ಜಾತಿ, ಧರ್ಮವನ್ನು ನೋಡಿ ಹಗರಣ ಬಯಲು ಮಾಡಿಲ್ಲ; ಸಂಸದ ತೇಜಸ್ವಿ ಸೂರ್ಯ ಪರ ರೇಣುಕಾಚಾರ್ಯ
ಸಂಸದ ತೇಜಸ್ವಿ ಸೂರ್ಯ ಜಾತಿ ಧರ್ಮ ನೋಡಿ ಹಗರಣ ಹೊರ ಹಾಕಿಲ್ಲ. ಜಮೀರ್ಗೆ ಮಾಧ್ಯಮದ ಮೂಲಕ ಎಚ್ಚರಿಕೆ ಕೊಡುತ್ತಿದ್ದೇನೆ. ಜಮೀರ್ ದೇಶ ಕಟ್ಟಿಲ್ಲ ಅವರು ದೇಶದ್ರೋಹಿ ಎಂದು ಜಮೀರ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ದಾವಣಗೆರೆ: ಸಂಸದ ತೇಜಸ್ವಿ ಸೂರ್ಯ ಜಾತಿ ಧರ್ಮ ನೋಡಿ ಹಗರಣ ಹೊರ ಹಾಕಿಲ್ಲ. ಜಮೀರ್ಗೆ ಮಾಧ್ಯಮದ ಮೂಲಕ ಎಚ್ಚರಿಕೆ ಕೊಡುತ್ತಿದ್ದೇನೆ. ಜಮೀರ್ ದೇಶ ಕಟ್ಟಿಲ್ಲ ಅವರು ದೇಶದ್ರೋಹಿ ಎಂದು ಜಮೀರ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ವೈದ್ಯರು, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದವರಿಗೆ ಬೇಲ್ ಕೊಡಿಸಿ ಹಣ ಕೊಟ್ಟು ಕಳುಹಿಸಿದ್ದೀರಿ. ಅಲ್ಪ ಸಂಖ್ಯಾತ ಬಂಧುಗಳು ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿಲ್ಲ. ನಿಮ್ಮ ಜನರಿಗೆ ಮೌಢ್ಯತೆ ಬಿತ್ತುವ ಬದಲು ವ್ಯಾಕ್ಸಿನ್ ಕೊಡಿಸುವಂತೆ ಪ್ರೋತ್ಸಾಹ ಮಾಡಿ. ಜಮೀರ್ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತಂತೆ ಮಾತನಾಡುತ್ತಿದ್ದ ಎಂಪಿ ರೇಣುಕಾಚಾರ್ಯ, ಶಾಸಕ ಸತೀಶ್ ರೆಡ್ಡಿ ಪ್ರಕರಣದಲ್ಲಿ ಭಾಗಿಯಾಗಿಲ್ಲ, ಅಧಿಕಾರಿ ಮೇಲೆ ಹಲ್ಲೆ ನಡೆಸಿಲ್ಲ ಸುಮ್ಮನೆ ಅವರ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಅವರು ಕೂಡ ಬೆಡ್ ಬ್ಲಾಕಿಂಗ್ ದಂದೆಯನ್ನು ಹೊರಗೆಳೆದಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆಡಳಿತ ನಡೆಸಲು ವೈಫಲ್ಯವಾದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಮುಖ್ಯಮಂತ್ರಿಗಳು ಈ ವಯಸ್ಸಿನಲ್ಲಿ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ನಿಮಗೆ ವಯಸ್ಸು ಇದೆ ನೀವು ಏಕೆ ಈ ರೀತಿ ಮಾಡುತ್ತಿದ್ದೀರಿ ಎನ್ನುವುದು ಮಾತ್ರ ನನ್ನ ಪ್ರಶ್ನೆ ಎಂದು ಪ್ರಶ್ನಿಸಿದ್ದಾರೆ.
ಜನರಿಗೆ ಕೊರೊನಾ ಕುರಿತಾಗಿ ಸೂಚನೆ ನೀಡಿದ ರೇಣುಕಾಚಾರ್ಯ ಅವರು, ರಾಮೇಶ್ವರದಲ್ಲಿ ನೂರೈವತ್ತು ಜನರಿಗೆ ಆರೋಗ್ಯ ಏರು ಪೇರಾಗಿದೆ. ಇಂದು ಒಬ್ಬ ವೃದ್ದ ಬೆಳಗ್ಗೆ ಸಾವಿಗೀಡಾಗಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ ಅಲ್ಲಿನ ಜನರಿಗೆ ತಪಾಸಣೆಗೆ ಹಮ್ಮಿಕೊಳ್ಳಲಾಗಿದೆ. ಮದುವೆಗಳಲ್ಲಿ ಐನೂರು ಜನಕ್ಕಿಂತ ಜಾಸ್ತಿ ಜನ ಇರುತ್ತಾರೆ. ಜನರ ನಿರ್ಲಕ್ಷ್ಯದಿಂದ ಸಾವು ನೋವುಗಳು ಆಗುತ್ತಿವೆ. ಆರೋಗ್ಯದಲ್ಲಿ ಏರುಪೇರು ಆದ ತಕ್ಷಣ ಚಿಕಿತ್ಸೆ ಪಡೆಯಿರಿ ಎಂದು ಸೂಚನೆ ನೀಡಿದ್ದಾರೆ.