕರಣದಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದೇನೆ. ಇಂತಹ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದನ್ನೇ ತಮ್ಮ ಗಮನಕ್ಕೆ ಸಲ್ಲಿಸಿದ್ದೇನೆ ಎಂದು ಮೊಹಮ್ಮದ್ ತಾಹೀರ್ ಹೇಳಿದ್ದಾರೆ. ವಕೀಲರಾಗಿ ನೀವೇ ಪ್ರಮಾಣಪತ್ರ ಹೇಗೆ ಸಲ್ಲಿಸುತ್ತೀರಿ ಇದು ವೃತ್ತಿಯ ದುರ್ನಡತೆಯಾಗಲಿದೆ ಅರ್ಥ ಮಾಡಿಕೊಳ್ಳಿ ಎಂದು ಸಿಜೆ ಹೇಳಿದ್ದಾರೆ.
ಬೆಂಗಳೂರು: ಹಿಜಾಬ್ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಇಂದು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಪೂರ್ಣ ಪೀಠ ವಹಿಸಲಿದ್ದಾರೆ. ಕುಂದಾಪುರ ಕಾಲೇಜು ಪ್ರಕರಣದಲ್ಲಿ ದೇವದತ್ ಕಾಮತ್ ವಾದ ಮಂಡಿಸಲಿದ್ದು, ಅರ್ಜಿದಾರರ ಪರ ರವಿವರ್ಮಕುಮಾರ್ ವಾದ ಮಂಡನೆ ಮಾಡಲಿದ್ದಾರೆ. ಮತ್ತು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ಪ್ರತಿವಾದ ಮಾಡಲಿದ್ದಾರೆ.
ಹಾಸನ: ಹಿಜಾಬ್ ಕಿಚ್ಚು ಹಾಸನಕ್ಕೂ ಹಬ್ಬಿದೆ. ಹಿಜಾಬ್ ತೆಗೆಯಲ್ಲ ಎಂದು 40 ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಜಿಲ್ಲೆಯ ಬೇಲೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಶಾಲಾ ಮೈದಾನದಲ್ಲೇ ಕುಳಿತು ಹಿಜಾಬ್ ಪರ ಹೋರಟ ಮಾಡುತ್ತಿದ್ದಾರೆ. ಹಿಜಾಬ್ ಧರಿಸಿಯೇ ಪಾಠ ಕೇಳಲು ಬಿಡಿ ಎಂದು ಹಠ ಹಿಡಿದಿದ್ದು, ಕೋರ್ಟ್ ತೀರ್ಪು ಏನೇ ಬಂದರು ನಾವು ಹಿಜಾಬ್ ತೆಗೆಯಲ್ಲ ಎನ್ನುತ್ತಿದ್ದಾರೆ. ಹಿಜಾಬ್ ಧರಿಸಿಯೇ ಹೋಗಿ ಎಂದು ನಮಗೆ ನಮ್ಮ ಪೋಷಕರಾರು ಹೇಳಿಕೊಟ್ಟಿಲ್ಲ
ಇದು ನಮ್ಮದೇ ಅಭಿಪ್ರಾಯ. ಇವತ್ತು ಹಿಜಾಬ್ ತಗಿರಿ ಅಂತಾರೆ ನಾಳೆ ಇನ್ನೊಂದು ಹೇಳ್ತಾರೆ. ಇನ್ನು ಮೂರು ದಿನ ಕಳೆದರೆ ಪೂರ್ವ ಸಿದ್ದತಾ ಪರೀಕ್ಷೆ ಬರುತ್ತೆ, ನಾವು ಓದಬೇಕು ನಮಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಶಾಲಾ ಉಪ ಪ್ರಾಂಶುಪಾಲರು, ಶಿಕ್ಷಕರು ಎಷ್ಟೇ ತಿಳಿ ಹೇಳಿದರೂ ಒಪ್ಪದ ವಿದ್ಯಾರ್ಥಿಗಳು, ಹಿಜಾಬ್ ತೆಗೆಯದೆ ಶಾಲೆ ಒಳಗೆ ಬಿಡಲ್ಲ ಎಂದು ಶಿಕ್ಷಕರು ಹೇಳಿದ್ದಾರೆ. ಯಾರ ಮನವಿಗೂ ಬಗ್ಗದ ವಿದ್ಯಾರ್ಥಿಗಳು ಕಡೆಗೆ ಮನೆಗೆ ಮರಳಿದ್ದಾರೆ.
ಗದಗ: ಡಿಡಿಪಿಐ, ತಹಶಿಲ್ದಾರ, ಪೊಲೀಸರು ಶಿಕ್ಷಕರು ಹೇಳಿದರೂ ಹಠ ಬಿಡದ ಮಕ್ಕಳು. ನಾನು ಏನ್ ಮಾಡಲಿ ಎಂದು ಗದನಲ್ಲಿ ಅಸಹಾಯಕತೆ ತೋಡಿಕೊಂಡ ಡಿಡಿಪಿಐ. ಶಿಕ್ಷಕಿಯರು ಹೇಳಿದರೂ ಹಠ ಬಿಡದ ಮಕ್ಕಳು ಹಿಜಾಬ್ ನಮ್ಮ ಹಕ್ಕು ಎಂದು ಮಕ್ಕಳು ಹೇಳುತ್ತಿದ್ದಾರೆ. ಅಧಿಕಾರಿಗಳ ಮನವಿಗೂ ಡೋಂಟ್ ಕೇರ್ ಅನ್ನದ ಮಕ್ಕಳು ಹಿಜಾಬ್ ಧರಿಸಿಯೇ ಕ್ಲಾಸ್ನಲ್ಲಿ ಕುಳಿತು ಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ಮಕ್ಕಳ ಹಠ, ಅಧಿಕಾರಿಗಳಿಗೆ ಪೀಕಲಾಟ ಎನ್ನುವಂತಾಗಿದೆ. ಕೊನೆಗೆ ಮಕ್ಕಳು ಧರಿಸಿದ್ದು ಹಿಜಾಬ್ ಅಲ್ಲ ಸ್ಕಾರ್ಪ್ ಎಂದು ಡಿಡಿಪಿಐ ಸಮರ್ಥಣೆ ಮಾಡಿಕೊಂಡಿದ್ದಾರೆ. ಬಳಿಕ ಶಾಲೆಯ ವೇಲ್ ನಲ್ಲಿಯೇ ಹಿಜಾಬ್ ಧರಿಸಲು ಅಧಿಕಾರಿಗಳು ಅವಕಾಶ ಕೊಟ್ಟಿದ್ದಾರೆ.
ಯಾದಗಿರಿ: ರಾಜ್ಯದಲ್ಲಿ ಹಿಜಾಬ್-ಕೇಸರಿ ವಿವಾದ ಹಿನ್ನೆಲೆ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಮುಖ್ಯ ಶಿಕ್ಷಕ ತಡೆದಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕಿಯರ ಉರ್ದು ಪ್ರೌಢ ಶಾಲೆಯಲ್ಲಿ ನಡೆದಿದೆ.
ಹಿಜಾಬ್ ಹಾಕಿಕೊಂಡೇ ತರಗತಿಗೆ ಹೋಗ್ತೇವೆ ಎಂದು ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದರು. ಹಿಜಾಬ್ ಧರಿಸಿದವರನ್ನು ಶಾಲೆ ಒಳಗೆ ಬಿಡದಿದ್ದಾಗ ಪ್ರೊಟೆಸ್ಟ್ ಮಾಡಿದ್ದಾರೆ. ಸುಮಾರು 80 ಕ್ಕೂ ವಿದ್ಯಾರ್ಥಿಗಳಿಂದ ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ ಸಮವಸ್ತ್ರ ಧರಿಸಿ ತರಗತಿಗೆ ಬನ್ನಿ ಎಂದು ಶಿಕ್ಷಕರು ಹೇಳಿದರೂ, ಯಾವುದೇ ಕಾರಣಕ್ಕೂ ಹಿಜಾಬ್ ತಗೆಯುವುದಿಲ್ಲ ಎಂದು ಹೇಳಿದ್ದಾರೆ. ಕೊನೆಗೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ತರಗತಿಗೆ ಹೋಗಿದ್ದಾರೆ. ಸದ್ಯ ಸ್ಥಳಕ್ಕೆ ಪೋಲಿಸರು,ಮುಸ್ಲಿಂ ಮುಖಂಡರು ಭೇಟಿ ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿಜಬ್ ವಿವಾದ ಹಿನ್ನೆಲೆ ಕುರಿತಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಆಂತರಿಕ ಭದ್ರತಾ ದಳ ರಾಜ್ಯದಲ್ಲಿರುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ಮಾಹಿತಿ ಕೇಳಿದೆ. ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿಗಳ ಮಾಹಿತಿ ನೀಡಲು ಕಾಲೇಜು, ವಿದ್ಯಾಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಪರ/ವಿರೋಧ, ಪ್ರಚೋದನಕಾರಿ ಪೋಸ್ಟ್ ಹಾಕದಂತೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ.
ಹುಬ್ಬಳ್ಳಿ: ಹಿಜಾಬ್ ವಿಚಾರವಾಗಿ ಗಲಾಟೆಗಬಾರದಿತ್ತು. ವಸ್ತ್ರ ಸಂಹಿತೆಯಿದೆ ಅದನ್ನ ಎಲ್ಲರೂ ಪಾಲನೆ ಮಾಡಬೇಕು ಎಂದು
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಮಿಲ್ಟ್ರಿಯಲ್ಲು ನಾವ್ ಹಾಕೊಂಡು ಬರಲ್ಲ ಅಂದ್ರೆ ಏನ್ ಮಾಡೋದು. ಪಟ್ಟ ಬದ್ದ ರಾಜಕೀಯ ಶಕ್ತಿಗಳು ಮಕ್ಕಳಿಗೆ ಕುಮ್ಮಕ್ಕು ನೀಡುತ್ತಿವೆ. ಭಾರತದಲ್ಲಿ ಒಂದು ಸಂಸ್ಕ್ರತಿ ಇದೆ.
ಕಾಂಗ್ರೆಸ್ ಈ ವಿಚಾರದಲ್ಲಿ ಅದರ ನಿಲುವು ಸ್ಪಷ್ಟ ಪಡಿಸಲಿ. ನಾವು ಬೇಕಾದ್ರೆ ಹೇಳ್ತೆವೆ, ಕೇಸರಿ ಶಾಲು ಹಾಕದಂತೆ. ಇದರ ಹಿಂದೇ ಕಾಂಗ್ರೆಸ್ ಪಕ್ಷದ ಕೈವಾಡವಿದೆ. ನೀವು ಮುಸ್ಲಿಂ ಮಕ್ಕಳಿಗೆ ಹಿಜಾಬ್ ಧರಿಸಿ ಬನ್ನಿ ಅಂತ ಕರೆ ಕೊಡ್ತಿರಾ ಎಂದು ಕಾಂಗ್ರೆಸ್ ಗೆ ಪ್ರಹ್ಲಾದ್ ಜೋಶಿ ಸವಾಲ್ ಹಾಕಿದ್ದಾರೆ. ನ್ಯಾಯಾಲಯದ ತೀರ್ಪು ಒಪ್ಕೊಬೇಕು. ಸರ್ಕಾರ ಜಾಣ್ಮೆಯಿಂದ ಕರ್ತವ್ಯ ನಿವರ್ಹಸಿದೆ.
ಸಂಯಮದಿಂದ ನಿವರ್ಹಸಿದ್ದೇ ಅಶಕ್ತತೆ ಅನ್ಕೊಬಾರದು ಎಂದು ಹೇಳಿದ್ದಾರೆ.
ಚಿತ್ರದುರ್ಗ: ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆ ಕೋರ್ಟ್ ಮದ್ಯಂತರ ಆದೇಶದ ಬಳಿಕ ಇಂದು ಎರಡನೇ ದಿನ ಪ್ರೌಢ ಶಾಲೆ ಪುನಾರಂಭವಾಗಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಗೆ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಾರೆ. ಹಿಜಾಬ್ ತೆಗೆದು ಶಾಲೆ ಪ್ರವೇಶಿಸಲು ವಿದ್ಯಾರ್ಥಿಗಳು ನಕಾರವೆತ್ತಿದ್ದಾರೆ. ನಿನ್ನೆ ಶಾಲೆಗೆ ಬಾರದೆ 10 ಜನ ವಿದ್ಯಾರ್ಥಿಗಳು ವಾಪಸ್ ತೆರಳಿದ್ದಾರೆ. ಸಮಸವಸ್ತ್ರದಲ್ಲಿ ಶಾಲೆಗೆ ಬರುವಂತೆ ಶಾಲಾ ಸಿಬ್ಬಂದಿ ಸೂಚಿಸಿದ್ದರು, ಇಂದು ಹಿಜಾಬ್ ಧರಿಸಿಯೇ ಶಾಲೆಗೆ ಬರುವುದಾಗಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರಿಂದಲೂ ಮನವೊಲೈಕೆಗೆ ಯತ್ನಿಸಲಾಗುತ್ತಿದ್ದು, ಹಿರಿಯೂರು ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಾಮರಾಜನಗರ: ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇಲ್ಲ. ಆದರೆ ಹಿಜಾಬ್ ಧರಿಸಿ ಶಾಲೆಗೆ ಬರಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನನ್ನು ಗೌರವಿಸುವುದನ್ನು ಕಲಿತು ಕೊಳ್ಳಬೇಕು ಎಂದು ಚಾಮರಾಜನಗರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ನೀಡಿದ್ದಾರೆ. ಹೈಕೋರ್ಟ್ ಸೂಚನೆಯ ನಡುವೆಯು ಹಿಜಾಬ್ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರಿಗೆ ಸಚಿವರು ಎಚ್ಚರಿಕೆ ನೀಡಿದ್ದು, ನ್ಯಾಯಾಲಯದ ಸೂಚನೆಯ ನಂತರವು ಹಿಜಾಬ್ ಧರಿಸಿ ಬರುವುದು ತಪ್ಪಾಗುತ್ತದೆ ಎಂದಿದ್ದಾರೆ. ಯಾವುದೇ ಕಾರಣಕ್ಕು ಹಿಜಾಬ್ ಧರಿಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಬರಲು ಬಿಡಲ್ಲ.
ಕಾನೂನು ಉಲ್ಲಂಘಿಸುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಶಾಲಾ ಕಾಲೇಜುಗಳಿಗೆ ಹೊರಗಿನ ಶಕ್ತಿಗಳು ಪ್ರವೇಶ ಮಾಡಬಾರದು. ಹೊರಗಿನವರು ಬಾರದಂತೆ ನೋಡಿಕೊಳ್ಳುವುದು ಪ್ರಾಂಶುಪಾಲರು, ಅಧ್ಯಾಪಕರ ಜವಾಬ್ದಾರಿಯಾಗಿರುತ್ತದೆ.
ಯಾರೂ ಯಾರನ್ನು ಟೀಕೆ ಮಾಡುವುದಾಗಲಿ, ಆರೋಪ ಮಾಡುವುದು ಬೇಡ, ಗೊಂದಲ ನಿರ್ಮಾಣ ಮಾಡುವುದು ಬೇಡ.
ನಾಳೆಯಿಂದ ಪದವಿ ಕಾಲೇಜುಗಳು ಪುನರಾರಂಭ ಆಗಲಿದೆ ಎಂದು ಹೇಳಿದ್ದಾರೆ.
ಮಂಡ್ಯ: ಹೈಕೋರ್ಟ್ ಮಧ್ಯಂತರ ಆದೇಶವಿದ್ದರೂ, ಕಾಲೇಜಿಗೆ ಶಿಕ್ಷಕಿ ಹಿಜಾಬ್ ಧರಿಸಿ ಬಂದಿದ್ದಾರೆ. ಶ್ರೀರಂಗಪಟ್ಟಣ ಜೂನಿಯರ್ ಕಾಲೇಜು ಶಿಕ್ಷಕಿಯಿಂದ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದೆ. ಕಾಲೇಜಿನ ಸ್ಟಾಫ್ ರೂಂ ನಲ್ಲಿ ಕುಳಿತಿದ್ದ ಉಪನ್ಯಾಸಕಿ, ಸಾರ್ವಜನಿಕರ ಪ್ರಶ್ನೆ ಬಳಿಕ ಶಿಕ್ಷಕಿ ಹಿಜಾಬ್ ತೆಗೆದಿದ್ದಾರೆ.
ತುಮಕೂರು: ಹಿಜಾಬ್ ವಿಚಾರವಾಗಿ ನಗರದ ಎಸ್ವಿಎಸ್ ಶಾಲೆಯ ಮುಂದೆ ಪೋಷಕರಿಂದ ಪ್ರತಿಭಟನೆ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ಮಾಡಿದ್ದು, ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇದೇ ರೀತಿ ಮಾಡಿದ್ರೆ ನಾವು ಕೇಸ್ ಹಾಕ್ತಿವಿ ಅಂತ ಪೋಷಕರನ್ನ ಪೊಲೀಸರು ಚದುರಿಸಿದ್ದು, ಶಾಲೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ರಾಯಚೂರು: ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ನಡೆಯುತ್ತಿದ್ದು, ಕೋರ್ಟ್ ಆದೇಶ ಇದ್ರೂ ತರಗತಿಯಲ್ಲಿ ಹಿಜಾಬ್ ಧರಿಸಿ ಮಕ್ಕಳು ಕುಳಿತುಕೊಂಡಿದ್ದಾರೆ. ರಾಯಚೂರು ನಗರದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ. ಮುಖ್ಯ ಗುರುಗಳು ಸೂಚಿಸಿದ್ರೂ ಹಿಜಾಬ್ ಧರಿಸಿಯೇ ಕುಳಿತುಕೊಂಡಿದ್ದು, ಕ್ಯಾಮರಾ ಕಂಡ ತಕ್ಷಣವೇ ಕ್ಲಾಸ್ನಲ್ಲಿ ಮಕ್ಕಳು ಹಿಜಾಬ್ ತೆಗೆದಿದ್ದಾರೆ. ಮತ್ತೆ ಕ್ಯಾಮರಾ ಮರೆಯಾದ ಬಳಿಕ ಹಿಜಾಬ್ ಧರಿಸಿಕೊಂಡಿದ್ದಾರೆ. ಇದರಿಂದಾಗಿ ಶಿಕ್ಷಕರು ಟೆನ್ಷನ್ಗೆ ಒಳಗಾಗಿದ್ದಾರೆ.
ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಮತ್ತೆ ಹಿಜಾಬ್ ಸಮರ ಶುರುವಾಗಿದೆ. ನಮಗೆ ಎಕ್ಸಾಂ ಬೇಡ, ಹಿಜಬ್ ಬೇಕು. ಎಕ್ಸಾಂ ಬಿಟ್ಟು ವಿದ್ಯಾರ್ಥಿಗಳು ಹೊರಗೆ ನಿಂತಿದ್ದು, ಮಕ್ಕಳ ಜೊತೆ ಪೋಷಕರು ಸಹ ಸ್ಥಳದಲ್ಲೇ ನಿಂತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲಿರೋ ಶಾಲೆಯಲ್ಲಿ ಈ ಪರಿಸ್ಥಿತಿ ಕಂಡುಬಂದಿದೆ. 6 ರಿಂದ 10ನೇ ತರಗತಿವರೆಗಿರುವ ಶಾಲೆಯಲ್ಲಿ ಒಟ್ಟು 167 ಮಕ್ಕಳಲ್ಲಿ 153 ಮುಸ್ಲಿಂ ಸಮುದಾಯದ ಮಕ್ಕಳ್ಳಾಗಿದ್ದಾರೆ. 10ನೇ ತರಗತಿ 25 ಮಕ್ಕಳು ಪೂರ್ವ ಸಿದ್ಧತಾ ಪರೀಕ್ಷೆಯಿಂದ ಹೊರಗುಳಿದಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಗದಗ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆ ಕ್ಲಾಸ್ನಲ್ಲಿ ಕುಳಿತಿದ್ದ ಮಕ್ಕಳನ್ನ ಹೊರ ಕರೆತಂದು ಪಾಲಕರು ಹೈಡ್ರಾಮಾ ಮಾಡಿದ್ದಾರೆ. ನಗರದ ಸರಕಾರಿ ಉರ್ದು ಶಾಲೆ ನಂ.2 ನಲ್ಲಿ ಘಟನೆ ನಡೆದಿದ್ದು, ಸ್ಕೂಲ್ ಗೇಟ್ ಮುಂದೆ ವಿದ್ಯಾರ್ಥಿಗಳು, ಪೋಷಕರಿಂದ ಹೈಡ್ರಾಮಾ ಸೃಷ್ಟಿ ಮಾಡಲಾಗಿದೆ. ಹಿಜಾಬ್ ಧರಿಸಿಕೊಂಡು ಕ್ಲಾಸ್ರೂಂನಲ್ಲಿ ಕುಳಿತಿದ್ದ ಮಕ್ಕಳನ್ನು, ಓರ್ವ ಮಹಿಳೆ ಶಾಲೆಗೆ ಆಗಮಿಸಿ ಕ್ಲಾಸ್ರೂಂನಿಂದ ಹೊರತಂದು ಹೈಡ್ರಾಮಾ ಮಾಡಿದ್ದಾರೆ. ಬಳಿಕ ಶಿಕ್ಷಕರೇ ಮಕ್ಕಳನ್ನು ಹೊರಹಾಕ್ತಾಯಿದ್ದಾರೆ ಅಂತ ಪೋಷಕರ ಆರೋಪಿಸಿದ್ದಾರೆ. ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಿ ಇಲ್ಲದಿದ್ರೆ ಶಾಲೆ ಮುಚ್ಚಿಸಿ ಎಂದು ವಿದ್ಯಾರ್ಥಿಗಳಿ ವಾದ. ಶಾಲೆ ಮುಂದೆ ವಿದ್ಯಾರ್ಥಿನಿಯರಿಂದ ಪ್ರತಿಭಟನೆ ಮಾಡಲಾಗುತ್ತಿದ್ದು, ಪೋಷಕರೇ ಮಕ್ಕಳ ಹೈಡ್ರಾಮಾ ಸೃಷ್ಟಿಗೆ ಕಾರಣವಾದರಾ ಎನ್ನುವ ಮಾತು ಕೇಳಿಬರುತ್ತಿದೆ.
ಬೆಂಗಳೂರು: ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳಿವೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಿಎಂಗೆ ಹೇಳಿದ್ದೇವೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ. ಪ್ರಕರಣ ಕೋರ್ಟ್ನಲ್ಲಿದೆ ತೀರ್ಪು ಬರಲಿ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಅಂತಾ ಸಿಎಂ ಭರವಸೆ ನೀಡಿದ್ದಾರೆ. ನಾವೂ ಹೈಕೋರ್ಟ್ ತೀರ್ಪನ್ನ ಸಂವಿಧಾನಬದ್ಧವಾಗಿ ಪಾಲಿಸುತ್ತೇವೆ ಎಂದು ಹೇಳಿದ್ದಾರೆ.
ಬೀದರ್: ಮೈಲೂರಿನಲ್ಲಿರುವ ಸರಕಾರಿ ಉರ್ದು ಶಾಲೆಯಲ್ಲಿ ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಕ್ಲಾಸ್ ರೂಮ್ನಲ್ಲಿ ಕುಳಿತುಕೊಂಡಿದ್ದಾರೆ. ಹೀಜಾಬ್ ಧರಿಸಿಕೊಂಡು ಹೈಸ್ಕೂಲ್ ಗೆ ಎಂಟ್ರಿ ಕೊಟ್ಟ ವಿದ್ಯಾರ್ಥಿನಿಯರು, ತರಗತಿ ವೇಳೆಯಲ್ಲಿಯೂ ಹಿಜಾಬ್ ಧರಿಸಿಕೊಂಡೆ ಪಾಠ ಕೆಳುತ್ತಿದ್ದಾರೆ. ಹಿಜಾಬ್ ವಿಚಾರದಲ್ಲಿ ಮಕ್ಕಳ ಪಾಲಕರು ಶಿಕ್ಷಕರು ಜೊತೆಗೆ ನಡೆದ ಮೀಟಿಂಗ್ ವಿಫಲವಾಗಿದೆ.
ಚಿಕ್ಕೋಡಿ: ಹೈಕೋರ್ಟ್ ಆದೇಶ ಬರೋವರೆಗೂ ನಾವು ಶಾಲೆ ಹೋಗುವುದಿಲ್ಲವೆಂದು, ಪಟ್ಟಣದ ಸರ್ಕಾರಿ ಕನ್ನಡ ಉರ್ದು ಶಾಲೆ ವಿದ್ಯಾರ್ಥಿಗಳಿಗೆ ಪಟ್ಟು ಹಿಡಿದಿದ್ದಾರೆ. ಇವತ್ತು ಶಾಲೆಗೆ ಎರಡನೇ ದಿನ ಹಿನ್ನಲೆ ಶಾಲೆಗೆ ಹಿಜಾಬ್ ಹಾಕದೇ ಬರಲು ಶಿಕ್ಷಕರು ಹೇಳಿದ್ದರು. ಆದರೆ, ಹಿಜಾಬ್ ಇಲ್ಲದೇ ಶಾಲೆ ಹೋಗದೇ ಇರಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಹಿಜಾಬ್ ಹಾಕದೇ ನಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲ್ಲ ಎಂದು ಪೋಷಕರು ಸಹ ಹೇಳುತ್ತಿದ್ದಾರೆ. ಕೋರ್ಟ್ ಆದೇಶ ಬಂದ ಮೇಲೆ ಹಿರಿಯರೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಪೋಷಕರು ಹೇಳಿದ್ದಾರೆ.
ಕೊಡಗು: ಹಿಜಾಬ್ ಇಲ್ಲದೆ ಶಾಲೆ ಪ್ರವೇಶಿಸಲು ವಿದ್ಯಾರ್ಥಿಗಳು ನಕಾರವೆತ್ತಿದ್ದು, ಇಂದೂ ಕೂಡ 20 ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ಮರಳಿರುವಂತಹ ಘಟನೆ ನಡೆದಿದೆ. ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲರ ಮಾತನ್ನು ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲೆಗೆ ಬರುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಪ್ರಾಂಶುಪಾಲ ಆ್ಯಂಟನಿ ಅಲ್ವೆರಸ್ ಮನವೊಲಿಸಲು ಪ್ರಯತ್ನಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಶಾಲಾ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಮೈಸೂರು: ರಾಜ್ಯದಾದ್ಯಂತ ಹಿಜಾಬ್ ವಿಚಾರವಾಗಿ ಇಂದು ಶಾಲೆಗೆ ಎರಡನೇ ದಿನವಾಗಿದ್ದು, ಮೈಸೂರಿನಲ್ಲಿ ಶಾಂತಿಯುತ ಪರಿಸ್ಥಿತಿ ಮುಂದುವರೆದಿದೆ. ಎಲ್ಲರಿಂದ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿದೆ. ಹಿಜಾಬ್ ತೆಗೆದು ತರಗತಿ ಒಳಗೆ ವಿದ್ಯಾರ್ಥಿಗಳು ಕುಳಿತುಕೊಂಡಿದ್ದಾರೆ. ನೆನ್ನೆ ಶೇ 86ರಷ್ಟು ಹಾಜರಾತಿಯಿದ್ದು, ಇಂದು ಸಹಾ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುವ ನಿರೀಕ್ಷೆ ಇದೇ ಎಂದು ಟಿವಿ9ಗೆ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ಮಾಡಲಿದ್ದು, ಜಿಲ್ಲೆಯ ಮಾಹಿತಿ ಪಡೆದು ಸಲಹೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಯಾದಗಿರಿ: ರಾಜ್ಯದಲ್ಲಿ ಎದ್ದಿರುವ ಹಿಜಾಬ್ ವಿವಾದ ಯಾದಗಿರಿ ಜಿಲ್ಲೆಗೂ ಎಂಟ್ರಿ ಕೊಟ್ಟಿದೆ. ಹಿಜಾಬ್ ಧರಿಸದೆ ಕ್ಲಾಸ್ ಗೆ ಅಟೆಂಡ್ ಆಗುವ ಬಗ್ಗೆ ನಗರದ ಉರ್ದು ಪ್ರೌಢ ಶಾಲೆಯ 10 ನೇ ತರಗತಿಯ ಸಾನಿಯಾ ಮಿರ್ಜಾ ಟಿವಿ 9 ಜೊತೆ ಮಾತನಾಡಿದ್ದಾರೆ. ನಿನ್ನೆ ರಜೆ ಬಳಿಕ ಮೊದಲ ದಿನವಾಗಿತ್ತು ಹೀಗಾಗಿ ಹಿಜಾಬ್ ಧರಿಸಿ ಬಂದಿದ್ವಿ, ಆದರೆ ಇವತ್ತು ಶಿಕ್ಷಕರು ಹೇಳಿದ ಮಾತಿಗೆ ನಾವು ಒಪ್ಪಿ ಹಿಜಾಬ್ ತೆಗೆದಿದ್ದೆವೆ. ನಮ್ಗೆ ಹಿಜಾಬ್ ಮತ್ತು ಶಿಕ್ಷಣ ಎರಡು ಮುಖ್ಯ. ಆದರೆ ಕ್ಲಾಸ್ ರೂಮ್ ನಲ್ಲಿ ನಾವು ಹಿಜಾಬ್ ತೆಗೆದು ಕುಳಿತುಕೊಳ್ಳುತ್ತೆವೆ. ಮನೆಯಿಂದ ಶಾಲೆವರೆಗೆ ಹಿಜಾಬ್ ಧರಿಸಿ ಬರುತ್ತೇವೆ ಆದ್ರೆ, ಇಲ್ಲಿ ಬಂದ ಮೇಲೆ ತೆಗೆಯುತ್ತೆವೆ. ನಮಗೆ ಹಿಜಾವ್ ತೆಗಯಲು ಶಾಲೆಯಲ್ಲಿ ಒಂದು ರೂಮ್ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದಾಳೆ.
ಹಿಜಾಬ್, ಕೇಸರಿ ಶಾಲು ವಿವಾದ ಮುಂದುವರೆದಿದ್ದು, ಶಾಲೆಗಳಿಗೆ ಪೊಲೀಸ್ ಭದ್ರತೆ ಒದಗಿದಲಾಗಿದೆ. ನಗರದ ಆರ್.ಎಲ್.ಎಸ್. ಶಾಲೆಗೆ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಬಂದಿದ್ದು, ಶಾಲಾ ಆವರಣದಲ್ಲಿ ಬರುತ್ತಿದ್ದಂತೆಯೇ ಹಿಜಾಬ್ ಬಿಚ್ಚಿಟ್ಟು
ಶಾಲೆಯೊಳಗೆ ಹೋಗಿದ್ದಾಳೆ. ಜಿಲ್ಲೆಯ ಪ್ರತಿ ಶಾಲೆಗೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಅದೇ ರೀತಿಯಾಗಿ ಬಾಗಲಕೋಟೆ ನಗರದ ಬಾಲಕಿಯರ ಹೈಸ್ಕೂಲ್ನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಪ್ರತ್ಯೇಕ ಕೊಠಡಿಗೆ ತೆರಳಿ ಹಿಜಾಬ್ ತೆರವುಗೊಳಿಸಿ ಕ್ಲಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಸೇರಿ ಒಟ್ಟು 522 ಹೈಸ್ಕೂಲ್ಗಳಿದ್ದು, ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಉಡುಪಿ: ಹಿಜಾಬ್ ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಎರಡನೇ ದಿನ ಸುಗಮವಾಗಿ ಹೈಸ್ಕೂಲ್ ತರಗತಿಗಳು ಶುರುವಾಗಿವೆ. ಉಡುಪಿಯ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿರುವ ಹೈಸ್ಕೂಲ್ಗೆ ಯಾವುದೇ ಆತಂಕವಿಲ್ಲದೆ ವಿದ್ಯಾರ್ಥಿನಿಯರು ತರಗತಿಗೆ ತೆರಳುತ್ತಿದ್ದು, ಹಿಜಾಬ್ ಹಾಗೂ ಬುರ್ಕಾ ತೆಗೆದಿಟ್ಟು ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನೂ ನಾಳೆಯಿಂದ ಪಿಯು ಕಾಲೇಜು ಆರಂಭವಾಗಲಿದ್ದು, ಹಿಜಾಬ್ನೊಂದಿಗೆ ಮತ್ತೆ ಕಾಲೇಜು ಹೊರಗೆ ಧರಣಿ ಕುಳಿತುಕೊಳ್ಳುವ ಸಾಧ್ಯತೆಯಿರುವುದರಿಂದ, ನಾಳೆ ಪೊಲೀಸ್ ಭದ್ರತೆ ಹೆಚ್ಚಾಗಲಿದೆ. ಇನ್ನೂ ಆ ಆರು ವಿದ್ಯಾರ್ಥಿನಿಯರು ನಾಳೆ ಕಾಲೇಜಿಗೆ ಬರುವ ಸಾಧ್ಯತೆ ಇದೆ.
ಕಲಬುರಗಿ: ಹಿಜಾಬ್ ಧರಿಸಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ, 80 ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಇದ್ದರೂ ಗೈರಾಗಿರುವಂತಹ ಘಟನೆ ನಡೆದಿದೆ. ಕಲಬುರಗಿ ನಗರದ ಜಗತ್ ಬಡಾವಣೆಯಲ್ಲಿರುವ ಸರ್ಕಾರಿ ಕನ್ಯಾ ಉರ್ದು ಪ್ರೌಢ ಶಾಲೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶವಿಲ್ಲ ಹಿನ್ನೆಲೆಯಲ್ಲಿ ಶಾಲೆಗೆ ಗೈರಾಗಿದ್ದಾರೆ. ಇಂದು ಶಾಲೆಯ ಪರೀಕ್ಷೆ ಇದ್ರು, ಶಾಲೆಗೆ ಬಾರದ ವಿದ್ಯಾರ್ಥಿನಿಯರು.
ಮಂಡ್ಯ: ಶಾಲೆಗಳಿಗೆ ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿನಿಯರು ಬರುತ್ತಿದ್ದು, ಶಾಲೆ ಆವರಣಕ್ಕೆ ಬರುತ್ತಿದ್ದಂತೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆದೆ ಕ್ಲಾಸ್ಗೆ ಹೋಗುತ್ತಿದ್ದಾರೆ. ಹೈ ಕೋರ್ಟ್ ನೀಡಿರುವ ಆದೇಶವನ್ನ ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ಪಾಲನೆಮಾಡುತ್ತಿದ್ದಾರೆ. ಕಾಲೇಜಿನ ಪ್ರತ್ಯೇಕ ಕೊಠಡಿಗೆ ತೆರಳಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿದ್ದಾರೆ. ಸದ್ಯ ಮಂಡ್ಯದಲ್ಲಿ ಹೈಕೋರ್ಟ್ ಆದೇಶ ಪಾಲನೆ ಮಾಡಲಾಗುತ್ತಿದ್ದು, ಪ್ರತಿ ಶಾಲೆಗಳಿಗೆ ಓರ್ವ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕಲಬುರಗಿ ನಗರದ ಜಗತ್ ಬಡಾವಣೆಯ ಸರ್ಕಾರಿ ಕನ್ಯಾ ಉರ್ದು ಪ್ರೌಢ ಶಾಲೆಗೆ ವಿದ್ಯಾರ್ಥಿನಿಯರು ಹಾಜರಾಗಿಲ್ಲ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಶಾಲೆಗೆ ಗೈರಾಗಿದ್ದಾರೆ.
ಹಿಜಾಬ್ ವಿಚಾರಕ್ಕೆ ಪೋಷಕರು, ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದ ಘಟನೆ ರಾಯಚೂರಿನ ಮೌಲಾನಾ ಆಜಾದ್ ಶಾಲೆಯ ಬಳಿ ನಡೆದಿದೆ. ನಿನ್ನೆ ಆಯ್ತು, ಇಂದು ಇಲ್ಲ, ನಾಳೆಯೂ ಇದೇನಾ? ಹೀಗಾದ್ರೆ ಹೆಂಗೆ ? ಅಂತ ಅಧಿಕಾರಿಗಳ ವಿರುದ್ಧ ಪೋಷಕರು ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಾರೆ. ನಿನ್ನೆ ಪರೀಕ್ಷೆ ಬಹಿಷ್ಕರಿಸಿ ಹೋಗಿದ್ದ ವಿದ್ಯಾರ್ಥಿಗಳು ಇಂದು ಸಹ ಹಿಜಾಬ್ ಧರಿಸಿ ಬಂದಿದ್ದಾರೆ.
ಶಿವಮೊಗ್ಗದ ಸರ್ಕಾರಿ ಶಾಲೆಗೆ 8 ವಿದ್ಯಾರ್ಥಿನಿಯರು ಇನ್ನೂ ಆಗಮಿಸಿಲ್ಲ. ನಿನ್ನೆ ಪರೀಕ್ಷೆ ಬಹಿಷ್ಕರಿಸಿ ಹೋಗಿದ್ದ ವಿದ್ಯಾರ್ಥಿಗಳು ಇಂದು ಶಾಲೆಗೆ ಬಂದಿಲ್ಲ.
ಹುಬ್ಬಳ್ಳಿಯಲ್ಲಿಯೂ ಶಾಲೆಗಳು ಶಾಂತಿಯುತವಾಗಿ ಆರಂಭವಾಗಿದೆ. ಹಿಜಾಬ್ ಗದ್ದಲವಿಲ್ಲದೇ ಆಲೆಗಳು ಆರಂಭವಾಗಿದೆ.
ಮಂಡ್ಯ ಶಾಲೆಗಳಿಗೆ ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿನಿಯರು. ಶಾಲೆ ಆವರಣಕ್ಕೆ ಬರುತ್ತಿದ್ದಂತೆ ಹಿಜಾಬ್ ತೆಗೆದಿದ್ದಾರೆ. ಹೈ ಕೋರ್ಟ್ ಆದೇಶವನ್ನ ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ಪಾಲನೆಮಾಡುತ್ತಿದ್ದಾರೆ. ಕೆಲ ವಿದ್ಯಾರ್ಥಿನಿಯರು ಕಾಲೇಜು ಕೊಠಡಿಗೆ ತೆರಳಿ ಹಿಜಾಬ್ ತೆಗೆದಿದ್ದಾರೆ. ಕೆಲ ವಿದ್ಯಾರ್ಥಿನಿಯರು ಕಾಲೇಜು ಆವರಣಕ್ಕೆ ಬರುತ್ತಿದ್ದಂತೆ ಹಿಜಾಬ್ ತೆಗೆದು ಹೋಗುತ್ತಿದ್ದಾರೆ.
ಕೊಪ್ಪಳದ ಮೌಲಾನಾ ಆಜಾದ್ ಶಾಲೆಗೆ 2ನೇ ದಿನವೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲವೆಂದು ಪಟ್ಟು ಬಿದ್ದಿದ್ದಾರೆ. ನಿನ್ನೆಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದರು. ನಿನ್ನೆ ಹಿಜಾಬ್ ತೆಗೆಸಿ ಶಿಕ್ಷಕರು ಶಾಲೆಯೊಳಗೆ ಕಳುಹಿಸಿದ್ದರು.
ಯಾದಗಿರಿ: ನಿನ್ನೆ ಉರ್ದು ಪ್ರೌಢ ಶಾಲೆಗೆ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಬಂದಿದ್ದರು. ಇವತ್ತು ಕೂಡ ಹಿಜಾಬ್ ಧರಿಸಿಯೇ ಶಾಲೆಗೆ ಕಳುಹಿಸುತ್ತೆವೆ ಎಂದ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಮಕ್ಕಳಿಗೆ ಏಕಾಏಕಿ ಹಿಜಾಬ್ ತೆಗೆಯರಿ ಅಂತ ಹೇಳಿದ್ದಕ್ಕೆ ಹೆದರಿದ್ದಾರೆ. ನಮ್ಮ ಅಜ್ಜನ ಕಾಲದಿಂದ್ಲೂ ಹಿಜಾಬ್ ಧರಿಸುತ್ತಿದ್ದೇವೆ. ಹಿಜಾಬ್ ತೆಗೆಯಿರಿ ಅಂದ್ರೆ ಆಗಲ್ಲ ಹಿಜಾಬ್ ಧರಿಸಿಯೇ ನಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸುತ್ತೇವೆ ಎಂದು ಉರ್ದು ಪ್ರೌಢ ಶಾಲೆಯ 10ನೇ ತರಗತಿಯ ಆಯೇಷಾ ಎಂಬ ವಿದ್ಯಾರ್ಥಿನಿಯ ಪೋಷಕರ ಆಕ್ರೋಶ ಹೊರ ಹಾಕಿದ್ದಾರೆ. ಉರ್ದು ಶಾಲೆ ಅದು ಮೊದಲಿಂದ್ಲೂ ಹಿಜಾಬ್ ಧರಿಸಿಯೇ ಶಾಲೆ ಹೋಗ್ತಾಯಿದ್ದಾರೆ. ನಾವು ಕೋರ್ಟ್ ನ ಆದೇಶ ಬರೋ ವರೆಗೆ ಶಾಲೆಗೆ ಕಳಿಸದೆ ಇರೋಕೆ ಸಿದ್ದರಿದ್ದೆವೆ. ಆದ್ರೆ ಹಿಜಾಬ್ ಧರಿಸದೆ ಕಳ್ಸಲ್ಲಾ ಎಂದರು.
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆ ಕೋರ್ಟ್ ಮದ್ಯಂತರ ಆದೇಶ ಬಳಿಕ ಪ್ರೌಢ ಶಾಲೆ ಪುನಾರಂಭಗೊಂಡಿದೆ. ಎರಡನೇ ದಿನ ಪ್ರೌಢ ಶಾಲೆಗಳು ಆರಂಭ ಹಿನ್ನೆಲೆ ಚಿತ್ರದುರ್ಗದಲ್ಲಿ ಸರ್ಕಾರಿ ಪ್ರೌಢಶಾಲೆಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಹಿಜಾಬ್ ತೆಗೆದು ಬರುವಂತೆ ಶಾಲಾ ಸಿಬ್ಬಂದಿ ಸೂಚನೆ ನೀಡಿದ್ದು ಕೆಲ ವಿದ್ಯಾರ್ಥಿಗಳು ಶಾಲಾವರಣದಲ್ಲೇ ಹಿಜಾಬ್ ತೆಗೆದು ತರಗತಿಗೆ ತೆರಳಿದ್ದಾರೆ.
ಶಾಲೆಯಲ್ಲಿ ಹಿಜಾಬ್ ಕಿರಿಕ್ ಹಿನ್ನೆಲೆ ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢ ಶಾಲೆಗೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಶಿಕ್ಷಕರಿಂದ ಮಾಹಿತಿ ಪಡೆದು ಬಳಿಕ ವಾಪಾಸ್ ಆಗಿದ್ದಾರೆ.
ಶಿವಮೊಗ್ಗ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಗೆ ಬಂದ ಮುಸ್ಲಿಂ ಶಿಕ್ಷಕಿ ಶಾಲೆ ಒಳಗೆ ಹೋಗುವ ಮೊದಲು ಹಿಜಾಬ್ ಮತ್ತು ಬುರ್ಕಾ ತೆಗೆದಿಟ್ಟಿದ್ದಾರೆ. ವಿದ್ಯಾರ್ಥಿಗಳ ಘಟನೆಯಿಂದಾಗಿ ಶಾಲಾ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.
ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರು ಇಂದು ಕೂಡ ಶಾಲೆಗೆ ಹಿಜಾಬ್ ಧರಿಸಿ ಬರುತ್ತಿದ್ದು ಹಿಜಾಬ್ ಧರಿಸಿ ಬರುವವರಿಗೆ ಸಿಬ್ಬಂದಿ ಪ್ರತ್ಯೇಕ ರೂಮ್ ಕರೆದುಕೊಂಡು ಹೋಗುತ್ತಿದ್ದಾರೆ. ಪ್ರತ್ಯೇಕ ರೂಮ್ ನಲ್ಲಿ ಹಿಜಾಬ್ ತೆಗೆಸಿ ತರಗತಿಗೆ ಕಳುಹಿಸುತ್ತಿದ್ದಾರೆ. ಆದ್ರೆ ಹಿಜಾಬ್ ಯಾಕೆ ತೆಗೆಸುತ್ತಿದ್ದೀರಿ ಅಂತಾ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಮದಾರ್ ಕಿರಿಕ್ ಮಾಡಿದ್ದಾರೆ.
ಮೊದಲಿನಿಂದಲೂ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲೆಗೆ ಬರುತ್ತಿದ್ದರು. ಆ ವೇಳೆ ಹೀಗೆ ಸಿಬ್ಬಂದಿ ವಿದ್ಯಾರ್ಥಿನಿಯರನ್ನ ಕರೆದುಕೊಂಡು ಹೋಗುತ್ತಿದ್ದರಾ? ಉಳಿದ ವಿದ್ಯಾರ್ಥಿಗಳನ್ನ ಹಾಗೇ ಕರೆದುಕೊಂಡು ಹೋಗಿ ನೋಡೋಣ. ಈ ರೀತಿ ಮಾಡುವುದು ಸರಿಯಲ್ಲ ಅಂತಾ ಸೀಮಾ ಕಿರಿಕ್ ಮಾಡಿದ್ದಾರೆ. ಪೊಲೀಸರೊಂದಿಗೂ ಕೂಡ ವಾಗ್ವಾದ ನಡೆಸಿದ್ದಾರೆ. ತಕ್ಷಣ ಸೀಮಾ ಮತ್ತು ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯನ್ನ ಪೊಲೀಸರು ಹೊರಗೆ ಕಳುಹಿಸಿದ ಘಟನೆ ನಡೆದಿದೆ.
ನನ್ನ ಹಿಜಾಬ್ ಅನ್ನು ಕಿತ್ತುಕೊಂಡರೆ, ನಾನು ಹಿಜಾಬ್ ಪರವಾಗಿ ಇದ್ದೇನೆ ಅಂತ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಲ್ಕರ್ ಟ್ವೀಟ್ ಮಾಡಿದ್ದಾರೆ.
You snatch my #Hijab;
I stand for it,
You impose #Hijab on me;
I am against it…
?
Daughter of Indiaನನ್ನ ಹಿಜಾಬ್ ಅನ್ನು ಕಿತ್ತುಕೊಂಡರೆ;
ನಾನು ಹಿಜಾಬ್ ಪರವಾಗಿ ಇದ್ದೇನೆ,
ನನ್ನ ಮೇಲೆ ಬಲವಾಂತವಾಗಿ ಹಿಜಾಬ್ ಹೇರಿದರೆ;
ನಾನು ಹಿಜಾಬ್ ವಿರುದ್ಧ…
?
ಭಾರತದ ಮಗಳು@priyankagandhi #KarnatakaHighCourt pic.twitter.com/qHX2wd2jtk— Dr. Anjali Nimbalkar (@DrAnjaliTai) February 15, 2022
ಕಲಬುರಗಿಯಲ್ಲಿ ಶಾಲೆಗಳು ಎರಡನೇ ದಿನ ಶಾಂತಿಯುತವಾಗಿ ಪ್ರಾರಂಭವಾಗಿವೆ. ಕಲಬುರಗಿ ನಗರದ ಬಹುತೇಕ ಕಡೆ ಶಾಲೆಗಳು ಆರಂಭವಾಗಿದೆ. ನಿನ್ನೆ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು. ಆದರೆ ಇಂದು ಹಿಜಾಬ್ ಇಲ್ಲದೆ ಶಾಲೆಗೆ ಬರುತ್ತಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದವಿಲ್ಲ. ರಾಜ್ಯದಲ್ಲಿರುವುದು ಹಿಜಾಬ್ ವರ್ಸಸ್ ಸಮವಸ್ತ್ರ ವಿವಾದ ಅಂತ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಹಿಜಾಬ್ ವಿವಾದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗೇಟ್ನಲ್ಲಿ ತಪಾಸಣೆ ಮಾಡಿ ಪೊಲೀಸರು ವಿದ್ಯಾರ್ಥಿಗಳನ್ನು ಒಳಗೆ ಬಿಡುತ್ತಿದ್ದಾರೆ. ಕಾಲೇಜ್ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕೋರ್ಟ್ ಮಧ್ಯಂತರ ಆದೇಶದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ನಿನ್ನೆ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದಾರೆ. ಹಿಂದೆ ಕಾಲೇಜಿನಲ್ಲಿ ಗಲಾಟೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಈಗ ಆ ರೀತಿ ಆಗಲು ಪೊಲೀಸರು ಬಿಡುವುದಿಲ್ಲ. ಹೀಗಾಗಿ ನಾಳೆ ಕಾಲೇಜು ಆರಂಭಕ್ಕೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಮಕ್ಕಳು ಹಿಜಾಬ್ ವಿಚಾರದಲ್ಲಿ ಹಠ ಹಿಡಿದಿರುವುದರ ಹಿಂದೆ ಕಾಣದ ಕೈಗಳು ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮಕ್ಕಳು ಯಾವುದೇ ಆತಂಕವಿಲ್ಲದೆ ಶಾಲಾ-ಕಾಲೇಜುಗಳಿಗೆ ಬರಬಹುದು. ಪೊಲೀಸ್ ಇಲಾಖೆ ನಿಮ್ಮ ಜೊತೆ ಇದೆ. ಸೂಕ್ಷ್ಮ ಪ್ರದೇಶ ಇರುವ ಕಾಲೇಜುಗಳ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ. ಕಾಲೇಜು ಸುತ್ತಮುತ್ತ ಪೋಷಕರು ಸಾರ್ವಜನಿಕರು ಬರುವಂತಿಲ್ಲ. ಕಮ್ಯುನಲ್ ಪೋಸ್ಟ್ಗಳು ದೇಶದಲ್ಲಿ ಯಾವ ರೀತಿ ಜನ್ಮತಾಳಿವೆ ಎಂದು ಶಾಲೆ ಮಕ್ಕಳ ಮೂಲಕ ಪ್ರಕಟಿತವಾಗಿದೆ. 47 ರಲ್ಲಿ ದೇಶವನ್ನು ಹೊಡೆದೆವು ಈಗ ಊರನ್ನು ಹೊಡೆಯುತ್ತೇವೆ ಎಂದು ದುಷ್ಟಶಕ್ತಿಗಳು ಮುಂದಾಗಿವೆ. ರಾಜ್ಯದ್ಯಂತ ಕಾನೂನು ಸುವ್ಯಸ್ಥೆ ಯಾವುದೇ ತೊಂದರೆ ಇಲ್ಲ.ಯಾವುದೇ ಭಯ ಇಲ್ಲದೆ, ನಿರ್ಭಯದಿಂದ ಶಾಲಾ-ಕಾಲೇಜುಗಳಿಗೆ ಬನ್ನಿ ಅಂತ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಡಿಕೇರಿ ನೆಲ್ಯ ಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಕ್ ಶಾಲೆಯ ವಿದ್ಯಾರ್ಥಿನಿಯರು ಇಂದು ಕೂಡ ಶಾಲೆಗೆ ಹಿಜಾಬ್ ಧರಿಸಿ ಬಂದಿದ್ದಾರೆ. ವಿದ್ಯಾರ್ಥಿನಿಯರ ಮನವೊಲಿಕೆ ಮಾಡಲು ಶಿಕ್ಷಕರು ಪ್ರಯತ್ನ ಮಾಡುತ್ತಿದ್ದಾರೆ. ಎಂಟು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ. ಶಿಕ್ಷಕರು ಹೈಕೋರ್ಟ್ ಆದೇಶವನ್ನು ಮನವರಿಕಕರ ಮಾಡುತ್ತಿದ್ದಾರೆ. ಸದ್ಯ ಶಾಲೆ ಆವರಣದಲ್ಲೇ ವಿದ್ಯಾರ್ಥಿನಿಯರು ನಿಂತಿದ್ದಾರೆ.
ಯಾದಗಿರಿಯಲ್ಲಿ ಇವತ್ತು ಕೂಡ ಹಿಜಾಬ್ ಧರಿಸಿಯೇ ಶಾಲೆಗೆ ಕಳುಹಿಸುತ್ತೇವೆ ಅಂತ ಪೋಷಕರು ಹೇಳಿದ್ದಾರೆ. ಮಕ್ಕಳಿಗೆ ಏಕಾಏಕಿ ಹಿಜಾಬ್ ತೆಗೆಯರಿ ಅಂತ ಹೇಳಿದ್ದಕ್ಕೆ ಹೆದರಿದ್ದಾರೆ. ನಮ್ಮ ಅಜ್ಜನ ಕಾಲದಿಂದಲೂ ಹಿಜಾಬ್ ಧರಿಸುತ್ತಿದ್ದೇವೆ. ಹಿಜಾಬ್ ತೆಗೆರಿ ಅಂದ್ರೆ ಆಗಲ್ಲ, ಹಿಜಾಬ್ ಧರಿಸಿಯೇ ನಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.
ಮೈಸೂರಿನ ಶಾಲೆಗಳಲ್ಲಿ ಎರಡನೇ ದಿನ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಶಾಲೆಯವರೆಗೆ ಎಂದಿನಂತೆ ಹಿಜಾಬ್, ಬುರ್ಖಾ ಧರಿಸಿ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ತರಗತಿಗೆ ತೆರಳುವ ವೇಳೆ ಹಿಜಾಬ್ ಬುರ್ಖಾ ತೆಗೆದು ಪ್ರವೇಶ ಮಾಡುತ್ತಿದ್ದಾರೆ.
ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅನುಮತಿ ನೀಡಲ್ಲ ಅಂತ ಟಿವಿ9ಗೆ ಶಿವಮೊಗ್ಗ ಡಿಡಿಪಿಐ ರಮೇಶ್ ಮಾಹಿತಿ ನೀಡಿದ್ದಾರೆ. ಹಿಜಾಬ್ ಧರಿಸಿ ಬಂದರೆ ಶಾಲೆಯೊಳಗೆ ಬಿಡೋದಿಲ್ಲ. ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ ಅಂತ ಡಿಡಿಪಿಐ ರಮೇಶ್ ಹೇಳಿಕೆ ನೀಡಿದ್ದಾರೆ.
ಮಧ್ಯಾಹ್ನ 2.30ಕ್ಕೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತದೆ. ಇಂದು ದೇವದತ್ ಕಾಮತ್ ವಾದಮಂಡನೆ ಪೂರ್ಣಗೊಳಿಸುತ್ತಾರೆ. ಹಿಜಾಬ್ ಪರ ಕೇರಳದ ಕೆಲ ವಕೀಲರು ಇಂದು ವಾದಿಸುವ ಸಾಧ್ಯತೆಯಿದೆ. ಅರ್ಜಿದಾರರ ಪರ ರವಿವರ್ಮಕುಮಾರ್ ವಾದಮಂಡನೆ ಸಾಧ್ಯತೆಯಿದೆ.
‘ಹಿಜಾಬ್ ಇಲ್ಲದೆ ನಾವು ಶಾಲೆಗೆ ಹೋಗುವುದಿಲ್ಲ’ ‘ಹಿಜಾಬ್ ತೆಗೆಯಿರಿ ಎಂದರೆ ಮನೆಯಲ್ಲೇ ಇರ್ತೇವೆ’ ಅಂತ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.
ಯಾದಗಿರಿ ನಗರದ ಉರ್ದು ಪ್ರೌಢ ಶಾಲೆಗೆ ನಿನ್ನೆ ವಿದ್ಯಾರ್ಥಿಗಳು ಹಿಜಾಬ್ ಹಾಗೂ ಟೋಪಿ ಧರಿಸಿ ಬಂದಿದ್ದರು. ಕ್ಲಾಸ್ ರೂಮ್ನಲ್ಲಿ ಹಿಜಾಬ್ ಹಾಗೂ ಟೋಪಿ ಧರಿಸಿ ಪಾಠ ಕೇಳಿದ್ದರು. ಅಧಿಕಾರಿಗಳು ಹೇಳಿದ ಬಳಿಕ ಹಿಜಾಬ್ ಹಾಗೂ ಟೋಪಿ ತೆಗೆದಿದ್ದರು.
ತುಮಕೂರಿನಲ್ಲಿ ಇಂದು ವಿದ್ಯಾರ್ಥಿನಿಯರು ಶಾಲೆಗೆ ಹಾಜರ್ ಆಗುವುದು ಅನುಮಾನ ಇದೆ. ನಿನ್ನೆ ಮೂವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಈ ವೇಳೆ ಹಿಜಾಬ್ ಬುರ್ಖಾ ತ್ಯಜಿಸಿ ಶಾಲೆಗೆ ಒಳಗೆ ಬನ್ನಿ ಅಂತ ಶಾಲಾ ಆಡಳಿತ ಮಂಡಳಿ ಹೇಳಿತ್ತು. ತುಮಕೂರಿನ ಬನಶಂಕರಿ ವೃತ್ತದಲ್ಲಿ ಇರುವ ಎಸ್ವಿಎಸ್ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿತ್ತು. ಆದರೆ ಹಿಜಾಬ್, ಬುರ್ಖಾ ಧರಿಸಿಯೇ ಬರ್ತಿವಿ ಅಂತ ವಿದ್ಯಾರ್ಥಿನಿಯರು ಹೇಳಿದ್ದರು. ಇದಕ್ಕೆ ಶಾಲಾ ಆಡಳಿತ ಮಂಡಳಿ ಒಪ್ಪಲಿಲ್ಲ. ಹೀಗಾಗಿ ಶಾಲೆಯಿಂದ ವಿದ್ಯಾರ್ಥಿನಿಯರು ವಾಪಸ್ ಹೋಗಿದ್ದರು.
ಚಿಕ್ಕೋಡಿಯಲ್ಲಿ ನಿನ್ನೆ ಬೆಳಿಗ್ಗೆ ಸರ್ಕಾರಿ ಕನ್ನಡ ಹಾಗೂ ಉರ್ದು ಶಾಲೆಗೆ ಬರುವಾಗ ವಿದ್ಯಾರ್ಥಿಗಳು ಹಿಜಾಬ್ ಹಾಕಿ ಬಂದಿದ್ದರು. ಶಾಲೆಗೆ ಭೇಟಿ ನೀಡಿದ್ದ ಡಿಡಿಪಿಐ ಮೋಹನ್ ಕುಮಾರ್, ಶಾಲೆಗೆ ಬರುವಾಗ ವಿದ್ಯಾರ್ಥಿಗಳು ಹಿಜಾಬ್ ಧರಿಸುತ್ತಾರೆ. ನಂತರ ರೆಸ್ಟ್ ರೂಮ್ನಲ್ಲಿ ಹಿಜಾಬ್ ತಗೆದು ಕ್ಲಾಸ್ ರೂಮ್ನಲ್ಲಿ ಕುಳಿತುಕೊಳ್ಳುತ್ತಾರೆ. ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ನಿಯಮ ಪಾಲನೆ ಮಾಡುವುದಾಗಿ ಹೇಳಿದ್ದರು.
ವಿದ್ಯಾಸಾಗರ ಶಾಲಾ ಆಡಳಿತ ಮಂಡಳಿ ಏಕಾಏಕಿ ಪೋಷಕರ ವಿರೋದ್ಧ ಯುಟರ್ನ್ ಹೊಡೆದಿದೆ. ಶಾಲೆಯ ಗಲಾಟೆಯ ಹಿಂದೇ ಷಡ್ಯಂತ್ರ ಇದೆ. ಹೊರಗಡೆಯಿಂದ ಬಂದವರು ಗಲಾಟೆ ಮಾಡಿದ್ದಾರೆ. ನಮ್ಮ ಶಾಲಾ ಶಿಕ್ಷಕಿಯ ತಪ್ಪಿಲ್ಲ ಎಂದಿದ್ದ ಆಡಳಿತ ಮಂಡಳಿ ಹೇಳುತ್ತಿದೆ.
ಹಿಜಾಬ್ ತೆಗೆಯಲು ನಿರಾಕರಿಸಿದ್ದ ಶಿಕ್ಷಕಿಗೆ ನೋಟಿಸ್ ನೀಡಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಭಕ್ತರಹಳ್ಳಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಗೆ ನೋಟಿಸ್ ನೀಡಲಾಗಿದೆ.
ರಾಜ್ಯದಲ್ಲಿ ನಾಳೆಯಿಂದ ಪಿಯು, ಪದವಿ ಕಾಲೇಜು ಪುನಾರಂಭವಾಗುತ್ತಿದೆ. ಸಮವಸ್ತ್ರ ವಿವಾದ ಹಿನ್ನೆಲೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ನಾಳೆಯಿಂದ ಪಿಯುಸಿ, ಪದವಿ ಕಾಲೇಜು ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ನಿನ್ನೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಹೈಕೋರ್ಟ್ ಸೂಚನೆಯಂತೆ ನಾಳೆಯಿಂದಲೇ ಕಾಲೇಜು ಶುರುವಾಗಲಿದೆ. ವಿದ್ಯಾರ್ಥಿಗಳು ಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕ್ಲಾಸ್ಗೆ ಹಾಜರಾಗಲು ಸೂಚನೆ ನೀಡಲಾಗಿದೆ.
Published On - 8:42 am, Tue, 15 February 22