AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ನಿಂದ ಜನರನ್ನು ಉಳಿಸಲು ಏನ್ಮಾಡ್ತಿದ್ದೀರಾ? ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಪ್ರಶ್ನೆ

ಸರ್ಕಾರದ ನಿರೀಕ್ಷಿತ ಮಟ್ಟಕ್ಕೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದು ಸಹ ಸಿಎಂ ಯಡಿಯೂರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೊವಿಡ್​ನಿಂದ ಜನರನ್ನು ಉಳಿಸಲು ಏನ್ಮಾಡ್ತಿದ್ದೀರಾ? ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಪ್ರಶ್ನೆ
ಬಿ.ಎಸ್​.ಯಡಿಯೂರಪ್ಪ
guruganesh bhat
|

Updated on: May 17, 2021 | 6:11 PM

Share

ಬೆಂಗಳೂರು: “ರಾಜ್ಯದಲ್ಲಿ ಇಷ್ಟೊಂದು ಕೊವಿಡ್ ಕೇಸ್ ಬರ್ತಿದೆ, ಜನರನ್ನು ಉಳಿಸಲು ಏನ್ಮಾಡ್ತಿದ್ದೀರಾ? ದಿನೇದಿನೆ ಕೊರೊನಾ ಕೇಸ್‌ಗಳು ಹೆಚ್ಚುತ್ತಲೇ ಇವೆ. ನಾಳೆ ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್‌ ಇದೆ. ಹೀಗಾದ್ರೆ ನಾಳೆ ಪ್ರಧಾನಿಗೆ ನೀವು ಏನು ಉತ್ತರ ನೀಡ್ತೀರಿ?” ಎಂದು ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜತೆಗಿನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ. ಲಾಕ್​ಡೌನ್​ನಿಂದ ಏನಾದರೂ ಅನುಕೂಲವಾಗಿದೆಯಾ? ಎಂದು ಸಹ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಜನರು ಕೊವಿಡ್ ನಿಯಮ ಪಾಲಿಸುತ್ತಿದ್ದಾರಾ? ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಿದ್ದರಿಂದ ಕೊವಿಡ್ ತಡೆಯಲು ಸಮಸ್ಯೆ ಉಂಟಾಗಿದೆಯಾ? ನಿಮ್ಮ ಸಮಸ್ಯೆ ಏನೆಂದು ವಿವರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಹಾಕಿದ್ದಾರೆ.

ಸರ್ಕಾರದ ನಿರೀಕ್ಷಿತ ಮಟ್ಟಕ್ಕೆ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದು ಸಹ ಸಿಎಂ ಯಡಿಯೂರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವೆಂಟಿಲೇಟರ್, ಬೆಡ್ ಇಲ್ಲದೆ ಜನ ಸಾವನ್ನಪ್ಪುತ್ತಿದ್ದಾರೆ ಎಂಬ ಅಂಶ ಸಭೆಯಲ್ಲಿ ಪ್ರತಿಧ್ವನಿಸಿದೆ. ಆದರೆ ಸಿಎಂ ಯಡಿಯೂರಪ್ಪ ಅವರೇ ಜಿಲ್ಲೆಗಳಲ್ಲಿ ಕೊವಿಡ್ ಹೆಚ್ಚಳವಾಗಲು ಜಿಲ್ಲಾಧಿಕಾರಿಗಳಿಗೆ ಕಾರಣ ಕೇಳಿದರೂ ಜಿಲ್ಲಾಧಿಕಾರಿಗಳು ತುಟಿ ಪಿಟಿಕ್ ಎನ್ನುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರದಿಂದ ಅಗತ್ಯ ಇರುವ ಸಹಾಯದ ಕುರಿತು ಸಹ ಜಿಲ್ಲಾಧಿಕಾರಿಗಳು ಮನವಿ ಮಾಡಿಲ್ಲ. ಕೇವಲ  ಅಗತ್ಯ ಇರುವ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ವರದಿ ಒಪ್ಪಿಸುತ್ತಿದ್ದಾರೆ.

ಡಿಸಿಎಂ ಡಾ.ಅಶ್ವತ್ಥ್ ನಾರಾಯಣ, ಸಚಿವ ಅರವಿಂದ ಲಿಂಬಾವಳಿ, ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವ ಕೆ.ಗೋಪಾಲಯ್ಯ, ಸಿಎಸ್ ಪಿ. ರವಿಕುಮಾರ್, ಡಿಜಿ ಐಜಿಪಿ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ರಾಜ್ಯ ಸರ್ಕಾರದ ಎಸಿಎಸ್ ವಂದನಾ ಶರ್ಮಾ, ಆರೋಗ್ಯ ಇಲಾಖೆ ಎಸಿಎಸ್ ಜಾವೇದ್ ಅಖ್ತರ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ರಾಜ್ಯದ ಕೊವಿಡ್‌ ಸ್ಥಿತಿಗತಿ ಬಗ್ಗೆ ಎಚ್​.ಡಿ.ಕುಮಾರಸ್ವಾಮಿ ಆನ್‌ಲೈನ್‌ ಸಮಾಲೋಚನೆ; 2ಡಿಜಿ ಔ‍ಷಧ ಜೆಡಿಎಸ್‌ನಿಂದ ಉಚಿತವಾಗಿ ಹಂಚಲು ಚಿಂತನೆ

ವೈದ್ಯಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರ್​.ಅಶೋಕ್; ಹಳ್ಳಿಯಲ್ಲೇ ನಡೆಯಲಿದೆ ಕೊವಿಡ್ ಪರೀಕ್ಷೆ (CM Yeddyurappa questioned District Collectors to do you want to save people from Covid 19 in virtual meeting)