AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇದ್ದಲ್ಲೇ ನಿಮ್ಮ ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡ್ಬಹುದು

ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸಲು ಮುಂದಾಗಿದೆ.ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್​ ವೇದಿಕೆಯಲ್ಲಿ ನೀಡಲು ಮುಂದಾಗಿದ್ದು, ಇದರೊಂದಿಗೆ ನೀವು ಇನ್ನು ಮುಂದೆ ವಾಟ್ಸಾಪ್ ಮೂಲಕವೂ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್‌ ಪ್ರಯಾಣದ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ. ಅದು ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.

KSRTC ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇದ್ದಲ್ಲೇ ನಿಮ್ಮ ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡ್ಬಹುದು
Ksrtc Bus
ರಮೇಶ್ ಬಿ. ಜವಳಗೇರಾ
|

Updated on: Sep 10, 2026 | 8:17 PM

Share

ಬೆಂಗಳೂರು, (ಸೆಪ್ಟೆಂಬರ್ 10): ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರಕ್ಕೆ100 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೀಕೃತ ಮೊಬೈಲ್ ಆ್ಯಪ್ ಹಾಗೂ ವಾಟ್ಸಾಪ್ ಟಿಕೆಟಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಲಾಗಿದೆ. ಕರ್ನಾಟಕ ಮೊಬಿಲಿಟಿ ಆ್ಯಪ್‌ಗೆ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಸೇವೆ ಏಕೀಕರಣ ಮಾಡಲಾಗಿದ್ದು, ಇನ್ಮುಂದೆ KSRTC, NWKRTC, KKRTC ಹಾಗೂ BMTC ಸೇವೆಗಳು ಒಂದೇ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ವಾಟ್ಸಾಪ್ ಮೂಲಕವೂ ಬಸ್ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಇದ್ದಲ್ಲೇ ಬಸ್ ಟಿಕೆಟ್ ಮಾಡಿಕೊಳ್ಳಬಹುದು.

ವಾಟ್ಸಾಪ್​ ಮೂಲಕವೂ ಬುಕ್ಕಿಂಗ್​ ಅವಕಾಶ

ವಾಟ್ಸಾಪ್​ ಮೂಲಕವೂ ಬುಕ್ಕಿಂಗ್​ ಅವಕಾಶ ನೀಡಿದ್ದು, ವಾಟ್ಸಾಪ್‌ಗೆ ಮೆಸೇಜ್ ಕಳುಹಿಸಿದ ಬಳಿಕ ಸಂವಾದಾತ್ಮಕ ವ್ಯವಸ್ಥೆ ಮೂಲಕ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಪ್ರಯಾಣದ ಸ್ಥಳ, ಗಮ್ಯಸ್ಥಾನ, ದಿನಾಂಕ ಆಯ್ಕೆ ಮಾಡಿ ಬಸ್ ಹುಡುಕಲು ಅವಕಾಶ ನೀಡಲಾಗಿದೆ. ಬಸ್ ಆಯ್ಕೆ ಬಳಿಕ ಪ್ರಯಾಣಿಕರ ವಿವರ ನಮೂದಿಸಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದಷ್ಟೇ ಅಲ್ಲದೇ UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ವಾಲೆಟ್ ಮೂಲಕ ಪಾವತಿ ಸೌಲಭ್ಯ ಒದಗಿಸಲಾಗಿದ್ದು, ಪಾವತಿ ಯಶಸ್ವಿಯಾದ ಬಳಿಕ ವಾಟ್ಸಾಪ್ ಹಾಗೂ ಇ-ಮೇಲ್ ಮೂಲಕ ಇ-ಟಿಕೆಟ್ ಪಡೆಯಬಹುದಾಗಿದೆ. ಇನ್ನು, ವಾಟ್ಸಾಪ್‌ನಲ್ಲೇ ಬುಕ್ ಮಾಡಿದ ಟಿಕೆಟ್ ರದ್ದುಪಡಿಸಲೂ ಸಹ ಅವಕಾಶ ನೀಡಲಾಗಿದ್ದು, ಟಿಕೆಟ್ ರದ್ದತಿಗೆ PNR, ಮೊಬೈಲ್ ಸಂಖ್ಯೆ ಹಾಗೂ Transaction Password ಅಗತ್ಯ ಎಂದು ರಾಜ್ಯ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಕರ್ನಾಟಕದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ-ಮಾತಿನ ಚಿಕಿತ್ಸಾ ಸೇವೆ; ಆಡಿಯಾಲಜಿಸ್ಟ್ ನೇಮಕಕ್ಕೆ ಸರ್ಕಾರದ ಆದೇಶ

ವಾಟ್ಸಾಪ್​​ನಲ್ಲಿ ಟಿಕೆಟ್ ಬುಕಿಂಗ್‌ ಮಾಡುವ ವಿಧಾನ

ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಮೂಲಕ KSRTC, NWKRTC ಹಾಗೂ KKRTC ಬಸ್‌ಗಳ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರು  6364940880 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬುಕ್ಕಿಂಗ್ ಆರಂಭಿಸಬಹುದು. ನಂತರ ವಾಟ್ಸಾಪ್‌ನಲ್ಲಿಯೇ ಲಭ್ಯವಾಗುವ ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಕಾಯ್ದಿರಿಸುವಿಕೆಯ ಸಂಪೂರ್ಣ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲಿದೆ.

  • ಪ್ರಯಾಣ ಆರಂಭದ ಸ್ಥಳ, ಹೋಗಬೇಕಾದ ಸ್ಥಳ ಹಾಗೂ ಪ್ರಯಾಣದ ದಿನಾಂಕ ಆಯ್ಕೆ ಮಾಡಿ ಲಭ್ಯವಿರುವ ಬಸ್ ಸೇವೆಗಳನ್ನು ಹುಡುಕಬೇಕು.
  • ನಿಮ್ಮ ಪ್ರಯಾಣದ ಆದ್ಯತೆಗೆ ಅನುಗುಣವಾಗಿ ಸೂಕ್ತವಾದ ಬಸ್ ಆಯ್ಕೆ ಮಾಡಬೇಕು.
  •  ನಂತರ ಹಂತದಲ್ಲಿ ಪ್ರಯಾಣಿಕರ ವಿವರಗಳನ್ನು ನಮೂದಿಸಬೇಕು.
  •  ಟಿಕೆಟ್ ವಿವರಗಳನ್ನು ಪರಿಶೀಲಿಸಿ ಹಣ ಪಾವತಿ ಪೂರ್ಣಗೊಳಿಸಿದರೆ ಟಿಕೆಟ್ ಬುಕಿಂಗ್ ಖಚಿತವಾಗಲಿದೆ.

ಹಣ ಪಾವತಿ ಹೇಗೆ?

ವಾಟ್ಸಾಪ್, ಇ-ಮೇಲ್ ರಿಪ್ಲೈ ಟಿಕೆಟ್ ಬುಕ್ ಬಳಿಕ ಹಣ ಪಾವತಿಗಾಗಿ ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್‌ಗಳು ಸೇರಿದಂತೆ ವಿವಿಧ ಪಾವತಿ ವಿಧಾನ ಬಳಕೆಗೆ ಅವಕಾಶ ಇದೆ. ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್ ದೃಢೀಕರಣ ಹಾಗೂ ಇ-ಟಿಕೆಟ್ ಅನ್ನು ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಹಂಚಿಕೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಸಹಾಯವಾಣಿ ಕೇಂದ್ರ 080-26252625 (24×7) ಅಥವಾ AWATAR ಸೆಲ್ ಅನ್ನು 7760990034 / 7760990035 (ಬೆಳಿಗ್ಗೆ 7.00 ರಿಂದ ರಾತ್ರಿ 10.00 ಗಂಟೆವರೆಗೆ) ಸಂಖ್ಯೆಗಳಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us