Lockdown Package: 2ನೇ ಹಂತದ ಲಾಕ್​ಡೌನ್ ಘೋಷಣೆ ವೇಳೆ ಸ್ವತಃ ಸಿಎಂ ಯಡಿಯೂರಪ್ಪರಿಂದಲೇ ಪ್ಯಾಕೇಜ್ ಘೋಷಣೆ; ಸಚಿವ ಆರ್ ಅಶೋಕ್

|

Updated on: May 18, 2021 | 3:43 PM

ತೌಕ್ತೆ ಚಂಡಮಾರುತದಿಂದ ಹಾನಿಗೀಡಾದ ತೆಂಗಿನ ಗುಂಡಿ, ಹೆಗ್ಗಾರ, ಮಾವಿನಕುರ್ವೆ ಮುಂತಾದ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಆರ್.ಅಶೋಕ್, 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಸಾಧ್ಯತೆ ಇರುವ ಕಾರಣ ಹೆಚ್ಚೆಚ್ಚು ಮಕ್ಕಳ ಆಸ್ಪತ್ರೆ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದರು.

Lockdown Package: 2ನೇ ಹಂತದ ಲಾಕ್​ಡೌನ್ ಘೋಷಣೆ ವೇಳೆ ಸ್ವತಃ ಸಿಎಂ ಯಡಿಯೂರಪ್ಪರಿಂದಲೇ ಪ್ಯಾಕೇಜ್ ಘೋಷಣೆ; ಸಚಿವ ಆರ್ ಅಶೋಕ್
ಸಚಿವ ಆರ್. ಅಶೋಕ್
Follow us on

ಕಾರವಾರ: ಮಹಾರಾಷ್ಟ್ರ, ಕೇರಳ, ದೆಹಲಿಯಲ್ಲಿ ರಾಜ್ಯದಲ್ಲೂ ಲಾಕ್‌ಡೌನ್ ಮುಂದುವರಿಸಿದರೆ ಉತ್ತಮ. 2ನೇ ಹಂತದ ಲಾಕ್​ಡೌನ್ ಘೋಷಣೆ ಆಗುತ್ತಿದ್ದಂತೆಯೇ ಸ್ವತಃ ಮುಖ್ಯಮಂತ್ರಿಗಳೇ ಪ್ಯಾಕೇಜ್ ಘೋಷಣೆ ಮಾಡುತ್ತಾರೆ. ಸದ್ಯದ ಪರಿಸ್ಥಿತಿ ಅವಲೋಕಿಸಿ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಚಿವ ಆರ್. ಅಶೋಕ್ ತಿಳಿಸಿದರು.

ತೌಕ್ತೆ ಚಂಡಮಾರುತದಿಂದ ಹಾನಿಗೀಡಾದ ತೆಂಗಿನ ಗುಂಡಿ, ಹೆಗ್ಗಾರ, ಮಾವಿನಕುರ್ವೆ ಮುಂತಾದ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಆರ್.ಅಶೋಕ್, 3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಸಾಧ್ಯತೆ ಇರುವ ಕಾರಣ ಹೆಚ್ಚೆಚ್ಚು ಮಕ್ಕಳ ಆಸ್ಪತ್ರೆ ತೆರೆಯಲು ನಿರ್ಧಾರ ಮಾಡಲಾಗಿದೆ. ಕೊರೊನಾ ಹಳ್ಳಿಗಳಿಗೆ ತಲುಪಿದ್ದರಿಂದ ವೈದ್ಯರನ್ನು ಹಳ್ಳಿಗಳಿಗೆ ಕಳುಹಿಸುತ್ತಿದ್ದೇವೆ. 15 ವ್ಯಾನ್ ಮುಖಾಂತರ ಪರ್ಯಾಯ ದಿನಗಳಲ್ಲಿ ವೈದ್ಯರು ಹಳ್ಳಿಗಳಿಗೆ ತೆರಳಿ ಪರಿಶೀಲಿಸಲಿದ್ದಾರೆ. ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಕೊವಿಡ್ 3ನೇ ಅಲೆ ತಡೆಯಲು ಸರ್ಕಾರ ಸನ್ನದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸರಕಾರ ಟೆಸ್ಟಿಂಗ್ ನಡೆಸುತ್ತಿಲ್ಲ ಎಂಬ ವಿರೋಧ ಪಕ್ಷದ ನಾಯಕರ ಟೀಕೆಯಲ್ಲಿ ಯಾವುದೇ ಹುರುಳಿಲ್ಲ. ವಿರೋಧ ಪಕ್ಷಗಳು ಈ ಸಂದರ್ಭವನ್ನು ರಾಜಕೀಯ ಗಾಳವಾಗಿ ಮಾಡುತ್ತಿವೆ. ಕೊರೊನಾ ಟೀಕೆ, ಟ್ವಿಟ್ಟರ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಹೊರತು ಅವರಿಗೆ ಸಾಮಾಜಿಕ‌ ಕಳಕಳಿಯಿಲ್ಲ. ವಿರೋಧ ಪಕ್ಷದ ಮುಖಂಡರು ನೂರು ಕೋಟಿ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ವಿರೋಧ ಪಕ್ಷದವರು ಶಾಸಕರ ಅನುದಾನದ ಬಗ್ಗೆ ಹೇಳ್ತಿದ್ದು, ಅದನ್ನು ಸರಕಾರವೇ ಅವರಿಗೆ ನೀಡಿದೆ. ಸರಕಾರದ ಹಣವನ್ನೇ ಅವರು ಸರಕಾರಕ್ಕೆ ನೀಡುತ್ತಿರುವುದಾಗಿ ಹೇಳುತ್ತಿರೋದಷ್ಟೇ ಎಂದು ಸಚಿವ ಆರ್.ಅಶೋಕ್ ವಿಪಕ್ಷ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಮತ್ತು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಸಚಿವ ಆರ್. ಅಶೋಕ್ ಅವರ ಈ ಹೇಳಿಕೆಯ ಬೆನ್ನಲ್ಲೇ ನಾಳೆ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ ನಡೆಯಲಿರುವ ಸಿಎಂ ಯಡಿಯೂರಪ್ಪ ಅವರ ಪತ್ರಿಕಾಗೋಷ್ಠಿಯಲ್ಲಿ ಲಾಕ್‌ಡೌನ್‌ ಮುಂದುವರಿಕೆ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ ಎಂಬ ಸೂಚನೆ ದೊರೆತಿದೆ. ಈ ವಾರ ಸಚಿವ ಸಂಪುಟ ಸಭೆ ನಿಗದಿಯಾಗಿಲ್ಲ. ಹೀಗಾಗಿ ಹಿರಿಯ ಸಚಿವರ ಜೊತೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಾಳೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೊವಿಡ್​ನಿಂದ ಜನರನ್ನು ಉಳಿಸಲು ಏನ್ಮಾಡ್ತಿದ್ದೀರಾ? ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಪ್ರಶ್ನೆ

​ ಬಿ.ವಿ.ಶ್ರೀನಿವಾಸ್​, ಬಿಜೆಪಿ ಎಂಪಿ ಗೌತಮ್​ ಗಂಭೀರ್​ಗೆ ಕ್ಲೀನ್​ಚಿಟ್​ ಕೊಟ್ಟ ದೆಹಲಿ ಪೊಲೀಸರ ಬಗ್ಗೆ ಹೈಕೋರ್ಟ್ ಅಸಮಾಧಾನ; ಹೆಚ್ಚಿನ ತನಿಖೆಗೆ ಸೂಚನೆ

(Karnataka Lockdown package will announce soon by CM BS Yediyurappa says Revenue minister R Ashok)