Karnataka Lockdown: ಕರ್ನಾಟಕ ಲಾಕ್​ಡೌನ್​ ಅವಧಿಯಲ್ಲಿ ಯಾವೆಲ್ಲಾ ಸೇವೆ ಲಭ್ಯವಿರಲಿದೆ, ಯಾವುದು ಇಲ್ಲ? ಇಲ್ಲಿದೆ ಮಾಹಿತಿ

| Updated By: guruganesh bhat

Updated on: May 07, 2021 | 7:55 PM

Karnataka Lockdown Guidelines: ಪರ ಊರಿನಲ್ಲಿ ಸಿಲುಕಿಕೊಂಡಿರುವ ಜನರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಬಹುದಾ? ಅಗತ್ಯ ಸೇವೆಗಳಿಗೆ ಯಾವ ಸಮಯವನ್ನು ನಿಗದಿಪಡಿಸಲಾಗಿದೆ? ತುರ್ತು ಸಂದರ್ಭದ ಬಗ್ಗೆ ಸರ್ಕಾರ ಹೇಳಿದ್ದೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Karnataka Lockdown: ಕರ್ನಾಟಕ ಲಾಕ್​ಡೌನ್​ ಅವಧಿಯಲ್ಲಿ ಯಾವೆಲ್ಲಾ ಸೇವೆ ಲಭ್ಯವಿರಲಿದೆ, ಯಾವುದು ಇಲ್ಲ? ಇಲ್ಲಿದೆ ಮಾಹಿತಿ
ಕರ್ನಾಟಕ ಲಾಕ್​ಡೌನ್​
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ. ಮೇ.10 ರಿಂದ ಮೇ.24ರ ತನಕ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವ ಸೌಲಭ್ಯಗಳೂ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಈ ನಡುವೆ ಪರ ಊರಿನಲ್ಲಿ ಸಿಲುಕಿಕೊಂಡಿರುವ ಜನರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಬಹುದಾ? ಅಗತ್ಯ ಸೇವೆಗಳಿಗೆ ಯಾವ ಸಮಯವನ್ನು ನಿಗದಿಪಡಿಸಲಾಗಿದೆ? ತುರ್ತು ಸಂದರ್ಭದ ಬಗ್ಗೆ ಸರ್ಕಾರ ಹೇಳಿದ್ದೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಈ ಅವಧಿಯಲ್ಲಿ ಹೋಟೆಲ್, ಪಬ್, ಬಾರ್‌, ಕೈಗಾರಿಕೆ ಎಲ್ಲವೂ ಸ್ಥಗಿತಗೊಳ್ಳಲಿದೆ. ಟ್ಯಾಕ್ಸಿ, ಆಟೋ, ಕ್ಯಾಬ್​ಗಳಿಗೆ ತುರ್ತು ಸೇವೆಗೆ ಅವಕಾಶವಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆಗೆ ಅವಕಾಶವಿದೆ. ಬೆಳಗ್ಗೆ 10 ಗಂಟೆಯ ನಂತರ ಒಬ್ಬನೇ ಒಬ್ಬ ವ್ಯಕ್ತಿಯೂ ರಸ್ತೆಗೆ ಇಳಿಯುವಂತಿಲ್ಲ. ಆದರೆ ಆರೋಗ್ಯ ಮತ್ತು ಅನಿವಾರ್ಯ ಕೆಲಸಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಹಾಲಿನ ಬೂತ್‌ ಸಂಜೆವರೆಗೂ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿ ಭಾಗಶಃ ಕೆಲಸ ನಿರ್ವಹಿಸುತ್ತವೆ. ಕಟ್ಟಡ ಕಾಮಗಾರಿಗೆ ಯಾವುದೇ ಅಡ್ಡಿ ಇಲ್ಲ ಅಗತ್ಯ ವಸ್ತು ಸಾಗಿಸುವ ವಾಹನಗಳಿಗೆ ಅಡ್ಡಿ ಇಲ್ಲ. ಕೂಲಿ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗಬಾರದು. ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿಗಳು ನಡೆಯಬಹುದು. ತಳ್ಳುವ ಗಾಡಿ, ತರಕಾರಿ ಮಾರಲು ಅವಕಾಶ ನೀಡಲಾಗಿದೆ. ಜಿಲ್ಲೆಯಿಂದ ಜಿಲ್ಲೆಗೆ ಓಡಾಟಕ್ಕೆ ಅವಕಾಶ ಇಲ್ಲ. ಬ್ಯಾಂಕ್, ಇ-ಕಾಮರ್ಸ್​ ಸೇವೆಗಳಿಗೆ ನಿರ್ಬಂಧ ಇರಲ್ಲ.

ಮಂದಿರ, ಮಸೀದಿ, ಚರ್ಚ್ ಬಂದ್
ಮೆಟ್ರೋ ರೈಲಿಗೆ ಅವಕಾಶ ಇಲ್ಲ. ಆದರೆ ವಿಮಾನ ಮತ್ತು ರೈಲುಗಳಲ್ಲಿ ಸಂಚಾರ ನಡೆಸಲು ಅವಕಾಶವಿದೆ. ಶಾಲೆ ಕಾಲೇಜು, ಶಿಕ್ಷಣ ಸಂಸ್ಥೆಗಳು ಸ್ಥಗಿತಗೊಳ್ಳಲಿವೆ. ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗ ಕೇಂದ್ರ, ಸ್ಪಾ, ಮನರಂಜನಾ ಕೇಂದ್ರಗಳು, ಸಾಮಾಜಿಕ, ಧಾರ್ಮಿಕ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗಳಿಗೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿದೆ.  ಮಂದಿರ, ಮಸೀದಿ, ಚರ್ಚ್​ಗಳಿಗೆ ಜನರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಮಂದಿರ, ಮಸೀದಿ, ಚರ್ಚ್​ಗಳಲ್ಲಿ ಪೂಜೆ ಪುನಸ್ಕಾರ ಇರಲಿದೆ.

ಗಾರ್ಮೆಂಟ್ಸ್​ ಹೊರತುಪಡಿಸಿ ಎಲ್ಲಾ ಕೈಗಾರಿಕೆಗಳಿಗೆ ಅವಕಾಶವಿದೆ. ಕೈಗಾರಿಕಾ ಸಿಬ್ಬಂದಿ ಕಡ್ಡಾಯವಾಗಿ ಐಡಿ ತೋರಿಸಬೇಕು. ಅಂತಾರಾಜ್ಯ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧವಿದೆ. ಕೃಷಿ ಸಂಬಂಧಿಸಿದ ಚಟುವಟಿಕೆಗೆ ಯಾವುದೇ ನಿರ್ಬಂಧವಿಲ್ಲ. ಮದುವೆ ಸಮಾರಂಭಗಳಲ್ಲಿ 50 ಜನರಿಗೆ ಮಾತ್ರ ಅವಕಾಶವಿದೆ. ಶವಸಂಸ್ಕಾರ ವೇಳೆ ಭಾಗಿಯಾಗಲು ಐವರಿಗೆ ಅವಕಾಶ ನೀಡಲಾಗಿದೆ.

ಈ ಅವಧಿಯಲ್ಲಿ ಒಬ್ಬನೇ ವ್ಯಕ್ತಿ ರಸ್ತೆಯಲ್ಲಿ ಓಡಾಡೋಕೆ ಬಿಡಲ್ಲ. ಪೊಲೀಸರಿಗೆ ಏನು ಹೇಳಬೇಕೋ ಹೇಳಿದ್ದೀನಿ. ಜನರು ಸಹಕಾರ ನೀಡದಿದ್ದರೆ ಇನ್ನೂ ಏನೆಲ್ಲಾ ಮಾಡಬೇಕು, ಅದನ್ನು ಮಾಡೋಕೆ ನಾನು ಸಿದ್ಧನಿದ್ದೇನೆ. ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾದ್ದು ಜನರ ಕರ್ತವ್ಯ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಲ್ಲರೂ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಮೇ 24ರವರೆಗೂ ಕೊರೊನಾ ಕರ್ಫ್ಯೂ ಅಥವಾ ಲಾಕ್​ಡೌನ್  ಜಾರಿಯಾಗಲಿದೆ

ಇದನ್ನೂ ಓದಿ:
Karnataka Lockdown: ಕರ್ನಾಟಕ ಲಾಕ್​ಡೌನ್​; ಕೊರೊನಾ ತಡೆಗೆ ಮೇ 10ರಿಂದ 24ರ ವರೆಗೆ ಸಂಪೂರ್ಣ ರಾಜ್ಯ ಸ್ತಬ್ಧ

ಅಣ್ಣಮ್ಮನ ಆಶೀರ್ವಾದದಿಂದ ಕೊರೊನಾ ಕಡಿಮೆಯಾಗುವ ನಂಬಿಕೆ ಇದೆ, ನಿಯಮ ಪಾಲನೆ ಮಾಡದಿದ್ದರೆ ಕಠಿಣ ಕ್ರಮ: ಯಡಿಯೂರಪ್ಪ

(Karnataka Imposes Full lockdown from 10th May here is What’s available and what’s not details in Kannada)

Published On - 7:42 pm, Fri, 7 May 21