3 ಸಾವಿರ Home Guards ಗೆ ಸಿಹಿ ಸುದ್ದಿ! ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

| Updated By: ಸಾಧು ಶ್ರೀನಾಥ್​

Updated on: Mar 08, 2022 | 6:13 PM

Karnataka Home Guards: ಗೃಹ ರಕ್ಷಕ ಸ್ವಯಂಸೇವಕರ ಕರ್ತವ್ಯ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಸುಮಾರು 3025 ಗೃಹ ರಕ್ಷಕ ಸ್ವಯಂಸೇವಕರ ಭತ್ಯೆಯನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

3 ಸಾವಿರ Home Guards ಗೆ ಸಿಹಿ ಸುದ್ದಿ! ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ
Home Guards ಗೆ ಸಿಹಿ ಸುದ್ದಿ! ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ
Follow us on

ಬೆಂಗಳೂರು: ಗೃಹ ರಕ್ಷಕ ಸ್ವಯಂಸೇವಕರ ಕರ್ತವ್ಯ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಸುಮಾರು 3025 ಗೃಹ ರಕ್ಷಕ ಸ್ವಯಂಸೇವಕರ ಭತ್ಯೆಯನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಹೊಸ ಆದೇಶದಲ್ಲಿ ದಿನ ಭತ್ಯೆ 600 ರೂ. ಗೆ (Home Guards daily allowance ) ಹೆಚ್ಚಳ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 455 ರೂ.‌ ರಿಂದ 600 ರೂ. ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ 380 ರೂ. ರಿಂದ ರೂ 600 ರೂ. ಗೆ ಹೆಚ್ಚಳ ಮಾಡಲಾಗಿದೆ (Karnataka Assembly).

ಮಹಿಳಾ ದಿನಾಚರಣೆ ದಿನ ಸಚಿವ ಈಶ್ವರಪ್ಪ ಎದುರು ವಿಶೇಷ ಬೇಡಿಕೆಯಿಟ್ಟ ಬಿಜೆಪಿ ಶಾಸಕಿ ಬಿಜೆಪಿ ಭಾರತಿ ಶೆಟ್ಟಿ
ಇದೇ ವೇಳೆ ಮೇಲ್ಮನೆ ಕಲಾಪದ ವೇಳೆ ಬಿಜೆಪಿ ಹಿರಿಯ ಸದಸ್ಯೆ ಭಾರತಿ ಶೆಟ್ಟಿ ಅವರು ಪಂಚಾಯತ್​ ರಾಜ್​ ಸಚಿವ ಕೆ ಎಸ್​ ಈಶ್ವರಪ್ಪ ಎದುರು ವಿಶೇಷ ಬೇಡಿಕೆಯೊಂದನ್ನು ಇಟ್ಟರು – ಇವತ್ತು ಮಹಿಳಾ ದಿನಾಚರಣೆ. ಇಂದು ಸಚಿವ ಈಶ್ವರಪ್ಪ ಗಿಫ್ಟ್ ಕೊಡಬೇಕು. 91 ಸಾವಿರ ಗ್ರಾಮ ಪಂಚಾಯತಿ ಸದಸ್ಯರ ಪೈಕಿ 45 ಸಾವಿರ ಮಹಿಳಾ ಸದಸ್ಯರು ಇದ್ದಾರೆ. ಇವತ್ತು ಮಹಿಳಾ ದಿನಾಚರಣೆ ಹೀಗಾಗಿ ಈ ದಿನ ಮಹಿಳೆಯರಿಗೆ ಗಿಫ್ಟ್ ಕೊಡಬೇಕು. ಕನಿಷ್ಠ 5 ರಿಂದ 10 ಸಾವಿರ ಗೌರವ ಧನ ಹೆಚ್ಚಳ ಮಾಡಿ. ತಾಯಿಂದಿರು, ಮಹಿಳೆಯರಿಗೆ ಕೊಟ್ರೆ ಎಲ್ಲರಿಗೂ ಕೊಟ್ಟಂತೆ. ಸಚಿವರು ಇವತ್ತು ಗೌರವ ಧನ ಹೆಚ್ಚಳ ಮಾಡಿ ಇತಿಹಾಸ ಸೃಷ್ಟಿ ಮಾಡಬೇಕು ಎಂದು ಸಚಿವರಿಗೆ ಸದಸ್ಯೆ ಭಾರತಿ ಶೆಟ್ಟಿ ಒತ್ತಾಯ ಮಾಡಿದರು.

ಪರಿಷತ್​​ನಲ್ಲಿ ಸಚಿವ ಈಶ್ವರಪ್ಪ ಭರವಸೆ:
ಬಿಜೆಪಿ ಹಿರಿಯ ಸದಸ್ಯೆ ಭಾರತಿ ಶೆಟ್ಟಿ ಆಗ್ರಹಕ್ಕೆ ಉತ್ತರವೆಂಬಂತೆ ವಿಧಾನ ಪರಿಷತ್​​ನಲ್ಲಿ ಮಾತನಾಡಿದ ಸಚಿವ ಕೆ.ಎಸ್​. ಈಶ್ವರಪ್ಪ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ವಿಚಾರವಾಗಿ ಗೌರವ ಧನ, ಬಸ್​ ಪಾಸ್, ಆರೋಗ್ಯ ವಿಮೆಗೆ ಅವಕಾಶವಿದೆ. ಆರೋಗ್ಯ ವಿಮೆ ಕೊಡಲು ನಮ್ಮ ಇಲಾಖೆಯಲ್ಲಿ ಅವಕಾಶವಿದೆ. ಇದರ ಬಗ್ಗೆ ಇಂದು ಅಧಿಕಾರಿಗಳ ಜೊತೆಗೆ ಸಭೆ ಮಾಡುತ್ತೇನೆ. ಮಾ. 14ರಂದು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಸಭೆ ಮಾಡ್ತೇನೆ. ಸಭೆಯಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ನಮಗೆ ತಿಳಿಸಿ. ಬಳಿಕ ಸಿಎಂ ಭೇಟಿಯಾಗಿ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳುವೆ ಎಂದರು. 25 ಸದಸ್ಯರನ್ನು ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಕಳುಹಿಸುತ್ತೇವೆ. ಅಲ್ಲಿಯ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿ ಬಳಿಕ ಅನುಷ್ಠಾನಗೊಳಿಸುತ್ತೇವೆ ಎಂದು ವಿಧಾನ ಪರಿಷತ್​​ನಲ್ಲಿ ಸಚಿವ ಕೆ.ಎಸ್​.ಈಶ್ವರಪ್ಪ ಭರವಸೆ ನೀಡಿದರು.

ಇದನ್ನೂ ಓದಿ:
Women’s Day Special: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಪ್ರದಾಯಿಕ ಉಡುಪು ತೊಟ್ಟು ಬೈಕ್ ಕಿಕ್ ಸ್ಟಾರ್ಟ್ ಮಾಡಿದ ಮಹಿಳಾಮಣಿಗಳು

ಇದನ್ನೂ ಓದಿ:
ಜಿಯೋ ಫೈಬರ್ ಕೇಬಲ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಇಂಜಿನಿಯರ್ ಸಾವು; ಪರಿಹಾರಕ್ಕೆ ಆಗ್ರಹ

 

Published On - 5:25 pm, Tue, 8 March 22